Breaking News

ಬೆಳಗಾವಿ ಅಧಿವೇಶನದಲ್ಲಿ ೯ ವಿಧೇಯಕಗಳು,20 ಗಮನ ಸೆಳೆಯುವ ಸೂಚನೆಗಳು, ೨ ಖಾಸಗಿ ನಿರ್ಣಯ, ೧೬೬೧ ಪ್ರಶ್ನೆಗಳು

 

ಬೆಳಗಾವಿ-

ನಾಳೆಯಿಂದ ಹತ್ತು ದಿನಗಳ ವರೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಒಂಬತ್ತು ವಿಧೇಯಕಗಳು, ೨೦ ಗಮನ ಸೆಳೆಯುವ ಸೂಚನೆಗಳು, ನಿಯಮ ೩೫೧ರ ಅಡಿಯಲ್ಲಿ ೩೩ ಸೂಚನೆಗಳು, ಎರಡು ಖಾಸಗಿ ಸದಸ್ಯರುಗಳ ನಿರ್ಣಯಗಳು ಹಾಗೂ ಒಟ್ಟು ೧ ಸಾವಿರದ ೬೬೧ ಪ್ರಶ್ನೆಗಳು ಚೆರ್ಚೆಗೆ ಬರಲಿವೆ.

ಇದಲ್ಲದೆ, ಮಹಾದಾಯಿ ನೀರಿನ ಹಂಚಿಕೆ, ಕಬ್ಬು ಬೆಳೆಗಾರರ ಸಮಸ್ಯೆ, ನಂಜುಂಡಪ್ಪ ವರದಿಯ ಅನುಷ್ಟಾನದ ಸತ್ಯಾ ಸತ್ಯೆ ಸೇರಿದಂತೆ ಉತ್ತರ ಕರ್ನಾಟಕದ ಜಲ್ವಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚೆರ್ಚೆಗೆ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ.

ಅಧಿವೇಶನದ ಮುನ್ನಾ ದಿನವಾದ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ವಿಧಾನ ಸಭೆಯ ಅಧ್ಯಕ್ಷ ಕೆ. ಬಿ. ಕೋಳಿವಾಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವಿಧೇಯಕ -೨೦೧೬, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ವಿಧೇಯಕ-೨೦೧೬, ಅಂತರ್-ವಿಷಯ ಆರೋಗ್ಯ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ಸಂಸ್ಥೆಯ ತಿದ್ದುಪಡಿ ವಿಧೇಯಕ-೨೦೧೭, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-೨೦೧೭ ಈ ನಾಲ್ಕು ಬಾಕಿ ಇರುವ ವಿಧೇಯಕಗಳ ಸ್ವೀಕೃತವಾಗಲಿವೆ. ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ವಿಧೇಯಕ ೨೦೧೭, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದಪಡಿ ವಿಧೇಯಕ -೨೦೧೭, ಕರ್ನಾಟಕ ಕೆಲವು ಅಧಿನಿಯಗಳನ್ನು ನಿರಸನಗೊಳಿಸುವ ವಿಧೇಯಕ ೨೦೧೭, ಕರ್ನಾಟಕ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ವಿಧೇಯಕ-೨೦೧೭, ಕರ್ನಾಟಕ ಧನ ವಿನಿಯೋಗ ವಿಧೇಯಕ ೨೦೧೭ ಹೊಸದಾದ ಐದು ವಿಧೇಯಕಗಳು ಸದನದ ಎದುರು‌ಬರಲಿವೆ ಎಂದು ಅವರು ಹೇಳಿದರು.

ವಿಧಾನಸಭಾ ಸದಸ್ಯ ಕೆ. ಗೋಪಾಲಯ್ಯ ಅವರು ಕರ್ನಾಟಕದಲ್ಲಿ ನಡೆಯುವ ಬ್ಯಾಂಕಿಂಗ್, ಕೇಂದ್ರದ ಅಬಕಾರಿ ಸೇವೆ, ಸ್ಟಾಪ್‌ ಸೆಲೆಕ್ಷನ್ ಸೇವೆ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ತೆಗೆದುಕೊಳ್ಳವುದು ಮತ್ತು ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ಅಗತ್ಯ ಕ್ರಮಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಲು ಸದಸನದಲ್ಲಿ ಖಾಸಗಿ ನಿರ್ಣಯಗಳನ್ನು ಮಂಡಿಸಲಿದ್ದಾರೆ.

ನಾಳೆ ಮುಂಜಾನೆ ೧೧ ಗಂಟೆಗೆ ಸದನ ಆರಂಭಗೊಳ್ಳುತ್ತಿದ್ದಂತೆ ಇತ್ತೀಚೆಗೆ ನಿಧನರಾಧ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್, ಹಾಲಿ ಸದಸ್ಯರಾಗಿದ್ದ ಜಮರುಲ್ ಇಸ್ಲಾಮ್ ಮತ್ತು ಚಿಕ್ಕಮಾದು ಎಸ್, ಮಾಜಿ ಸಚಿವ ರಾಮಭಾವು ಪೋತದಾರ, ವಿಧಾನಸಭೆಯ ಮಾಜಿ ಸದಸ್ಯರುಗಳಾದ ವಿದ್ಯಾಧರ ಗುರುಜಿ, ಸಿದ್ಧನಗೌಡ ಸೋಮನಗೌಡ ಪಾಟೀಲ, ಬಿ.ಬಿ. ಶಿವಪ್ಪ, ಜಯಪ್ರಕಾಶ್ ಶೆಟ್ಟಿ ಕೊಳ್ಳೆಬೈಲು, ಬಿ.ಜಿ.ಕೊಟ್ರಪ್ಪ, ಖ್ಯಾತ ವಿಜ್ಞಾನಿ ಪ್ರೊ. ಯು. ಆರ್. ರಾವ್, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ರಂಗಕರ್ಮಿ ಏಣಗಿ ಬಾಳಪ್ಪ, ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಸಂತಾಪ ಸೂಚನೆ ಮಂಡಿಸಲಾಗುವುದು ಎಂದು ವಿಧಾನ ಸಭಾಧ್ಯಕ್ಚ ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ.

ಬೆಳಗಾವಿಯ ಅಧಿವೇಶನಕ್ಕೆ ಹಣಕಾಸು ಇಲಾಖೆ ಈಗಾಗಲೇ ೨೧ ಕೋಟಿ‌ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಜಿಎಸ್ ಟಿ ತೆರೆಯ ಕಾರಣ ಖರ್ಚು ಇನ್ನಷ್ಟು ಜಾಸ್ತಿಯಾಗುವುದರಿಂದ ಪೊಲೀಸ್ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೆ ಖರ್ಚಿನ ಹೊರಯಾಗಲಿದ್ದು ಹೆಚ್ವುವರಿಯಾಗಿ ಐದು ಕೋಟಿ ರೂಪಾಯಿಗಳನ್ನು ಕೇಳಲಾಗಿದೆ ಎಂದು ಕೋಳಿವಾಡ ತಿಳಿಸಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *