ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಿಸುವದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದ್ದರು ಆದರೆ ಈ ಆಸ್ಪತ್ರೆಯ ನಿರ್ಮಾಣಕ್ಕಾಗಿ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅನುದಾನ ಪೂರೈಸುವ ಸಾಧ್ಯತೆ ಇದೆ
ಬೆಳಗಾವಿ ನಗರದಲ್ಲಿ ಸುಸಜ್ಜಿತವಾದ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಿಸಲು ಭೀಮ್ಸ 162 ಕೋಟಿಯ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಇದಕ್ಕೆ ಅನುದಾನ ಬಿಡುಗಡೆ ಯಾಗುವ ನೀರಿಕ್ಷೆ ಇದೆ ಅಂತಾರೆ ಭೀಮ್ಸ ನಿರ್ದೇಶಕ ಕಳಸದ
ಆಸ್ಪತ್ರೆ ನಿರ್ಮಾಣ ಎಲ್ಲಿ..?
ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ನಿಂತು ನೋಡಿದರೆ ಜಿಲ್ಲಾ ಆಸ್ಪತ್ರೆಯ ಆವರಣದ ಮೂಲೆಯಲ್ಲಿ ಹಳೆಯ ಕಟ್ಟಡವೊಂದು ಕಾಣಿಸುತ್ತದೆ ಇದು ಹಳೆಯದಾದ ಮತ್ತು ನಿರುಪಯುಕ್ತವಾದ ಧನ್ವಂತರಿ ಹಾಸ್ಟೇಲ್ ಕಟ್ಟಡ ಈ ಕಟ್ಟಡವನ್ನು ನೆಲಸಮ ಮಾಡಿ ಇದೇ ಜಾಗದಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಆರು ಮಹಡಿಗಳ ಕಟ್ಟಡ ತೆಲೆಎತ್ತಲಿದೆ
ಯಾವ.ಯಾವ ಹೆಚ್ಚುವರಿ ಸೌಲಭ್ಯ ಸಿಗಬಹುದು.?
ಬೆಳಗಾವಿಯಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣ ವಾದರೆ ಬೆಳಗಾವಿ ಜಿಲ್ಲೆಯ ಜನತೆಗೆ ಹತ್ತಕ್ಕೂ ಹೆಚ್ಚು ಸ್ಪೇಶ್ಯಾಲಿಟಿ ಚಿಕಿತ್ಸೆಗಳು ಸಿಗಲಿವೆ.ಹೃದಯ ರೋಗ,ಕಿಡ್ನಿ,ಲಿವರ್ ಕ್ಯಾನ್ಸರ್ ಹಾಗು ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಹೈಟೆಕ್ ಚಿಕಿತ್ಸಾ ಸೌಲಭ್ಯಗಳು ಸಿಗಲಿವೆ
ಹೆಚ್ಚುವರಿ ಹೆರಿಗೆ ವಾರ್ಡ
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಹೆರಿಗೆ ವಾರ್ಡ್ ನಲ್ಲಿ ಪ್ರತಿ ದಿನ 35- ರಿಂದ 40 ಹೆರಿಗೆಗಳು ಆಗುತ್ತಿವೆ ಬಾಣಂತಿಯರಿಗೆ ಬೆಡ್ ಸಮಸ್ಯೆ ಆಗುತ್ತಿದೆ ಅದಕ್ಕಾಗಿ ಈಗಿರುವ ಹೆರಿಗೆ ವಾರ್ಡಿನ ಕಟ್ಟಡದ ಮೇಲೆ ಎರಡನೇಯ ಮಹಡಿ ನಿರ್ಮಿಸಿ ಅಲ್ಲಿ 100 ಹೆಚ್ವುವರಿ ಹಾಸಿಗೆಗಳ ವ್ಯೆವಸ್ಥೆ ಮಾಡಿ ಕೊಡುವಂತೆ ಆರೋಗ್ಯ ಇಲಾಖೆಗೆ ಪ್ರಸ್ಥಾವನೆ ಸಲ್ಲಿಸಲಾಗಿದ್ದು ಇದಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಭೀಮ್ಸ ನಿರ್ದೇಶಕ ಕಳಸದ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ತಿಳಿಸಿದ್ದಾರೆ
ಜನಪ್ರತಿನಿಧಿಗಳು ಪ್ರಯತ್ನ ಮಾಡಲಿ
ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ 162 ಕೋಟಿಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಇದು 2014 ರಲ್ಲಿ ಬಜೆಟ್ ನಲ್ಲಿ ಘೋಷಣೆಯಾದ ಯೋಜನೆ ಆಗಿದೆ ಜಿಲ್ಲಾ ಮಂತ್ರಿಗಳು ಜಿಲ್ಲೆಯ ಶಾಸಕರು ವಿಧಾನ ಪರಿಷತ್ತ ಸದಸ್ಯರು ನಿಯೋಗ ಕೊಂಡೊಯ್ದು ಪ್ರಸ್ಕಕ್ತ ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕಿದೆ