ಬೆಳಗಾವಿ- ಇಂದು ಮಹಿಳಾ ದಿನಾಚರಣೆ ಬೆಳಗಾವಿ ನಗರದ ನೂರಾರು ಜನ ಮಹಿಳೆಯರು ಕಾಕತಿ ಹೊರ ವಲಯದಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ರೂಪಿಸಲು ಒತ್ತಾಯಿಸಿ ನಗರದಲ್ಲಿ ಮೌನ ಕ್ರಾಂತಿ ನಡೆಸಿ ಎಲ್ಲರ ಗಮನ ಸೆಳೆದರು
ಬೆಳಗಾವಿ ನಗರದ ಧರ್ಮ ವೀರ ಸಂಬಾಜಿ ವೃತ್ತದಲ್ಲಿ ಸಮಾವೇಶ ಗೊಂಡ ನೂರಾರು ಜನ ಮಹಿಳೆಯರು ನಲವತ್ತಕ್ಕೂ ಹೆಚ್ಚು ಮಹಿಳಾ ಮಂಡಳಗಳ ಸದಸ್ಯರು ಮುಖಕ್ಕೆ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣೆಗೆ ನಡೆಸಿದರು
ಧರ್ಮ ವೀರ ಸಂಬಾಜಿ ವೃತ್ತ,ಗಣಪತಿ ಬೀದಿ ಮಾರುತಿ ಗಲ್ಲಿ ಸಮಾದೇವಿ ಗಲ್ಲಿ ರಾಮದೇವ ಗಲ್ಲಿ ಹಾಗು ಕಾಕತಿ ವೇಸ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದಾ ಹಜಾರೆ ಕಾಕತಿ ಹೊರ ವಲಯದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಸಹಿಸಲು ಸಾಧ್ಯವಿಲ್ಲ ಸರ್ಕಾರ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ರೂಪಿಸಬೇಕು ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಕಾನೂನು ರೂಪಿಸಬೇಕೆಂದು ಒತ್ತಾಯ ಮಾಡಿದರು
ಮೇಯರ್ ಸಂಜೋತಾ ಬಾಂಧೇಕರ,ಸರೀತಾ ಪಾಟೀಲ, ಲೀಣಾ ಟೋಪಣ್ಣವರ,ಮನಿಷಾ ಸುಭೇದಾರ ಪುಷ್ಪಾ ಪರ್ವತರಾವ, ಅನುಶ್ರೀ ದೇಶಪಾಂಡೆ ಮತ್ತು ಎಲ್ಲ ನಗರ ಸೇವಕಿಯರು ಹಾಗು ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು