Breaking News

ಚುನಾವಣೆ ಬಂದಾಗ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಗ್ಗೆ,ಸ್ಪೇಶಲ್ ಕೇರ್ ತಗೋತೀನಿ- ರಮೇಶ್ ಜಾರಕಿಹೊಳಿ

ಬೆಳಗಾವಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಬೆಳಗಾವಿ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆಯಿತು.

ತುಂಬಿದ ಸಭೆಯಲ್ಲಿ ಬಿಜೆಪಿ ಸರ್ಕಾರದ ಸಾಧನೆ ಕುರಿತ ವಿಚಾರದಲ್ಲಿ ನಾಯಕರಿಗೆ ಶಾಸಕಿ ಮಾತಿನೇಟು ನೀಡಿದರು.ಈ ಸಂಧರ್ಭದಲ್ಲಿ
ಕೇಂದ್ರ ಸಚಿವ ಸುರೇಶ್ ಅಂಗಡಿ, ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ವಾಗ್ವಾದ ನಡೆಯಿತು
ಕೇಂದ್ರ ಸರ್ಕಾರದ ಅನುದಾನದ ವಿಚಾರವಾಗಿ ಆರೋಪ ಪ್ರತ್ಯಾರೋಪ ನಡೆಯಿತು

‘ಉದ್ಯೋಗ ಕಳೆದುಕೊಂಡು ಸಾಕಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ’ ಪೆಟ್ರೋಲ್ ಪಂಪ್ ಹಾಗೂ ಗ್ಯಾಸ್ ಸಿಲಿಂಡರ್ ಮೇಲೆ ಪೋಟೊ ಹಾಕಿಸಿದ್ದನ್ನ ಬಿಟ್ಟರೆ ಎನೂ ಸಾಧನೆ ಇಲ್ಲ’ ಇಪ್ಪತ್ತು ಲಕ್ಷ ಕೋಟಿ ಅನೌನ್ಸ್ ಮಾಡಿ ಪಬ್ಲಿಸಿಟಿ ತೆಗೆದುಕೊಂಡಿದ್ದಿರಿ’ ಒಬ್ಬ ರೈತರಿಗೆ ಪರಿಹಾರ ಸಿಕ್ಕಿಲ್ಲ ಯಾರಾದರೂ ಒಬ್ಬರು ಈ ಕುರಿತು ಹೇಳಲಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಭೆಯಲ್ಲೇ ಚಾಲೆಂಜ್ ಮಾಡಿದರು.

ಶುದ್ದ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ ಸಿದ್ದರಾಮಯ್ಯ ಪಬ್ಲಿಸಿಟಿ ಸಲುವಾಗಿ ಶುದ್ದ ನೀರಿನ ಘಟಕ ಮಾಡಿದ್ದರು ಅಂತಾ ಕೇಂದ್ರ ಸಚಿವ ಸುರೇಶ್ ಅಂಗಡಿ,ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ತಿರಗೇಟು ನೀಡಿದ್ರು

ಹಿಂದಿನ ಸರ್ಕಾರದಲ್ಲಿ ಎಲ್ಲಾ ಕೆಲಸ‌ ಮಾಡಿದ್ದಾರೆ ಅದರ ಬಗ್ಗೆ ಮಾತಾಡೋದ ಬೇಡ, ನಿಮ್ಮ ಸರ್ಕಾರದ ಅವಧಿಯಲ್ಲಿ ಎರಡುಕೋಟಿ ಉದ್ಯೋಗ ಕೊಡ್ತೇನಿ ಅಂದ್ರಿ ಶೇಕಡಾ 46ರಷ್ಟು ಜನ ನೌಕರಿ ಕಳೆದುಕೊಂಡಿದ್ದಾರೆ ಬಿಜೆಪಿಯಲ್ಲಿ
ಷೋ ಬಾಜಿ ಎಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಕ್ಕೆ ತೆರೆ ಎಳೆದರು.

ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ .ಕೊಳಚೆಯಲ್ಲಿ ಕಲ್ಲು ಹೊಡೆದರೆ ಏನಾಗುತ್ತೆ, ಅದಕ್ಕಷ್ಟೇ ? ಶಾಸಕರಿಗೆ ಅನುಭವದ ಕೊರತೆ ಇದ್ದಂಗೆ ಕಾಣುತ್ತದೆ. ಬರಿ ಲೆಟರ್ ಕೊಟ್ಟು, ಮೀಟಿಂಗ್ ಮಾಡಿ ಶೋ ಆಫ್ ಮಾಡುವ ಸರ್ಕಾರ ನಮ್ಮದಲ್ಲ. ನಾವು ಪೂರ್ಣ ಪ್ರಮಾಣದಲ್ಲಿ ಒಳ್ಳೆಯ ಉದ್ದೇಶಕ್ಕೆ ಕೆಲಸ ಮಾಡುತ್ತಿದ್ದೇವೆ. ಯಾವುದೇ ಸರ್ಕಾರ ಇರಲಿ ನಾವು ಜನಪ್ರತಿನಿಧಿಗಳು, ಸರ್ಕಾರದ ಪರವಾಗಿರಬೇಕು.ಬುದ್ದಿ ಇಲ್ಲದವರು ಚಾಲೆಂಜ್ ಮಾಡ್ತಾರೆ, ಅವರ ಪಕ್ಷದ ಬಗ್ಗೆ ನಾವು‌ ಮಾತನಾಡಲ್ಲ, ಭಾರತೀಯರು ಪ್ರಜ್ಞಾವಂತರು, ಹೋಮ ಹವನಕ್ಕೆ ಮಾರು ಹೋಗಲ್ಲ,ಇದು ಬೆಳಗಾವಿ ತಾಲ್ಲೂಕಿನ ಅಭಿವೃದ್ಧಿಯ ಸಭೆ ,ಈ ಸಭೆಯಲ್ಲಿ ರಾಜಕಾರಣ ಮಾಡುವದಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಗ್ಗೆ ಎಲೆಕ್ಷನ್ ವೇಳೆ ಸ್ಪೆಷಲ್ ಕೇರ್ ತಗೋತಿನಿ,ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿ ತಾಲೂಕಿಗೆ ವಿಶೇಷ ಕಾಳಜಿ ವಹಿಸಿದ ಬಗ್ಗೆ ರಾಜಕೀಯವಾಗಿ ತೋರಿಸ್ತೀನಿ, ಎಂದರು ರಮೇಶ್ ಜಾರಕಿಹೊಳಿ.ಆರ್.ಶಂಕರ್‌ಗೆ ವಿಧಾನ ಪರಿಷತ್ ಟಿಕೆಟ್ ನೂರಕ್ಕೆ ನೂರು ಸಿಗುತ್ತೆ ಎಂದು ನಮಗೆ ಆಶಾಭಾವನೆ ಇದೆ ಎಂದ ರಮೇಶ್ ಜಾರಕಿಹೊಳಿ ಎಂಟಿಬಿ, ಹೆಚ್.ವಿಶ್ವನಾಥ್‌‌ಗೂ ಹೈಕಮಾಂಡ್ ಚರ್ಚಿಸಿ ಟಿಕೆಟ್ ನೀಡುವ ಆಶಾಭಾವನೆ ಇದೆ ಎಂದರು

ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ‌ ನಿರ್ಣಯ ಕೈಗೊಳ್ಳುತ್ತಾರೆ.ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ‌ ಕೈಗೊಂಡ ನಿರ್ಣಯಕ್ಕೆ ಬದ್ಧರಾಗಿದ್ದೇವೆ,ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಬೀಮ್ಸ್ ಕೋವಿಡ್ ವಾರ್ಡ್‌ನಲ್ಲಿ ಅವ್ಯವಸ್ಥೆ ಬಗ್ಗೆ ಡಿಸಿ ಜೊತೆ ಮಾತನಾಡಿದ್ದೇನೆ.ಯಾರಾದರೂ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ. ಹಲವು ತಾಲೂಕು ಪಂಚಾಯತ್ ಸದಸ್ಯರು ಫೋನ್‌ನಲ್ಲಿ ದೂರು ನೀಡಿದ್ರು.ಅದಕ್ಕೆ ಸಭೆ ಕರೆದಿದ್ದೆ, ಆದರೆ ಯಾರೂ ಮಾತನಾಡಲಿಲ್ಲ, ದೂರು ನೀಡಿದವರು ಏಕೆ ಮಾತನಾಡಿಲ್ಲ ಎಂಬುದನ್ನು ಕೇಳ್ತೀನಿ, ಬೆಳಗಾವಿ ತಾಲೂಕು ಪ್ರಗತಿ ಪರಿಶೀಲನಾ ಸಭೆ ಬಳಿಕ ರಮೇಶ್ ಜಾರಕಿಹೊಳಿ‌ ಹೇಳಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *