ಬೆಳಗಾವಿ-ಸೋಮವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭೆ ನಡೆಯಿತು ಪ್ರಥಮ ಸಭೆಯಲ್ಲಿಯೇ ಶಿಕ್ಷಣ ಇಲಾಖೆಯ ಶೂ ಹಗರಣ ಪ್ರತಿಧ್ವನಿಸಿತು ಈ ಹಗರಣದಲ್ಲಿ 25 ಕೋಟಿ ಆವ್ಯೆವಹಾರ ನಡೆದಿದೆ ಎಂದು ಸದಸ್ಯರು ಗಂಭಿರ ಾರೋಪ ಮಾಡಿದರು
ಈ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಶಂಕರ ಮಾಡಲಗಿ ಬೆಳಗಾವಿ ಜಿಲ್ಲೆಯಲ್ಲಿ ಶೂ ಖರಿದಿಗೆ ಶಿಕ್ಷಣ ಿಲಾಖೆ 30 ಕೋಟಿ ಖರ್ಚು ಮಾಡಿದೆ ಶೂ ಬೆಲೆ 80 ರೂ ಇದೆ ಆದರೆ ಒಂದು ಜೋಡಿ ಶೂ ಗೆ 275 ರೂ ಖರ್ಚು ಮಾಡಲಾಗಿದ್ದು ಶೂಗಳು ಕಳಪೆ ಮಟ್ಟದಾಗಿದ್ದು ಶೂ ಖರಿದಿಯಲ್ಲಿ 25 ಕೋಟಿ ಆವ್ಯೆವಹಾರ ನಡೆದಿದೆ ಎಂದು ಶಂಕರ ಮಾಡಲಗಿ ಆರೋಪಿಸಿದರು ಈ ಕುರಿತು ಸ್ಪಷ್ಠಣೆ ನೀಡುವಂತೆ ಡಿಡಿಪಿಐ ಗೆ ನಾಲ್ಕು ತಿಂಗಳ ಹಿಂದೆ ಪತ್ರ ಬರೆದರೂ ಇನ್ನುವರೆಗೆತ್ತರ ನೀಡಿಲ್ಲ ಎಂದು ಆರೋಪಿಸಿದಾಗ ಿದಕ್ಕೆ ಸದಸ್ಯರೆಲ್ಲರೂ ಧ್ವನಿಗೂಡಿಸಿದರು
ಮದ್ಯಪ್ರವೇಶಿಸಿ ಮಾತನಾಡಿದ ಸಿಇಓ ಗೌತಮ ಬಗಾದಿ ಶೂ ಹಗರಣದ ಕುರಿತು ಕೂಡಲೇ ವರದಿ ನೀಡುವಂತೆ ಡಿಡಿಪಿಐ ಗೆ ಸೂಚನೆ ನೀಡಿದಾಗ ಇದಕ್ಕೆ ಸದಸ್ಯರು ಅಸಮಾಧಾನ ವ್ಯೆಕ್ತಪಡಿಸಿದರು ಹಗರಣದ ತನಿಖೆಗೆ ತನಿಖಾ ಸಮಿತಿ ನೇಮಿಸಬೇಕೆಂದು ಒತ್ತಾಯಿಸಿದರು. ಮೊದಲು ವರದಿ ಬರಲಿ ವರದಿ ಬಗ್ಗೆ ಆಸಮಾಧಾನವಿದ್ದರೆ ನಂತರ ಬೆಕಾದರೆ ಸಮಿತಿ ರಚಿಸೋಣ ಎಂದು ಬಗಾದಿ ಗೌತಮ ಭರವಸೆ ನೀಡಿದರು
