ಬೆಳಗಾವಿ-ಬೆಳಗಾವಿ ನಗರದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ನಿಂದಾಗಿ ನಗರದ ಟ್ರಾಫಿಕ್ ವ್ಯೆವಸ್ಥೆ ಹದಗೆಟ್ಟು ಹೋಗಿದೆ ನಗರದ ಟ್ರಾಫಿಕ್ ಪೋಲೀಸರಿಂದ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆ ಸಾಧ್ಯವೇ ಇಲ್ಲ ಎಂದು ಮನವರಿಕೆ ಮಾಡಿಕೊಂಡ ಮಾರುತಿ ಗಲ್ಲಿಯ ವ್ಯಾಪಾರಿಗಳು ಸ್ವತಹ ತಾವೇ ಮುಂದಾಗಿ ಶಿಸ್ತಿನ ಪಾರ್ಕಿಂಗ್ ಸಿಸ್ಟಂ ಜಾರಿಗೆ ತಂದಿದ್ದಾರೆ
ಮಾರುತಿ ಗಲ್ಲಿ ವ್ಯಾಪಾರಿಗಳ ಸಂಘ ಈಗ ಅಸ್ತಿತ್ವಕ್ಕೆ ಬಂದಿದೆ ಮಾರುತಿ ಗಲ್ಲಿಯಲ್ಲಿ ಯಾವದೇ ವ್ಯಾಪಾರಿ ರಸ್ತೆ ಬದಿಯ ಚರಂಡಿ ದಾಟಿ ರಸ್ತೆ ಅತೀಕ್ರಮಣ ಮಾಡಬಾರದು ರಸ್ತೆಯಲ್ಲಿ ಅಟೋಗಳು ನಿಲ್ಲಬಾರದು,ರಸ್ತೆಯ ಒಂದು ಭಾಗದಲ್ಲಿ ಮಾತ್ರ ದ್ವಿಚಕ್ರವಾಹನದ ಪಾರ್ಕಿಂಗ್ ಆಗಬೇಕು ಇದನ್ನೆಲ್ಲ ನೋಡಿಕೊಳ್ಳಲು ವ್ಯಾಪಾರಿಗಳ ಸಂಘ ಮೂರು ಸಕ್ಯುರಿಟಿ ಗಾರ್ಡಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿಯೋಜಿಸಲು ಮುಂದಾಗಿದ್ದಾರೆ
ಈಗ ಸದ್ಯಕ್ಕೆ ಮಾರುತಿ ಗಲ್ಲಿಯ ವ್ಯಾಪಾರಿಗಳು ಬೇಕಾ ಬಿಟ್ಟಿ ಪಾರ್ಕಿಂಗ್ ಮಾಡುವವರ ವಿರುದ್ಧ ಸಮರ ಸಾರಿದ್ದಾರೆ ಮಾರುತಿ ಗಲ್ಲಿ ಪಾರ್ಕಿಂಗ್ ವಿಷಯದಲ್ಲಿ ಎಲ್ಲರಿಗೂ ಮಾದರಿ ಆಗಬೇಕು ಅಂತಾರೆ ವ್ಯಾಪಾರಿ ಸಂಘದ ಅದ್ಯಕ್ಷ ದತ್ತಾ ಜಾಧವ
ಈಗ ಸದ್ಯಕ್ಕೆ ಮಾರುತಿ ಗಲ್ಲಿಯಲ್ಲಿ ಶಿಸ್ತಿನ ಪಾರ್ಕಿಂಗ್ ನಡೆಯುತ್ತಿದೆ ವ್ಯಾಪಾರಿಗಳಗಳು ತಮ್ಮ ಅಂಗಡಿಗಳ ಶೆಡ್ಡುಗಳನ್ನು ಚರಂಡಿ ದಾಟಿ ಹಾಕದಂತೆ ವ್ಯಾಪಾರಿಗಳ ಸಂಘ ಮಾರುತಿ ಗಲ್ಲಿಯ ಎಲ್ಲ ವ್ಯಾಪಾರಿಗಳಿಗೆ ತಾಕೀತು ಮಾಡಿದೆ ಅಟೋಗಳು ಪ್ರಯಾಣಿಕರನ್ನು ಇಳಿಸಿ ಹೋಗ್ತಾ ಇರಬೇಕು ರಸ್ತೆಯ ಮೇಲೆ ಅಟೋ ನಿಲ್ಲಿಸಿದರೇ ವ್ಯಾಪಾರಿಗಳೇ ಅಟೋ ಚಾಲಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ
ಇನ್ನೆರಡು ದಿನದಲ್ಲಿ ಮೂರು ಜನ ಸಕ್ಯುರಿಟಿ ಗಾರ್ಡಗಳು ಮಾರುತಿಗಲ್ಲಿಯ ಪಾರ್ಕಿಂಗ್ ಸೇರಿದಂತೆ ಎಲ್ಲ ಸಂಚಾರಿ ವ್ಯೆವಸ್ಥೆಯ ಮೇಲೆ ನಿಗಾ ವಹಿಸಲಿದ್ದು ಮಾರುತಿ ಗಲ್ಲಿಯಲ್ಲಿ ಸದ್ಯಕ್ಕೆ ಟ್ರಾಫಿಕ್ ಪೋಲೀಸರು ನಿರಾಳ