ಬೆಳಗಾವಿ: ಸರ್ಕಾರಿ ಕಾರ್. ಮೋಡಕಾ ಬಜಾರ್!!! ಜಿಲ್ಲಾ ಪಂಚಾಯಿತಿ ಕಚೇರಿಗೆ ಪ್ರತಿನಿತ್ಯ ಬರುವ ಜನರು ಇಲ್ಲಿ ಧೂಳು ತಿನ್ನುತ್ತ ನಿಂತಿರುವ ವಾಹನಗಳನ್ನು ಕಂಡು ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ.
ಜಿಲ್ಲಾ ಪಂಚಾಯತಿ ಕಚೇರಿ ಆವರಣದಲ್ಲಿ ಸುಸಜ್ಜಿತ ಜಿಪ್ಸಿ ಕಾರು ಹಾಗೂ ಐದು ಅಂಬಾಸಿಡರ್ ಕಾರುಗಳು ಹಲವಾರು ವರ್ಷಗಳಿಂದ ಧೂಳು ತಿಂದು ತಿಂದು ಕೊಳೆತು ಹೋಗಿವೆ. ಈ ಕಾರುಗಳ ಪರಿಸ್ಥಿತಿಯು ನೋಡಿದರೆ ಇದು ಸರ್ಕಾರಿ ಕಚೇರಿಯೋ ಅಥವಾ ಸರ್ಕಾರಿ ವಾಹನಗಳ ಮೋಡಕಾ ಬಜಾರೋ? ಎಂಬ ಅನುಮಾನ ಮೂಡುತ್ತದೆ.
ಅಧಿಕಾರಿಗಳು ಇವುಗಳನ್ನು ದುರಸ್ತಿ ಮಾಡಿ ಬಳಕೆ ಮಾಡಬಹುದಾಗಿದೆ. ಆದರೆ, ಎಲ್ಲರಿಗೂ ಹೊಸ ಮಾಡೆಲ್‌ಗಳ ಕಾರುಗಳೇ ಬೇಕು. ಹಾಗಾಗಿ ಯಾರೂ ಇವುಗಳನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ
ಜಿಲ್ಲಾ ಪಂಚಾಯತಿ,ಆರೋಗ್ಯ ಇಲಾಖೆ,ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಗಳಲ್ಲಿಯೂ ಸರ್ಕಾರಿ ಕಾರುಗಳು ಧೂಳು ತನ್ನುತ್ತಿವೆ
ಹಳೆಯ ಕಾರುಗಳನ್ನು ಟೆಂಡರ್ ಕರೆದು ಮಾರಾಟ ಮಾಡಬೇಕು ಇಲ್ಲವಾದಲ್ಲಿ ಅವುಗಳನ್ನು ದುರಸ್ಥಿ ಮಾಡಿ ಮರು ಬಳಕೆ ಮಾಡಬೇಕು ಆದರೆ ಜಿಲ್ಲಾ ಪಂಚಾಯತಿಯಲ್ಲಿ ನಿಂತಿರುವ ಕಾರುಗಳು ಕೊಳೆಯುತ್ತಿದ್ದರು ಅಧಿಕಾರಿಗಳು ಅವುಗಳನ್ನು ವಿಲೇವಾರಿ ಮಾಡುವ ಮನಸ್ಸು ಮಾಡುತ್ತಿಲ್ಲ