ಬೆಳಗಾವಿ-
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ೧೬ನೇ ಘಟಿಕೋತ್ಸವ.
ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆಯಲ್ಲಿ ನಡೆಯಿತು
ಇಂಜನೀಯರಿಂಗ್ ವ್ಯಾಸಂಗಕ್ಕಾಗಿಯೇ ನೇಪಾಳದಿಂದ ಕರ್ನಾಟಕದ ತುಮಕೂರಿನ ಗುಬ್ಬಿ ಚನ್ನ ಬಸವೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನೇಪಾಳದ ಹುಡುಗ ಬಿತೇಶ ಯಾದವ ಐದು ಚಿನ್ನದ ಪದಕಗಳನ್ನು ಬಾಚಿಕೊಂಡು ಎಲ್ಲರ ಗಮನ ಸೆಳೆದರು
ಐಐಟಿ ರೂರ್ಕಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಪ್ರೇಮ್ ಕೃಷ್ಣ ಅವರು ಘಟಿಕೋತ್ಸವ ಭಾಷಣ.ಮಾಡಿದರು
೭೫ ವಿದ್ಯಾರ್ಥಿಗಳಿಗೆ ಚಿನ್ನದ ಪದಕ. ಒಟ್ಟು ೭೧೧೧೭ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು
ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿಗೆ ಅತೀ ಹೆಚ್ಚು ೩೨ ಚಿನ್ನದ ಪದಕ- ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಬಿ.ಇ. ಸಿವಿಲ್ ವಿಭಾಗದ ಪ್ರಣವ್.ಪಿ ಅವರಿಗೆ ಅತೀ ಹೆಚ್ಚು ೧೨ ಚಿನ್ನದ ಪದಕ.
ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿಗೆ ಒಟ್ಟು ೯ ಚಿನ್ನದ ಪದಕ ಪ್ರಧಾನ ಮಾಡಲಾಯಿತು
ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಭಾಗಿಯಾಗಿ ಮಾತನಾಡಿದರು
ರಾಜ್ಯದಲ್ಲಿ ಕೌಶಲ್ಯ ವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು.
ಸ್ವ ಉದ್ಯೋಗ ಹೆಚ್ಚಳಕ್ಕೆ ಒತ್ತು ನೀಡಲಾಗುವುದು. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸ್ಕೂಲ್ ಆಪ್ ಎಕಾಮಿಕ್ ಸ್ಥಾಪನೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ ನಿಂದ ಭೋಧಕ ಸಿಬ್ಬಂದಿಯ ಸಹಾಯ ಪಡೆಯಲಾಗುವುದು. ಎಂದು ರಾಯರೆಡ್ಡಿ ತಿಳಿಸಿದರು
ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ ಭೋದಕ ಸಿಬ್ಬಂಧಿಯ ಕುರಿತು ಈಗಾಗಲೇ ಮೊದಲ ಸುತ್ತಿನ ಮಾತುಕತೆ ನಡೆದಿದೆ. ೧೫ ದಿನದಲ್ಲಿ ಈ ಕುರಿತು ಸಂಪುಟ ನಿರ್ಣಯ. ಕೈಗೊಳ್ಳ ಲಾಗುವದು ಎಂದರು
ವಿಟಿಯು ನಲ್ಲಿ ಅನೇಕ ಸಮಸ್ಯೆ ಇದೆ. ಸಮಸ್ಯೆ ಇತ್ಯರ್ಥಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದ. ಎಂದು ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದರು