ಬೆಳಗಾವಿ- ಬೆಳಗಾವಿ ಅಧಿವೇಶನಕ್ಕೆ ಇನ್ನೆರಡು ದಿನ ಬಾಕಿ ಉಳಿದಿದೆ ಈಗಿನಿಂದಲೇ ಗೂಟದ ಕಾರುಗಳ ಓಡಾಟ ಬೆಳಗಾವಿಯಲ್ಲಿ ಶುರುವಾಗಿದೆ ಅಧಿಕಾರಿಗಳು ಬೆಳಗಾವಿಗೆ ಬರುವ ಅತಿಥಿಗಳಿಗೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿದಲು ಅಹೋ ರಾತ್ರಿ ದುಡಿಯುತ್ತಿದ್ದಾರೆ
ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಯುತ್ತದೆ ಈ ಸಂಧರ್ಭದಲ್ಲಿ ಮಂತ್ರಿಗಳ ಓಡಾಟ ಸೈರನ್ ಸದ್ದು ಕೇಳಿ ಬೆಳಗಾವಿಯ ಜನ ಪುಳಕಿತರಾಗುತ್ತಾರೆ ಸರ್ಕಾರವೇ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಬಂದಿದೆಯಲ್ಲ ಅಂತಾ ಖುಷಿ ಪಡುತ್ತಾರೆ ಆದ್ರೆ ಅಧಿವೇಶನ ಮೂಗಿಸಿ ಇದೇ ಸರ್ಕಾರ ಬೆಂಗಳೂರಿಗೆ ಮರಳುವಾಗ ಸರ್ಕಾರಿ ಗಂಟು ಮೂಟೆಯಿಂದ ಬೆಳಗಾವಿಯ ಪಾಲು ಕೊಡಲಿಲ್ಲವಲ್ಲ ಅಂತಾ ಇದೇ ಬೆಳಗಾವಿಯ ಜನ ಹಿಡಿಶಾಪ ಹಾಕುತ್ತಾರೆ
ಬೆಳಗಾವಿಯಲ್ಲಿ ಮೊಟ್ಟಮೊದಲ ಬಾರಿಗೆ ಕುಮಾರಸ್ವಾಮಿ ಅವರು ವಿಧಾನಮಂಡಲದ ಅಧಿವೇಶನ ನಡೆಸಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾಂಧಿ ಹಾಡಿದರು ಬೆಳಗಾವಿಯಲ್ಲಿ ಖಾಯಂ ಅಧಿವೇಶನ ನಡೆಯಬೇಕು ಬೆಳಗಾವಿಯ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಲೆಂದು ಇದೇ ಕುಮಾರಸ್ವಾಮಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಶಿಲನ್ಯಾಸ ನೇರವೇರಿಸಿದರು ನಂತರ ಯಡಿಯೂರಪ್ಪ ಇದನ್ನು ಸಾಕಾರಗೊಳಿಸಿದ್ದು ಇತಿಹಾಸ
ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ಉತ್ತರ ಕರ್ನಾಟಕದ ಜನ ಈ ಅಧಿವೇಶನದಲ್ಲಿ ನಮ್ಮ ಲೀಡರ್ ಗಳು ನಮ್ಮ ಬಗ್ಗೆ ಚರ್ಚೆ ಮಾಡುತ್ತಾರೆ ನಮಗೆ ಅಭಿವೃದ್ಧಿಯ ಉಡುಗರೆಗಳನ್ನು ಕೊಡುತ್ತಾರೆ ಅಂತ ಅಸೆಗಣ್ಣಿನಿಂದ ಅಧಿವೇಶನದ ಕಲಾಪಗಳ ಮೇಲೆ ನಿಗಾ ಇಡುತ್ತಾರೆ ಆದ್ರೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಕಲಾಪಗಳನ್ನು ಒಮ್ಮೆ ಗಣಿ.ಇನ್ನೊಮ್ಮೆ ಕಾವೇರಿ.ಮತ್ತೊಮ್ಮೆ ಕಬ್ಬಿನ ದರ ಹೀಗೆ ಹಲವಾರು ವಿಷಯಗಳಿಗೆ ಬೆಳಗಾವಿ ಅಧಿವೇಶನದ ಕಲಾಪಗಳು ಬಲಿಯಾಗಿದ್ದು ಇನ್ನೊಂದು ಇತಿಹಾಸ ನಿರೀಕ್ಷೆಗಳನ್ನು ಕುಳಿತ ಉತ್ತರ ಕರ್ನಾಟಕದ ಜನತೆಗೆ ಸಿಕ್ಕಿದ್ದು ಶೂನ್ಯ
ಅಧಿವೇಶನ ಆರಂಭವಾದರೆ ಬೆಳಗಾವಿಯಲ್ಲಿ ಪ್ರತಿಭಟನೆಗಳ ಸುಗ್ಗಿ ಜನ ಬೇಡಿಕೆ ಹೊತ್ತು ಸುವರ್ಣಸೌಧದ ಎದುರು ಬರ್ತಾರೆ ಪ್ರತಿಭಟನೆ ಮಾಡ್ತಾರೆ ಮಂತ್ರಿಗಳು ಮನವಿ ಸ್ವಿಕರಿಸಿ ಹೋಗ್ತಾರೆ ಆದ್ರೆ ಇದರಲ್ಲಿ ಎಷ್ಟು ಮನವಿಗಳಿಗೆ ಸರ್ಕಾರ ಸ್ಪಂದಿಸಿತು ಎಷ್ಟು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತು ಎನ್ನುವದು ಇನ್ನುವರೆಗೆ ಇದಕ್ಕೆ ಉತ್ತರ ಸಿಕ್ಕಿಲ್ಲ
ಸುವರ್ಣ ಸೌಧ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರ ಮಕ್ಕಳಿಗೆ ಸರ್ಕಾರಿ ನೌಕರಿ ಸಿಗಲಿಲ್ಲ ಭೂಮಿ ಕೊಟ್ಟ ಹಲಗಾ ಬಸ್ತವಾಡ ಗ್ರಾಮದ ಜನರಿಗೆ ಸುವರ್ಣ ಸೌಧದ ನೀರು ಸಿಗದೇ ಇರುವದು ದುರ್ದೈವ ಹತ್ತು ದಿನದ ಅಧಿವೇಶನ ಮುಗಿದ ಬಳಿಕ ಸುವರ್ಣ ವಿಧಾನ ಸೌಧದ ನೀರು ನಮಗೆ ಕೊಡಿ ಎಂದು ಹಲಗಾ ಬಸ್ತವಾಡದ ಜನ ಪ್ರತಿ ವರ್ಷ ಹೋರಾಟ ಮಾಡುತ್ತಲೇ ಬಂದಿದ್ದು ಈ ವರ್ಷ ಇದಕ್ಕೆ ಪರಿಹಾರ ಸಿಗಬಹುದೇ ಎನ್ನುವದನ್ನು ಕಾದು ನೋಡಬೇಕಾಗಿದೆ
ಈ ಬಾರಿ ಅಧಿವೇಶನದ ಪರಿಸ್ಥಿತಿ ಬೇರೆಯೇ ಇದೆ ಮುಖ್ಯಮಂತ್ರಿ ಕುಮಾರಸ್ವಾಮಿ ಖುರ್ಚಿ ಉಳಿಸಿಕೊಳ್ಳುವ ಚಿಂತೆಯಲ್ಲಿದ್ದಾರೆ ಯಡಿಯೂರಪ್ಪ ಖುರ್ಚಿ ಮರಳಿ ಪಡೆಯುವ ತಯಾರಿಯಲ್ಲಿದ್ದಾರೆ ಖರ್ಚಿ ಜಗಳದಲ್ಲಿ ಬೆಳಗಾವಿ ಅಧಿವೇಶನವೇ ಖರ್ಚಿಗೆ ಬೀಳುವ ಆತಂಕ ಎದುರಾಗಿದೆ
ಬಿಜೆಪಿ ಸಿಎಂ ಕುಮಾರಸ್ವಾಮಿ ಅವರನ್ನು ಪೇಚಿಗೆ ಸಿಲುಕಿಸಲು ಹಲವಾರು ಪ್ರಶ್ನೆಗಳನ್ನು ರೆಡಿ ಮಾಡಿಕೊಂಡಿದೆ
ಪ್ರಶ್ನೆ ನಂ 1 ಕುಮಾರಸ್ವಾಮಿ ಅವರೇ ರೈತರ ಸಾಲ ಮನ್ನಾ ಇನ್ನುವರೆಗೆ ಯಾಕಾಗಿಲ್ಲ
ಪ್ರಶ್ನೆ ನಂ2 ಕುಮಾರಸ್ವಾಮಿ ಅವರೇ ರೈತರ ಕಬ್ಬಿನ ಬಿಲ್ಲ್ ಇನ್ನುವರೆಗೆ ವಸೂಲಿ ಮಾಡಿ ರೈತರಿಗೆ ಯಾಕೆ ಕೊಟ್ಟಿಲ್ಲ
ಪ್ರಶ್ನೆ ನಂ ,3 ಕುಮಾರಸ್ವಾಮಿ ಅವರೇ ಕಬ್ಬಿನ ದರ ಇನ್ನುವರೆಗೆ ನಿಗದಿ ಮಾಡಿಲ್ಲವೇಕೆ?
ಹೀಗೆ ಬಿಜೆಪಿ ಹತ್ತು ಹಲವು ಪ್ರಶ್ನೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಕೇಳಲು ರೈತ ಯಾತ್ರೆ ಹಮ್ಮಿಕೊಂಡಿದೆ
ಇದಕ್ಕೆ ಉತ್ತರ ನೀಡಲು ಕುಮಾರಸ್ವಾಮಿ ಯಾವ ರೀತಿ ತಯಾರಿ ಮಾಡಿಕೊಂಡಿದ್ದಾರೆ ಎನ್ನುವದನ್ನು ಕಾದು ನೋಡಬೇಕಾಗಿದೆ
ಒಟ್ಟಾರೆ ಅಧಿವೇಶನ ನಡೆಸಲು ಬೆಳಗಾವಿ ಸಜ್ಜಾಗಿದೆ ಸುವರ್ಣ ಸೌಧದ ಎದುರು ಖಾಕಿ ಪಡೆ ಬ್ಯಾರಿಕೇಡ್ ಹಾಕಿಕೊಂಡು ಅತಿಥಿಗಳಿಗೆ ಕಾಯುತ್ತಿದ್ದಾರೆ ಅತಿಥಗಳಿಗೆ ಊಟ,ವಸತಿಯ ಸೌಲಭ್ಯ ಮಾಡಲಾಗಿದೆ ಅತಿಥಿಗಳಿಗೆ ಸುವರ್ಣಸೌಧಕ್ಕೆ ಕರೆತರಲು ವಾಹನಗಳು ರೆಡಿಯಾಗಿವೆ ಅತಿಥಿಗಳು ಬೆಳಗಾವಿಗೆ ಬರುವದಷ್ಟೇ ಬಾಕಿ ಇದೆ ಈ ಬಾರಿಯ ಬೆಳಗಾವಿಯ ಸೇಷನ್ ಅರ್ಥಪೂರ್ಣವಾಗಲಿ ಇದೊಂದು ಫ್ಯಾಶನ್ ಶೋ ಆಗದಿರಲಿ