Breaking News

ಬೆಳಗಾವಿಯ ವ್ಯಾಕ್ಸೀನ್ ಡಿಪೋ ಗೆ ಅಭಿವೃದ್ಧಿಯ ಭಾಗ್ಯ..!

ಬೆಳಗಾವಿ- ನಗರದ ಹೃದಯ ಭಾಗದಲ್ಲಿರುವ ವ್ಯಾಕ್ಸೀನ್ ಡಿಪೋ ಅಭವೃದ್ಧಿಗೆ ಸಮಂಧಿಸಿದಂತೆ ಬುಧವಾರ ಬೆಳಿಗ್ಗೆ ಮಹತ್ವದ ಸಭೆ ನಡೆಯಿತು ಆರೋಗ್ಯ ಸಚಿವ ರಮೇಶ ಕುಮಾರ,ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಹಾಗು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಭೆಯಲ್ಲಿ ಭಾಗವಹಿಸಿದ್ದರು

ಆರೋಗ್ಯ ಇಲಾಖೆ ನಗರದ ವ್ಯಾಕ್ಸೀನ್ ಡಿಪೋದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಯೋಜನೆ ರೂಪಿಸಲಾಗಿದೆ ಈ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಲಾಯಿತು ವ್ಯಾಕ್ಸೀನ್ ಡಿಪೋದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಬೇಕು ಹಣ್ಣಿನ ಗಿಡಗಳನ್ನು ಬೆಳೆಸುವದು ಹಕ್ಕಿಗಳಿಗಳಿಗೆ ಅನಕೂಲವಾಗುವಂತೆ ಡಿಪೋದಲ್ಲಿರುವ ನಾಲೆಯನ್ನು ಅಭಿವೃದ್ದಿ ಪಡಿಸುವದು ಸೇರಿದಂತೆ ಅನೇಕ ಮಹತ್ಚದ ವಿಷಯಗಳು ಯೋನೆಯಲ್ಲಿವೆ

ಇದೇ ಸಂಧರ್ಭದಲ್ಲಿ ಪಾಲಿಕೆ ಆಯುಕ್ತರು ಸ್ಮಾರ್ಟ ಸಿಟಿ ಯೋಜನೆಯಲ್ಲಿ ವ್ಯಾಕ್ಸೀನ್ ಡಿಪೋ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದ್ದು ಈ ಯೋಜನೆಯನ್ನು ದೆಹಲಿ ಸ್ಕೂಲ್ ಆಫ್ ಪ್ಲ್ಯಾನಿಂಗ್ ನ ಪ್ರೋಫೆಸರ ಮೆಹತಾ ಅವರು ಸಿದ್ಧಪಡಿಸಿದ್ದು ಈ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಸಭೆಯಲ್ಲಿ ಸಾಧರ ಪಡಿಸಲಾಯಿತು

ಆರೋಗ್ಯ ಸಚಿವ ರಮೇಶ ಕುಮಾರ ಹಾಗು ನಗರಾಭಿವೃದ್ದಿ ಸಚಿವ ರೋಷನ್ ಬೇಗ ಮಾತನಾಡಿ ವ್ಯಾಕ್ಸೀನ್ ಡಿಪೋದಲ್ಲಿ ಯಾವ ಯಾವ ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ ಅವುಗಳು ಯಾವ ಯಾವ ಕಾಯೊಲೆಗಳು ವಾಸಿ ಮಾಡಬಹುದು ಅನ್ನೋದರ ಬಗ್ಗೆ ಜನ ಜಾಗೃತಿ ಮೂಡಿಸಬೇಕು ಜೊತೆಗೆ ಇಲ್ಲಿಯ ಪರಿಸರಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *