ಬೆಳಗಾವಿ- ಲಾಕ್ ಡೌನ್ ಶೀಲ್ ಡೌನ್ ,ಕರ್ಫ್ಯು ಸೇರಿದಂತೆ ಕೊರೋನಾ ಗದ್ದಲ ಗಲಾಟೆಯಿಂದ ಶಾಂತವಾಗಿದ್ದ ಭಗವಂತ ನಾಳೆಯಿಂದ ಭಕ್ತರಿಗೆ ದರ್ಶನವಾಗಲಿದ್ದಾನೆ.
ನಾಳೆಯಿಂದ ಬೆಳಗಾವಿ ಜಿಲ್ಲೆಯ ಮಂದಿರ ಮಸೀದಿ ,ಚರ್ಚ ಸೇರಿದಂತೆ ಎಲ್ಲ ರೀತಿಯ ಪ್ರಾರ್ಥನಾ ಮಂದಿರಗಳು ನಾಳೆಯಿಂದ ಶುರುವಾಗಲಿವೆ.
ಮಂದಿರ,ಚರ್ಚ ಹಾಗು ಮಸೀದಿ,ಮತ್ತು ದರ್ಗಾಗಳನ್ನು ಸಾರ್ವಜನಿಕರ ದರ್ಶನಕ್ಕಾಗಿ ಸಿದ್ಧಪಡಿಸಲಾಗುತ್ತಿದೆ.ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ವಾತಾವರಣ ಶುಭ್ರಗೊಳಿಸಲು ಇಂದು ಕಾಲಸರ್ಪ ಹವನ ಮಾಡಲಾಯಿತು,ನಾಳೆ ಬೆಳಿಗ್ಗೆ 6 ಗಂಟೆಗೆ ಮಹಾರುದ್ರಾಭಿಷೇಕ ನಡೆಯಲಿದ್ದು ನಂತರ ಸಾರ್ವಜನಿಕರಿಗೆ ದರ್ಶನ ಮಾಡಲು ಅವಕಾಶ ನೀಡಲಾಗುತ್ತಿದೆ.
ಕಪಿಲೇಶ್ವರ ಮಂದಿರಕ್ಕೆ ಬರುವ ಭಕ್ತಾದಿಗಳು ಕಾಯಿ ಕರ್ಪೂರ ತರಬಾರದ,ಹಣ್ಣು ಹಂಪಲ,ಹೂವು ತರಬಾರದು,ಮಂದಿರದಲ್ಲಿ ಯಾವುದೇ ರೀತಿಯ ಪ್ರಸಾದ ಕೊಡುವದಿಲ್ಲ,ಚಿಕ್ಕ ಮಕ್ಕಳಿಗೆ,ವೃದ್ಧರಿಗೆ ಪ್ರವೇಶ ಇಲ್ಲ.ಭಕ್ತಾದಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಮಾಡಬೇಕೆಂದು ಕಪಿಲೇಶ್ವರ ಮಂದಿರದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.
ಬೆಳಗಾವಿಯ ಮೆಥೋಡಿಸ್ಟ್ ಚರ್ಚ ನಲ್ಲಿ ಪ್ರತಿ ಭಾನುವಾರ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ ,800 ಭಕ್ತರು ಪ್ರತಿ ಸಂಡೇ ,ಪ್ರೇಯರ್ ಮಾಡುತ್ತಾರೆ.ಮುಂದಿನ ಸಂಡೇ ನಾಲ್ಕು ಹಂತದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ ಸೋಶಿಯಲ್ ಡಿಸ್ಟನ್ಸ್ ಗಾಗಿ ನಾಲ್ಕು ಹಂತಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ ಎಂದು ಚರ್ಚ್ ಆಡಳಿತ ಮಂಡಳಿ ತಿಳಿಸಿದೆ.
ದರ್ಗಾಗಳಲ್ಲಿ ಮುಜಾವರಗಳು,ಮಸೀದಿಗಳಲ್ಲಿ ಮೌಲ್ವಿಗಳು ನಾಳೆಯಿಂದ ನಮಾಜ್ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ನಾಳೆಯಿಂದ ಎಲ್ಲ ಮಂದಿರ,ಮಸೀದಿ ಚರ್ಚಗಳು ಬಾಗಿಲು ತೆರೆದರೂ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕನ ಮಂದಿರಗಳು ಜೂನ್ 30ರವರೆಗೆ ಬಂದ್ ಇರಲಿವೆ.