ಬೆಳಗಾವಿ- ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ,ಅಭಿವೃದ್ಧಿಯ ದಿಕ್ಸೂಚಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನವ್ಹೆಂಬರ್ 13 ರಿಂದ 24 ರ ವರೆಗೆ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿದು ಬಂದಿದೆ
ಬುಧವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಚಳಿಗಾಲದ ಅಧಿವೇಶನದ ಕುರಿತು ಚರ್ಚೆ ನಡೆದಿದ್ದು ಸರ್ಕಾರ ನವ್ಹೆಂಬರ್ 13 ರಿಂದ 24 ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ನಿರ್ಧಾರ ಕೈಗೊಂಡಿದ್ದು ಆದರೆ ಇದಕ್ಕೆ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ
ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಗೋಕಾಕ ತಾಲ್ಲೂಕಿನ ಮೂಡಲಗಿಗೆ ತಾಲ್ಲೂಕಿನ ಸ್ಥಾನಮಾನ ನೀಡಿದ್ದು ಬೆಳಗಾವಿ ಜಿಲ್ಲೆ ಈಗ ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿದ ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಿ ಹೊರಹೊಮ್ಮಿದೆ
ಮೂಡಲಗಿಯಲ್ಲಿ ಸಂಬ್ರಮ ಮನೆಮಾಡಿದ್ದು ಜಾರಕಿಹೊಳಿ ಸಹೋದರರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಮೂಡಲಗಿ ತಾಲ್ಲೂಕು ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ