ಬೆಳಗಾವಿ- ಬೆಳಗಾವಿ ಸಂಸದ ಸುರೇಶ ಅಂಗಡಿ ಡಿಜಿಟಲ್ ಇಂಡಿಯಾ ಸ್ಕೀಮ್ ಅಡಿಯಲ್ಲಿ ನಗರದ ಹಲವಾರು ಸಾರ್ಜನಿಕ ಸ್ಥಳಗಳಲ್ಲಿ ಅಳವಡಿಸಿದ ವೈ ಫೈ ಇಂಟರ್ನೆಟ್ ವ್ಯೆವಸ್ಥೆ ಸಂಪೂರ್ಣವಾಗಿ ಹಳ್ಳ ಹಿಡಿದು ಹೋಗಿದೆ
ಬೆಳಗಾವಿಯ ರೆಲ್ವೆ ನಿಲ್ಧಾಣದಲ್ಲಿ ಸಂಸದ ಸುರೇಶ ಅಂಗಡಿ ಅವರು ವೈ ಫೈ ವ್ಯೆವಸ್ಥೆ ಉದ್ಘಾಟಿಸಿದ್ದರು ಕೆಲವೇ ಕೆಲವು ವಾರ ಸಾರ್ವಜನಿಕರಿಗೆ ಹೈ ಫೈ ಸೇವೆ ನೀಡಿದ ವೈಫೈ ಹಳ್ಳಹಿಡಿಯಿತು ಇಲ್ಲಿ ವೈಫೈ ಕನೆಕ್ಟ ಮಾಡಲು ಸಾರ್ವಜನಿಕರು ಬಟನ್ ಒತ್ತ ಒತ್ತಿ ಸುಸ್ತಾಗಿ ಬಹುಶ ನಮ್ಮ ಮೋಬೈಲ್ ನೆಟವರ್ಕ್ ಗೆ ಲಕ್ವಾ ಹೊಡೆದಿದೆ ಅಂತಾ ಭಾವಿಸಿಕೊಳ್ಳುತ್ತಿದ್ದಾರೆ
ಜಿಲ್ಲಾ ಆಸ್ಪತ್ರೆಯ ರೋಗಿಗಳು ಬೆಡ್ ಮೇಲೆ ಇಂಟರ್ನೆಟ್ ಆನ್ ಮಾಡಿ ಎಂಜಾಯ್ ಮಾಡಲಿ ಅಂತಾ ಅಲ್ಲಿಯೂ ವೈ ಫೈ ಅಳವಡಿಸಲಾಗಿತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಡಾಕ್ಟರ್ ಗಳೇ ಸಮಯಕ್ಕೆ ಸರಿಯಾಗಿ ಬರೋದಿಲ್ಲ ರೋಗಿಗಳನ್ನು ನರ್ಸಗಳೇ ನೋಡಿಕೊಳ್ಳುತ್ತಾರೆ ಅಂತ ಇಲ್ಲಿಯ ವ್ಯೆವಸ್ಥೆ ನೋಡಿ ಆಸ್ಪತ್ರೆಯ ವೈಫೈ ಕೂಡಾ ಸೋಮಾರಿಯಾಗಿದೆ ಒಂದೆರಡು ದಿನ ಆಸ್ಪತ್ರೆಯ ರೋಗಿಗಳಿಗೆ ಎಂಜಾಯ್ ಮಾಡಿದ ವೈಫೈ ನಂತರ ಇಲ್ಲಿಂದ ಕಾಲ್ಕಿತ್ತಿದೆ
ಬಸ್ ನಿಲ್ಧಾಣದಲ್ಲಿಯೂ ಡಿಜಿಟಲ್ ಇಂಡಿಯಾ ಸೇವೆ ಅಡಿಯಲ್ಲಿ ವೈ ಫೈ ಅಳವಡಿಸಲಾಗಿತ್ತು ಕಂಡಕ್ಟರ್ ಗಳು ವೈಫೈ ಕನೆಕ್ಟ ಮಾಡಿ ಟೈಮ್ ಪಾಸ್ ಮಾಡುತ್ತಿರುವದರಿಂದ ಕಲೆಕ್ಷನ್ ಕಡಿಮೆ ಆಗುತ್ತಿದೆ ಅಂತ ಸಾರಿಗೆ ಅಧಿಕಾರಿಗಳೇ ಇಲ್ಲಿಯ ವೈ ಫೈಗೆ ಲಕ್ವಾ ಹೊಡೆಸಿದ್ದಾರೆ
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಖಾಸಗಿ ಕಂಪನಿಯೊಂದರ ಸಹಯೋಗದಲ್ಲಿ ವೈ ಫೈ ಅಳವಡಿಸಲಾಗಿತ್ತು ಇದೂ ಕೂಡಾ ಈಗ ನಿಷ್ಕ್ರೀಯ ವಾಗಿದೆ
ಸ್ಮಾರ್ಟ್ ಸಿಟಿಯ ಸ್ಮಾರ್ಟ ಪಾಲಿಕೆಯಲ್ಲಿ ವೈ ಫೈ ಅಳವಡಿಸಲಾಗಿತ್ತು ಇಲ್ಲಿ ಕೆಲವು ತಿಂಗಳ ಕಾಲ ಸಾರ್ವಜನಿಕರ ಮೋಬೈಲ್ ಗಳಿಗೆ ಕನೆಕ್ಟ ಆಯ್ತು ಬರ್ತ್ ಸರ್ಟಿಪಿಕೇಟ್ ಡೆತ್ ಸರ್ಟಿಪಿಕೇಟ್ ಪಡೆಯಲು ಪಾಲಿಕೆಗೆ ಬಂದವರು ಅರ್ಜಿ ಕೊಟ್ಟು ಪಾಲಿಕೆಯಲ್ಲೇ ವೈಫೈ ಕನೆಕ್ಟ ಮಾಡಿ ಕೆಲವು ತಿಂಗಳ ಕಾಲ ಎಂಜಾಯ್ ಮಾಡಿದ್ರು ಇತ್ತಿಚಿನ ದಿನಗಳಲ್ಲಿ ಇಲ್ಲಿನ ಸ್ಮಾರ್ಟ್ ವೈಫೈ ಕೂಡಾ ಕೂರುಪಿಯಾಗಿದೆ
ಡಿಸಿ ಕಚೇರಿಯಲ್ಲಿ ಅಳವಡಿಸಲಾದ ವೈಫೈ ಚನ್ನಾಗಿಯೇ ಇತ್ತು ಇದಕ್ಕೆ ಯಾರ ದೃಷ್ಠಿ ಬಿತ್ತೋ ಗೊತ್ತಿಲ್ಲ ಅದು ಕೂಡಾ ಈಗ ಹಳ್ಳ ಹಿಡಿದಿದ್ದು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಬೆಳಗಾವಿಯಲ್ಲಿ ಸರ್ಜಿಕಲ್ ಸ್ಟೇಜ್ ನಲ್ಲಿದೆ
ಸಂಸದ ಸುರೇಶ ಅಂಗಡಿ ಸ್ವಲ್ಪ ಈ ಕಡೆ ಗಮನ ಹರಿಸಿ ವೈಫೈ ರಿಪೇರಿ ಮಾಡಿಸಲು ಕ್ರಮ ಕೈಗೊಳ್ಳುತ್ತಾರೋ ಅಥವಾ ಲಕ್ವಾ ಹಿಡೆದಿರುವ ವೈ ಫೈ ಕೋಮಾ ಗೆ ಹೋಗುತ್ತದೆಯೋ ಕಾದು ನೋಡಬೇಕಪ್ಪ ಇದೆಲ್ಲ ಉಸಾಬರಿ ಬೇಡವೇ ಬೇಡ ಅಂತ ಕೆಲವರು ಅನ್ ಲಿಮಿಟೆಡ್ ಪ್ಲ್ಯಾನ್ ರಿಚಾರ್ಜ ಮಾಡಿಸಿದ್ದಾರೆ