ಜನರ ದಿಕ್ಕು ತಪ್ಪಿಸುತ್ತಿರುವ ಜೋಳದ ರೊಟ್ಟಿ ಊಟ..!


ಬೆಳಗಾವಿ- ಜೋಳದ ರೊಟ್ಟಿ ಅದ್ಹೇಗೆ ಜನರ ದಿಕ್ಕು ತಪ್ಪಿಸಲು ಸಾಧ್ಯ ಅಂತ ನೀವು ತೆಲೆ ಕೆಡಿಸಿಕೊಳ್ಳಬೇಡಿ ಜಿಲ್ಲಾ ಪಂಚಾಯತಿ ಕಚೇರಿಯ ದ್ವಾರ ಬಾಗಿಲಲ್ಲಿರುವ ಬೋರ್ಡ ಜನರ ದಾರಿ ತಪ್ಪಿಸುತ್ತಿದೆ

ಕಚೇರಿಯ ದ್ವಾರ ಬಾಗಿಲಲ್ಲಿಯೇ ಇಲ್ಲಿ ಜೋಳದ ರೊಟ್ಡಿ ಊಟ ಮತ್ತು ಉಪಹಾರ ಸಿಗುತ್ತದೆ ಎಂದು ಬರೆಯಲಾಗಿದೆ ಜಿಲ್ಲಾ ಪಙಚಾಯತಿ ಕಚೇರಿಯಲ್ಲಿ ಜೋಳದ ರೊಟ್ಟಿ ಉಟದ ಯೋಜನೆ ಆರಂಭಿಸಿರಬಹುದೆಂದು ಕೆಲವರು ಕಚೇರಿಯ ಒಳಗೆ ಹೋಗಿ ರೊಟ್ಟಿ ಉಟ ಸಿಗುವದೆಲ್ಲಿ ? ಎಂದು ದಿನ ನಿತ್ಯ ವಿಚಾರಿಸುತ್ತಿರುವದರಿಂದ ಕಚೇರಿಯ ಸಿಭ್ಭಂಧಿಗೂ ಮಜಗುರವಾಗುತ್ತಿದೆ

ಹಾಗಾದರೆ ಈ ಬೋರ್ಡ ಬರೆದವರು ಯಾರು? ಅಂತ ವಿಚಾರಿಸಿದರೆ ಜಿಪಂ ಕಚೇರಿಯ ಹಿಂದೆ ಕ್ಯಾಂಟೀನ ಇದೆ ಈ ಕ್ಯಾಂಟೀನನಲ್ಲಿ ರೊಟ್ಟಿ ಉಟ ಪ್ರಾರಂಛ ಆಗಿದೆ ಈ ಕ್ಯಾಂಟೀನ ಕಚೇರಿಯ ಹಿಂದೆ ಇದೆ ಇಲ್ಲಿ ಊಟ ಸಿಗುತ್ತದೆ ಎಂದು ಫಲಕದಲ್ಲಿ ಬರೆದಿಲ್ಲ ಹೀ ಗಾಗಿ ಸಾರ್ವಜನಿಕರು ಕನ್ಫ್ಯುಸ್ ಮಾಡಿಕೊಂಡು ಬಹುಶ ಜಿಲ್ಲಾ ಪಂಚಾಯತಿಯವರೇ ಉಚಿತವಾಗಿ ರೊಟ್ಟಿ ಉಟದ ಯೋಜನೆಯನ್ನು ಜನ ಹಿತಕ್ಕಾಗಿ ಜಾರಿ ಮಾಡಿರಬಹುದೆಂದು ನಂಬಿದ ಕೆಲವರು ಮೋಸ ಹೋಗಿದ್ದಾರೆ ಈ ಬೋರ್ಡ ನೋಡಿದರೆ ಇದು ಜಿಪಂ ಕಚೇರಿ ಅಲ್ಲ ಇದೊಂದು ಹೊಟೆಲ್ ಇರಬಹುದೆಂದು ನಂಬಿ ಕೆಲವರು ಕಚೇರಿಯ ಒಳಗೆ ಹೋಗಿ ಮಜುಗರಕ್ಕೀಡಾದ ಅನೇಕ ಪ್ರಸಂಗಗಳು ಇಲ್ಲಿ ನಡೆದಿವೆ

ರೊಟ್ಟಿ ಉಟದ ಬೋರ್ಡ ಮಾತ್ರ ಈಗ ಈ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *