Breaking News

ಬೆಳಗಾವಿ ನಗರದಲ್ಲಿ ಈಜು ಸ್ಪರ್ಧೆ

ನಗರದ ಕೆಎಲ್‍ಇ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜ್ ಈಜುಕೊಳದಲ್ಲಿ ಜ. 6 ರಿಂದ 8ರವರೆಗೆ 29 ನೇ ದಕ್ಷಿಣ ವಲಯ ಈಜು ಸ್ಪರ್ದೆ ನಡೆಯಲಿದೆ ಎಂದು  ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್ ಅಧ್ಯಕ್ಷ ನೀಲಕಂಠರಾವ್ ಆರ್ ಜಗದಾಳೆ ಹೇಳಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೆಎಲ್‍ಇ ಸಂಸ್ಥೆ, ಬೆಳಗಾವಿಯ ಸ್ವಿಮ್ಮರ್ಸ್ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್ ಇವರ ಸಹಯೋಗದೊಂದಿಗೆ ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್‍ನವರು ಈ ಸ್ಪರ್ದೆಯನ್ನು ಆಯೋಜಿಸಿದ್ದಾರೆ. ಈ ಈಜು ಸ್ಪರ್ದೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಪಾಂಡಿಚೇರಿ, ಆಂಧ್ರಪ್ರದೇಶ ರಾಜ್ಯಗಳ ಒಟ್ಟು 550 ಈಜು ಪಟುಗಳು ಪಾಲ್ಗೊಳ್ಳಲಿದ್ದಾರೆ.

ಈ ಸ್ಪರ್ದೆಯಲ್ಲಿ ರಾಜ್ಯದಿಂದ 110 ಈಜು ಪಟುಗಳು ಹಾಗೂ ಬೆಳಗಾವಿಯವರಾದ ಕ್ರಿಜಾನಾ ಇರಾನಿ, ಇಮಾನಿ ಜಾಧವ, ಸುನಿಧಿ ಹಲಕೆರೆ ಹಾಗೂ ಕಿಲ್ಲೇಕರ್ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಮೊದಲ ಬಾರಿಗೆ ವಾಟರ್ ಪೆÇಲೋ ಕ್ರೀಡಾಕೂಟವನ್ನು ಕೂಡ ಬೆಳಗಾವಿಯಲ್ಲಿ ನಡೆಸಲಾಗುತ್ತಿದೆ. ವಾಟರ್ ಪೆÇಲೊ ತಂಡದಲ್ಲಿ ರಾಜ್ಯದ ಪರವಾಗಿ 26 ಆಟಗಾರರು ಇದ್ದಾರೆ.
ಜನವರಿ 6 ರಂದು ಮಧ್ಯಾಹ್ನ 3.30 ಕ್ಕೆ ಕೆಎಲ್‍ಇ ರಜಿಸ್ಟ್ರಾರ್ ಡಾ.ವಿ.ಡಿ.ಪಾಟೀಲ ಅವರು ಕ್ರೀಡಾಕೂಟವನ್ನು  ಉದ್ಘಾಟಿಸಲಿದ್ದಾರೆ. ಕೆಎಲ್‍ಇ ಇಂಟರ್‍ನ್ಯಾಷನಲ್ ಸ್ಕೂಲ್‍ನ ಸಂಚಾಲಕಿ ಪ್ರೀತಿ ದೊಡವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪರ್ದೆ 10, 12, 14, 17 ವಯೋಮಿತಿಯಲ್ಲಿ ನಡೆಯಲಿದೆ ಎಂದರು.
ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್‍ಉಪಾಧ್ಯಕ್ಷ ಟಿ.ಡಿ.ವಿಜಯರಾಘವನ್, ಕಾರ್ಯದರ್ಶಿ ಎಸ್.ಆರ್.ಶಿಂಧೆ, ಜಂಟಿ ಕಾರ್ಯದರ್ಶಿ ಸತೀಶ ಕುಮಾರ, ಬೆಳಗಾವಿಯ ಸ್ವಿಮ್ಮರ್ಸ್ ಕ್ಲಬ್‍ನ ಉಮೇಶ ಕಲಘಟಕರ  ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *