ಬೆಳಗಾವಿ- ಹೆಬ್ಬುಲಿ ಚಿತ್ರದ ಪ್ರಮೋಶನ್ ಗಾಗಿ ಬೆಳಗಾವಿಗೆ ಬಂದು ಅಭಿಮಾನಿಗಳನ್ನು ಭೇಟಿಯಾಗುವದಾಗಿ ಮಾತು ಕೊಟ್ಟಿದ್ದ ಚಿತ್ರ ನಟ ಸುದೀಪ ಎರಡು ತಿಂಗಳಾದರೂ ಬೆಳಗಾವಿಗೆ ಬರಲಿಲ್ಲ ಅಂತಾ ಮನನೊಂದ ಭೂತರಾಮಟ್ಟಿಯ ಇಬ್ಬರು ಸುದೀಪ ಅಭಿಮಾನಿಗಳು ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡಿ ಬುಧವಾರ ಸಂಜೆ ಅಸ್ವಸ್ಥರಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ
ಭೂತರಾಮಟ್ಟಿಯ ಸಚೀನ್ ಬಾಳಪ್ಪ ಪಾಟೀಲ ಮತ್ತು ಪ್ರವೀಣ ಯಲ್ಲಪ್ಪ ಪಾಟೀಲ ಇಬ್ಬರು ಕಳೆದ ಆರು ದಿನಗಳಿಂದ ಭೂತರಾಮಟ್ಟಿಯ ಮುಕ್ತಿ ಮಠದ ಬಳಿ ಚಿತ್ರ ನಟ ಸುದೀಪ ಬೆಳಗಾವಿಗೆ ಬರಬೇಕೆಂದು ಒತ್ತಾಯಿಸಿ ಊಟ ನೀರು ತ್ಯೆಜಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು ಬುಧವಾರ ಸಂಜೆ ಅಸ್ವಸ್ಥರಾದ ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ
ಸುದೀಪ ಅಭಿನಯದ ಹೆಬ್ಬುಲಿ ಚಿತ್ರ ಬಿಡುಗಡೆಯಾದ ಸಂಧರ್ಭದಲ್ಲಿ ಸುದೀಪ ಚಿತ್ರದ ಪ್ರಮೋಶನ್ ಗಾಗಿ ಬೆಳಗಾವಿಗೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ಕೊನೆಯ ಘಳಿಗೆಯಲ್ಲಿ ಸುದೀಪ ಬಾರದೇ ಇರುವದರಿಂದ ಮನನೊಂದು ಇದೇ ಹುಚ್ಚಾಭಿಮಾನಿಗಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮ ಹತ್ಯೆಗೆ ಪ್ರಯತ್ನಿಸಿದ್ದರು
ಈ ಘಟನೆ ಸುದ್ಧಿವಾಹಿನಿಗಳಲ್ಲಿ ಪ್ರಸಾರವಾಗಿ ಸುದೀಪ ಸುದ್ಧಿ ವಾಹಿನಿಗಳ ಮೂಲಕ ಇವರನ್ನು ಸಂಪರ್ಕಿಸಿ ಶೀಘ್ರದಲ್ಲಿಯೇ ಬೆಳಗಾವಿಗೆ ಬಂದು ಬೇಟಿಯಾಗುವದಾಗಿ ಮಾತು ಕೊಟ್ಟಿದ್ದರು ಆದರೆ ಎರಡು ತಿಂಗಳಾದರೂ ಸುದೀಪ ಬೆಳಗಾವಿಗೆ ಬಾರದೇ ಇರುವದರಿಂದ ಈ ಅಭಿಮಾನಿಗಳು ತಮ್ಮ ನೆಚ್ಚಿನ ಹಿರೋಗಾಗಿ ತಮ್ಮ ಜೀವದ ಹಂಗು ತೊರೆದು ಉಪವಾಸ ಮಾಡುತ್ತಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ