ಇಂದು ವಕೀಲರ ಸಂಘಕ್ಕೆ ಚುನಾವಣೆ,ಮಾಂಗಳೇಕರ,ಕಿವಡಸಣ್ಣವರ ನಡುವೆ ನೇರ ಸ್ಪರ್ದೆ

ಬೆಳಗಾವಿ- ಇಂದು ಶನಿವಾರ ಬೆಳಗಾವಿ ವಕೀಲರ ಸಂಘದ ಚುನಾವಣೆ ನಡೆಯಲಿದೆ ಅದ್ಯಕ್ಷ ಸ್ಥಾನಕ್ಜಾಗಿ ಹಾಲಿ ಅಧ್ಯಕ್ಷ ವಿನಯ ಮಾಂಗಳೇಕರ ಹಾಗು ಕಿವಡಸಣ್ಣವರ ಸ್ಪರ್ದಿಸಿದ್ದು ಇಬ್ಬರ ನಡುವೆ ನೇರ ಸ್ಪರ್ದೆ ನಡೆಯುತ್ತಿದೆ

ಇಂದು ಶನಿವಾರ ಬೆಳಿಗ್ಗೆ ೧೦-೩೦ ರಿಂದ ಸಂಜೆ ಐದು ಘಂಟೆಯವರೆಗೆ ಮತದಾನ ನಡೆಯಲಿದೆ ಸಂಜೆ ಆರು ಘಂಟೆಯ ನಂತರ ಮತ ಏಣಿಕೆ ಕಾರ್ಯ ನಡೆಯಲಿದ್ದು ರಾತ್ರಿ ಎಂಟು ಘಂಟೆಗೆ ಫಲಿತಾಂಶ ಹೊರ ಬೀಳಲಿದೆ

ಜಿಲ್ಲೆಯ ವಕೀಲರ ವಲಯದಲ್ಲಿ ತೀರ್ವ ಕೂತೂಹಲ ಕೆರಳಿಸಿರುವ ಈ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನದ ಅಭ್ಯರ್ಥಿಗಳು ಕಳೆದ ಎರಡು ವಾರಗಳಿಂದ ಭರ್ಜರಿ ಪ್ರಚಾರ ಮಾಡಿದ್ದಾರೆ ಸಾಮಾಜಿಕ ಜಾಲತಾಣಗಳ ಮೂಲಕವೂ ಇಬ್ಬರು ಅಭ್ಯರ್ಥಿಗಳ ಪ್ರಚಾರ ನಡೆದಿದೆ

ಸಂಘದಲ್ಲಿ ೧೮೨೪ ಜನ ಸದಸ್ಯ ಮತದಾರರಿದ್ದಾರೆ ಅವರೆಲ್ಲರೂ ಇಂದು ಉಮೇದುವಾರರ ಭವಿಷ್ಯ ನಿರ್ಧರಿಸಲಿದ್ದಾರೆ  ಮಾಂಗಳೇಕರ ಅವರಿಗೆ ಜಿಲ್ಲೆಯ ಪ್ರಭಾವಿ ರಾಜಕಾರಿಣಿಯೊಬ್ಬರು ಬೆಂಬಲಕ್ಜೆ ನಿಂತಿರುವದರಿಂದ ಅವರು ಗೆಲುವಿನ ಉತ್ಸಾಹದಲ್ಲಿದ್ದಾರೆ ಜತೆಗೆ ಕಿವಡಸಣ್ಣವರ ಕೂಡಾ ಜಿದ್ದಾ ಜಿದ್ದಿಗೆ ಬಿದ್ದು ಗೆಲುವಿಗಾಗಿ ಮತದಾರರನ್ನು ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ

ಉಪಾಧ್ಯಕ್ಷ ಸ್ಥಾನಕ್ಕೆ ವಿಕೆ ಕಳ್ಳಿಮನಿ,ಕೊಂಗಳಿ ಹಣಮಂತ ಎ ಶಿಂಧೆ ಶಿವಾಜಿ,ಸಯ್ಯದ ಮಹ್ಮದ ರಫೀಕ, ಎ ಸಾವಂತ, ಜಿ ಎಸ್ ಪಾಟೀಲ,ಧನರಾಜ ಗವಳಿ, ಮುರುಘೇಂದ್ರಗೌಡ ಕಣದಲ್ಲಿದ್ದಾರೆ

ಪ್ರಧಾನ ಕಾರ್ಯದರ್ಶಿ ,ಜಂಟಿ ಕಾರ್ಯದರ್ಶಿ ,ಮ್ಯಾನೇಜಮೆಂಟ ಕಮೀಟಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಆಯ್ಕೆ ಬಯಸಿ ಹಲವಾರು ಜನ ಉಮೇದವಾರರು ಸ್ಪರ್ದಿಸಿದ್ದಾರೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *