ಬೆಳಗಾವಿ
ಕೇಂದ್ರ ಬಸ್ ನಿಲ್ದಾಣದ ಬದಿ ಇರುವ ಬೀದಿ ವ್ಯಾಪಾರಿಗಳ ಅಂಗಡಿಗಳನ್ನು ಪಾಲಿಕೆಯ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ತೆರವುಗೊಳಿಸಿರುವುದನ್ನು ಖಂಡಿಸಿ ಶುಕ್ರವಾರ ರಿಪಬ್ಲಿಕನ್ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ 35 ವರ್ಷಗಳಿಂದ ಕೇಂದ್ರ ಬಸ್ ನಿಲ್ದಾಣದ ಪಕಗಕದಲ್ಲಿ ಬೀದಿ ವ್ಯಾಪಾರವನ್ನಹ ಮಾಡುತ್ತ ಬಂದಿರುವ ಬಡ ಕುಟುಂಬದವರ ಮೇಲೆ ಗುರುವಾರ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯಿಂದ ಯಾವುದೇ ಮುನ್ಸೂಚನೆ ಇಲ್ಲದೆ ಒಂದು ವರ್ಷದಿಂದ ಅದೇ ವ್ಯಾಪರದ ಮೇಲೆ ದಿನ ದಲಿತರ ಕುಟುಂಬಗಳು ಅವಲಂಬಿತವಿದ್ದವು. ಆದರೆ ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ನಮಗೆ ಪರ್ಯಾಯ ಜಾಗೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ಬೀದಿ ವ್ಯಾಪಾರಿಗಳನ್ನು ಯಾವುದೇ ಕಾರಣಕ್ಕೂ ಮುನ್ಸೂಚನೆ ಇಲ್ಲದೆ ತೆರವುಗೊಳಿಸಬಾರದು. ಹಾಗೂ ಅವರ ವ್ಯಾಪಾರವನ್ನು ನಿಲ್ಲಿಸಬಾರದು ಎಂದು ಆದೇಶ ನೀಡಿದೆ. ಆದರೂ ಬೆಳಗಾವಿಯಲ್ಲಿ ಪದೇ ಪದೇ ಬೀದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಅಂಗಡಿಗಳನ್ನು ತೆರವುಗೊಳಿಸಿರುವುದರಿಂದ ಬಡ ವ್ಯಾಪಾರಿಗಳ ಕುಟುಂಬ ಬೀದಿಗೆ ಬಂದಿದೆ. ಮಾನವೀಯತೆ ಆಧಾರದ ಮೇಲೆ ಅಲ್ಲಿ ಉಪಜೀವನ ನಡೆಸುವವರಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸುಲೇನಾನ ಜಮಾದಾರ, ಯಲ್ಲೇಶ ಬಚ್ಚಲಪುರಿ, ಮಲಿಕ ಮುಲ್ಲಾ, ಮುನ್ನಾ ಸೋಲಾಪುರೆ ಸೇರಿದಂತೆ ಮೊದಲಾದವರು ಹಾಜರಿದ್ದರು.
