ಬೆಳಗಾವಿ- ಮೊನ್ನೆ ರಾತ್ರಿ ಬೆಳಗಾವಿ ಪಕ್ಕದ ಕಾಕತಿಯಲ್ಲಿ ನಡೆದ ಮರ್ಡರ್ ಕೇಸ್ ಗೆ ಸಮಂಧಿಸಿದಂತೆ,ಕಾಕತಿ ಪೋಲೀಸರು ನಾಲ್ಕು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಮೊನ್ನೆ ರಾತ್ರಿ ನಾಲ್ಕು ಜನ ಗೆಳೆಯರು ಕೂಡಿಕೊಂಡು ಎಣ್ಣೆ ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ಕಾಕತಿ ಪೆಟ್ರೋಲ್ ಬಂಕ್ ಬಳಿ ಪರಸ್ಪರ ಜಗಳಾಡುತ್ತಿದ್ದರು,ಇದನ್ನು ಗಮನಿಸಿದ ಯುವಕನೊಬ್ಬ ರಾತ್ರಿ ಹೊತ್ತಾಗಿದೆ ಜಗಳಾಡಬೇಡಿ ಎಂದು ಬುದ್ದಿವಾದ ಹೇಳಲು ಹೋದಾಗ,ನಾಲ್ಕು ಜನ ಗೆಳೆಯರು ಸೇರಿ ಬುದ್ದಿವಾದ ಹೇಳಲು ಹೋದ ಯುವಕನ ಜೊತೆ ಜಗಳಾಡಿ,ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದರು ಬುದ್ದಿವಾದ ಹೇಳಲು ಹೋದ ,ಕಾಕತಿ ಗ್ರಾಮದ ಮುಸ್ಲೀಂ ಗಲ್ಲಿಯ 32 ವರ್ಷದ ಸಲಾವುದ್ದೀನ್ ಬಕಾಲಿ ಎಂಬಾತನ ಕೊಲೆ ಆಗಿತ್ತು
ಸಲಾವುದ್ದೀನ್ ಬಕಾಲಿ ಎಂಬಾತನ ಕೊಲೆ ಪ್ರಕರಣಕ್ಕೆ ಸಮಂಧಿಸಿದಂತೆ ಕೊಲೆ ಮಾಡಿದ ಆರೋಪದ ಮೇಲೆ ಕಾಕತಿ ಗ್ರಾಮದ ಅಮರ ಮೇತ್ರಿ,ಅಖಿಲ್ ಮೇತ್ರಿ,ಪರಶರಾಮ ಇರಿಗಾರ್, ಸುನೀಲ್ ಬಾಳಪ್ಪಗೌಡ ಎಂಬಾತರನ್ನು ಕಾಕತಿ ಪೋಲೀಸರು ಇಂದು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪೋಟೋ ಶಿರ್ಷಿಕೆ- ಕಾಕತಿಯಲ್ಲಿ ಕೊಲೆಯಾದ ಸಲಾವುದ್ದೀನ್ ಬಕಾಲಿ (32)
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ