ಬೆಳಗಾವಿ- ರೈತರ ಹೋರಾಟದ ಸಮಯದಲ್ಲಿ ವಿಠ್ಠಲ ಅರಬಾಂವಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಪೋಲೀಸರು ಜಾಗೃತರಾಗಿದ್ದಾರೆ ಸೋಮವಾರ ಸುವರ್ಣ ಸೌಧದ ಎದುರು ರೈತರು ಒ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಪೋಲೀಸರು ರೈತರನ್ನು ಚಕ್ ಮಾಡಿ ಬಿಡುತ್ತಿದ್ದರು ಪೋಲೀಸರು ರೈತನೊಬ್ಬನ ಕಿಸೆಗೆ ಕೈ ಹಾಕಿದಾಗ ಪೋಲೀಸರ ಕೈಗೆ ಸಿಕ್ಕಿದ್ದೇನು ಗೊತ್ತಾ ರಮ್ ಬಾಟಲ್
ರೈತನ ಕಿಸೆಯಲ್ಲಿದ್ದ ರಮ್ ಕ್ವಾಟರ್ ಪೋಲೀಸರ ಕೈಸೇರಿದ ಬಳಿಕ ಆ ರೈತನ ಜೊತೆಗೆ ಪೋಲೀಸರು ಕಕ್ಕಾಬಿಕ್ಕಿ ಸ್ವಲ್ಪ ತಡವರಿಸಿಕೊಂಡ ಪೋಲೀಸರು ನೀನು ಹೋಗಪ್ಪ ಎಂದು ರೈತನನ್ನು ಮುಂದಕ್ಕೆ ಕಳಿಸಿ ರಮ್ ಬಾಟಲಿಯ ದಮ್ ಏರಲು ಬಿಡದೇ ಆ ಬಾಟಲಿಯನ್ನು ನಾಶ ಮಾಡಿದರು
ಸ್ವಲ್ಪ ಸಮಯದ ನಂತರ ಮೊತ್ತಬ್ಬ ರೈತನ ಜೇಬಿನಲ್ಲಿ ವಿಷದ ಬಾಟಲಿ ಪತ್ತೆಯಾಯಿತು ಆವಾಗ ಮತ್ತಷ್ಟು ಜಾಗೃತರಾದ ಪೋಲೀಸರು ಪ್ರತಿಯೊಬ್ಬ ರೈತನನ್ನು ತಪಾಸಣೆಗೊಳಪಡಿಸಿದ ಘಟನೆ ನಡೆಯಿತು
ಹೈದ್ರಾಬಾದದಿಂದ ಬೆಳಗಾವಿಗೆ ಬಂದಿದ್ದ ನಯನಾ ಎಂಬ ಯುವತಿ ಶಾರ್ಟ ಫಿಲ್ಮ ಶೂಟಿಂಗ ಮಾಡುತ್ತಿದ್ದಳು ಒಂದು ಕಡೆ ಶೂಟಿಂಗ ನಡೆಯುತ್ತಿದ್ದರೆ ಇನ್ನೊಂದು ಕಡೆ ಪೋಲೀಸರ ಚೆಕಿಂಗ್ ನಡೆದಿತ್ತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ