ಬೆಳಗಾವಿ- ಬೆಳಗಾವಿಯ ಟ್ರಾಫಿಕ್ ಪೋಲೀಸರು ಈಗ ಫುಲ್ ಹೈಟೆಕ್ ಆಗಿದ್ದಾರೆ ನಗರದಲ್ಲಿ 23 ಟಾವರ್ ಗಳನ್ನು ನಿಲ್ಲಿಸಿ ನಗರದ ಮುಖ್ಯ ವೃತ್ತಗಳಲ್ಲಿ ಜನದಟ್ಟನೆ ಹಾಗು ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರದೇಶಗಳಲ್ಲಿ ಒಟ್ಟು 90 ಕ್ಯಾಮರಾಗಳನ್ನು ಅಳವಡಿಸಿ 90 ಕ್ಯಾಮರಾಗಳ ದೃಶ್ಯಗಳನ್ನು ಒಂದೇ ಕಡೆ ನೋಡುವ ಟ್ರಾಫಿಕ್ ಮ್ಯಾನೇಜ್ಮೆಂಟ್ ರೂಮ್ ಈಗ ರೆಡಿಯಾಗಿದೆ
ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಟ್ರಾಫಿಕ್ ಪೋಲಿಸ್ ಠಾಣೆಯಲ್ಲಿ ಟ್ರಾಫಿಕ್ ಮ್ಯಾನೇಜ್ಮೆಂಟ್ ರೂಂ ರೆಡಿಯಾಗಿದ್ದು ನಗರದಲ್ಲಿ ಅಳವಡಿಸಿರುವ 90 ಕ್ಯಾಮರಾಗಳು 23 ಟಾವರ್ ಗಳ ಮೂಲಕ ಮ್ಯಾನೇಜ್ಮೆಂಟ್ ರೂಂ ಗೆ ಕನೆಕ್ಟ ಆಗಿವೆ
ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು ಟ್ರಾಫಿಕ್ ಪೋಲೀಸರಿಂದ ಬಚಾವ್ ಆಗಲು ಸಾಧ್ಯವೇ ಇಲ್ಲ ಏಕೆಂದರೆ ನಾಲ್ಕು ಜನ ಟ್ರಾಫಿಕ್ ಪೋಲೀಸರು ಟ್ರಾಫಿಕ್ ಮ್ಯಾನೇಜ್ಮೆಂಟ್ ರೂಂ ನಲ್ಲಿ ಕುಳಿತುಕೊಂಡು 90 ಕ್ಯಾಮರಾಗಳ ದೃಶ್ಯಾವಳಿಗಳ ಮೇಲೆ ನಿಗಾ ವಹಿಸುತ್ತಾರೆ
ಸಿಗ್ನಲ್ ಜಂಪ್ ಮಾಡುವ,ಹೆಲ್ಮೇಟ್ ಹಾಕಿಕೊಳ್ಳದ,ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ಪಾರ್ಕ ಮಾಡುವ ಒನ್ ವೇ ದ ವಿರುದ್ಧ ಸಂಚರಿಸುವ ವಾಹನಗಳ ನಂಬರ್ ಗಳನ್ನು ಕ್ಯಾಮರಾದಲ್ಲಿ ನೋಡಿ ವಾಹನಗಳ ಮಾಲೀಕರಿಗೆ ಡಂಡದ ಪಾವತಿ ಕಳಿಸುವ ಕೆಲಸವನ್ನು ಟ್ರಾಫಿಕ್ ಮ್ಯಾನೇಜ್ಮೆಂಟ್ ರೂಮಿನ ಪೋಲೀಸರು ಮಾಡುತ್ತಾರೆ
ಟ್ರಾಫಕ್ ವ್ಯೆವಸ್ಥೆಯ ಮೇಲೆ ನಿಗಾ ಇಡುವದರ ಜೊತೆಗೆ ಕ್ರಿಮಿನಲ್ ಚಟುವಟಿಕೆಗಳ ಮೇಲೆಯೂ 90 ಕ್ಯಾಮರಾಗಳು ನಿಗಾ ವಹಿಸುತ್ತವೆ ಸರಗಳ್ಳರು ಮನೆಗಳ್ಳರು ಇನ್ನು ಮುಂದೆ ಪೋಲೀಸರ ಕಣ್ಣು ತಪ್ಪಿಸಿ ಪರಾರಿ ಆಗುವ ಸಾಧ್ಯತೆಗಳು ಕಡಿಮೆಯಾಗಲಿವೆ