ಬೆಳಗಾವಿ- ಬೆಳಗಾವಿಯ ಖಡಕ್ ಗಲ್ಲಿಯಲ್ಲಿ ಕೆಲವು ಕಿಡಗೇಡಿಗಳು ಬಾಟಲಿ ಹಾಗು ಕಲ್ಲು ತೂರಾಟ ನಡೆಸಿದ ಪರಿಣಾಮ ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು
ಕೆಲವು ಕಿಡಗೇಡಿಗಳು ಖಡಕ್ ಗಲ್ಲಿಯತ್ತ ಬಾಟಲಿ ಎಸೆದ ಪರಿಣಾಮ ಖಡಕ್ ಗಲ್ಲಿಯ ಜನ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಪೋಲೀಸರು ಸ್ಥಳಕ್ಕೆ ಧಾವಿಸಿದ ನಂತರ ಪೋಲೀಸರ ಎದುರೇ ಕಲ್ಲು ತೂರಾಟ ಹಾಗು ಬಾಟಲಿಗಳು ಬಿದ್ದ ಕಾರಣ ಖಡಕ್ ಗಲ್ಲಿಯ ಜನ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ
ಈ ಸಂಧರ್ಭದಲ್ಲಿ ಪೋಲೀಸರು ಹಾಗು ಖಡಕ್ ಗಲ್ಲಿ ಯ ನಿವಾಸಿಗಳ ಜೊತೆ ಮಾತಿನ ಚಕಮಕಿ ನಡೆಯಿತು
ಈಗ ಸ್ಥಳದಲ್ಲಿ ಬಿಗುವಿನ ವಾತಾವರಣ ಇದ್ದು ಪರಿಸ್ಥತಿ ಬೂದಿ ಮುಚ್ಚಿದ ಕೆಂಡದಂತಿದೆ
ಸ್ಥಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದ್ದು ಡಿಸಿಪಿ ಅಮರನಾಥ ರೆಡ್ಡಿ ಸ್ಥಳದಲ್ಲಿ ಠಿಖಾನಿ ಹೂಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ