ಬೆಳಗಾವಿ-ಶ್ರೀ ಮಹಾಲಕ್ಷ್ಮೀ ಮಲ್ಟಿ ಮತ್ತು ಡಿಸ್ಟ್ರಿಕ ಪ್ರೈಯ ಲಿಮಿಟೆಡ್ ನಲ್ಲಿ ಹೂಡಿಟ್ಟ ಹಣವನ್ನು ಮರಳಿ ಕೊಡಿಸುವಂತೆ ಆಗ್ರಹಿಸಿ ಆಥಣಿ ಗ್ರಾಮಸ್ಥರು ಗುರುವಾರ ಜಿಪಂ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಆಧ್ಯಕ್ಷೆ ಆಶಾ ಐಹೊಳೆ ಮತ್ತು ಅವರ ಪತಿಯ ಒಡೆತನದಲ್ಲಿರುವ ಸೊಸೈಟಿಯಲ್ಲಿ ಹೂಡಿಟ್ಟ ಹಣವನ್ನು ಗ್ರಾಹಕರು ಮರಳಿ ಕೇಳಲು ಹೋದಾದ ಅಟ್ರಾಸಿಟಿ ಕೇಸ್ ಹಾಕುವುದಾಗಿ ಬೇದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೆಳಗಾವಿ, ಕೊಲ್ಲಾಪುರ, ಚಿಕ್ಕೋಡಿ, ವಿಜಯಪುರ, ನಿಪ್ಪಾಣಿ, ಜಳಗಾಂವ, ರಾಮಾಪುರ ಎಲ್ಲ ಕಡೆಗಳ ಗ್ರಾಹಕರು ಮಹಾಲಕ್ಷ್ಮೀ ಮಲ್ಟಿ ಮತ್ತು ಡಿಸ್ಟ್ರಿಕ್ಟ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಯಾರಿಗೂ ಹಣವನ್ನು ಬಡ್ಡಿ ಇಲ್ಲದೆ ಸಹ ಮತ್ತು ಬಡ್ಡಿ ಹಾಕಿ ಕೊಡಲು ಕೂಡ ತಯಾರು ಇರುವುದಿಲ್ಲ ಎಂದು ಜಿಪಂ ಅಧ್ಯಕ್ಷರ ಮೇಲೆ ಹರಿಹಾಯ್ದಿದ್ದಾರೆ.
ಠೇವಣಿ ದಾರರ ಹಣ ಮರಳಿ ನೀಡದ ಜಿಪಂ ಅಧ್ಯಕ್ಷೆ ಆಶಾ ಹಾಗೂ ಅವರ ಪತಿ ಪ್ರಶಾಂತ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.