Breaking News

ಸುವರ್ಣಸೌಧದಲ್ಲಿ ಓನ್ಲೀ ಸೆಲ್ಫಿ…. ನೋ….ಹೆಲ್ಪೀ….!!!!!

ಬೆಳಗಾವಿ-ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದಿದೆ ಇಡೀ ಸರ್ಕಾರವೇ ಸೌಧದಲ್ಲಿ ಬೀಡಾರ ಹೂಡಿದೆ ಶಾಸಕರು ಮಂತ್ರಿಗಳನ್ನು ನೋಡಲು ಜನರ ದಂಡೇ ಸುವರ್ಣಸೌಧಕ್ಕೆ ಹರಿದು ಬರುತ್ತಿದೆ

ಮುಖ್ಯದ್ವಾರದಲ್ಲಿ ನಿಂತು ಮಂತ್ರಿಗಳು ಶಾಸಕರ ಜೊತೆ ಜನ ಸೆಲ್ಫಿ ತೆಗೆಸಿಕೊಳ್ಳುವದು ಸಾಮಾನ್ಯವಾಗಿದೆ ಜನಜಂಗಳಿ ನಿಯಂತ್ರಿಸಲು ಪೋಲೀಸರು ಹರಸಹಾಸ ಪಡುತ್ತಿದ್ದಾರೆ

ಸೋಮವಾರದಿಂದ ಅಧಿವೇಶನ ಆರಂಭವಾಗಿದೆ ಅಂದಿನಿಂದ ಇಂದಿನವರೆಗೆ ಬೆಳಗಾವಿಯ ಜನರಿಗೆ ಮಂತ್ರಿ ಶಾಸಕರ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿದೆ ಆದರೆ ಬೆಳಗಾವಿಯ ಅಭಿವೃದ್ಧಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ಚರ್ಚೆಗೆ ಅವಕಾಶ ಸಿಕ್ಕಿಲ್ಲ

ಸೋಮವಾರದಿಂದ ಯಾವುದೇ ಗದ್ದಲ ಗಲಾಟೆ ಇಲ್ಲದೆ ಕಲಾಪಗಳು ನಡೆಯುತ್ತಿವೆ ವಿರೋಧ ಪಕ್ಷ ಬಿಜೆಪಿ ಬರಗಾಲವನ್ನು ಸದನದಲ್ಲಿ ಮಂಡಿಸಿ ಬರಪರಿಹಾರಕ್ಕಾಗಿ ಸರ್ಕಾರದ ಕಿವಿ ಹಿಂಡಿದೆ

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಮಂಗಳವಾರ ಮಹೂರ್ತ ಫಿಕ್ಸ ಆಗಿದೆ ಈ ದಿನ ಸದನದಲ್ಲಿ ಕೃಷ್ಣಾ ಕಳಸಾ ಬಂಡೂರಿ ಮಹಾದಾಯಿ ಉಕ್ಕಿ ಹರಿಯಲಿದ್ದು ಕಳಸಾ ಬಂಡೂರಿ ನಾಲೆಯ ಅಡ್ಡುಗೋಡೆ ಸರಿಸುವ ಪ್ರಯತ್ನಗಳು ನಡೆಯುವ ಸಾಧ್ಯತೆಗಳಿವೆ

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಸದನದಲ್ಲಿ ಇನ್ನುವರೆಗೆ ಚರ್ಚೆಗೆ ಅವಕಾಶ ಸಿಕ್ಕಿಲ್ಲ ಸೋಮವಾರದವರೆಗೆ ವಿಧಾನಸಭೆ ಮತ್ತು ಪರಿಷತ್ತಿನ ಕಲಾಪಗಳನ್ನು ಮುಂದೂಡಲಾಗಿದ್ದು ಸೋಮವಾರದಿಂದ ಅಧಿವೇಶನ ಎರನೇಯ ಇನ್ನಿಂಗ್ಸ ಆರಂಭವಾಗಲಿದೆ

ಈಗ ಸದ್ಯಕ್ಕೆ ಸೌಧದಲ್ಲಿ ಸೆಲ್ಫಿ ತೆಗೆಸಿಕೊಳ್ಳುವ ಶೋಕಿಗೆ ಅವಕಾಶ ಸಿಕ್ಕಿದೆ ಆದ್ರೆ ಉತ್ತರ ಕರ್ನಾಟಕಕ್ಕಾಗಲಿ ಬೆಳಗಾವಿಗಾಗಲಿ ಯಾವುದೇ ಲಾಭವಾಗಿಲ್ಲ ಸುವರ್ಣ ವಿಧಾನಸೌಧ ಸಂಪೂರ್ಣವಾಗಿ ಸೆಲ್ಫಿಯಾಗಿದೆ ಆದರೆ ಇಲ್ಲಿಯ ಜನಕ್ಕೆ ಮಾತ್ರ ಹೆಲ್ಪೀ ಆಗದೇ ಇರುವದು ದುರ್ದೈವ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *