ಬೆಳಗಾವಿ -ಸರಾಯಿ ಸಿಗದೇ ಕುಡುಕರ ರಕ್ತ ಕುದಿಯುತ್ತಿದೆ,ಅದಕ್ಕಾ ಸರಾಯಿ ಕದಿಯಲು ಈ ಕುಡುಕರು ಪರದಾಡುತ್ತಿರುವದು,ಸಾಮಾನ್ಯವಾಗಿದೆ.
ಬೆಳಗಾವಿ ನಗರದ ಕಾಂಗ್ರೆಸ್ ರಸ್ತೆಯಲ್ಲಿ ಕುಡುಕರು ಸರಾಯಿ ಕದಿಯುಲು ಛಾವಣಿ ಏರಿ,ಹಂಚು ತೆಗೆದು, ಅಂಗಡಿಯೊಳಗೆ ಇಳಿಯುವ ಪ್ರಯತ್ನ ಮಾಡಿದರೂ ಕಳ್ಳರ ಕೈಗೆ ಬಾಟಲ್ ಸಿಗದೇ ಕಳ್ಳರ ಪ್ರಯತ್ನ ವಿಫಲವಾಗಿದೆ
ಹಂಚು ತೆಗೆದಾಗ ತಗಡಿನ ಶೀಟ್ ಗಳು ಎದುರಾಗಿವೆ ಈ ತಗಡಿನ ಶೀಟ್ ಗಳನ್ನು ಕೊರೆದು ಕೆಳಗೆ ಇಳಿಯಲಿಕ್ಕಾಗದೇ ಸರಾಯಿ ಕಳ್ಳರು ಬರಿಗೈಯಲ್ಲಿ ಮರಳಿದ್ದಾರೆ
ಎಣ್ಣೆ ಪ್ರೀಯರಿಂದ ವೈನ್ ಶಾಪ್ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.ರವಿ ಹಂಜಿ ಮಾಲೀಕತ್ವದ ವೈನ್ಸ್ ಆ್ಯಂಡ್ ವೈನ್ಸ್ ಮಳಿಗೆ ಇದಾಗಿದೆ. ಎಣ್ಣೆ ಪ್ರೀಯರ ಕನ್ನ.
ಹಂಚು ತೆಗೆದು ಮಳಿಗೆಯೊಳಗೆ ಇಳಿಯಲು ಯತ್ನಿಸಿ ವಿಫಲರಾದ ಎಣ್ಣೆ ಪ್ರಿಯರಿಗೆ ಇಳಿಯಲು ಆಗದ ಕಾರಣ ಲಕ್ಷ್ಯಾಂತರ ರೂ ಮದ್ಯ ಬಚಾವ್ ಆಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ