Breaking News

ಗುಡ್ಡ ಕುಸಿತ,ಬೆಳಗಾವಿ ಚೋರ್ಲಾ ರಸ್ತೆ ಸಂಪರ್ಕ ಬಂದ್….

ಬೆಳಗಾವಿ- ಇಂದು ಬೆಳಗಿನ ಜಾವದಿಂದ ನಿರಂತರವಾಗಿ ಕೊಂಕಣ ಬೆಲ್ಟ್ ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು,ವಿಪರೀತ ಮಳೆಯಿಂದಾಗಿ,ಬೆಳಗಾವಿ ಚೋರ್ಲಾ ರಸ್ತೆಯಲ್ಲಿ ಅಪಾರ ಪ್ರಮಾಣದ ಗುಡ್ಡ ಕುಸಿದಿದೆ‌.

ಧಾರಾಕಾರ ಮಳೆಗೆ ಛೋರ್ಲಾ ಬಳಿ ಭಾರೀ ಪ್ರಮಾಣದ ಗುಡ್ಡ ಕುಸಿತವಾಗಿ, ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತ ಗೊಂಡಿದೆ.ಪಶ್ಚಿಮ ಘಟ್ಟ ಕೊಂಕಣ ಬೆಲ್ಟ್, ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆ ಸುರಿಯುತ್ತಿದೆ. ಗೋವಾದ ಛೋರ್ಲಾ ಘಾಟ ಸಮೀಪ ಗುಡ್ಡ ಕುಸಿದಿದೆ.

ಗುಡ್ಡ ಕುಸಿತದಿಂದ ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕ ಸ್ಥಗಿತಗೊಂಡಿದ್ದು, ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ.  ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಗೋವಾ-ಬೆಳಗಾವಿ ರಾಜ್ಯ ಹೆದ್ದಾರಿ ಮೇಲೆ ಭಾರೀ ಪ್ರಮಾಣದ ‌ಮಣ್ಣು ಹಾಗೂ ಮರಗಳು ಉರಳಿವೆ. ಘಟನೆ ಹಿನ್ನೆಲೆಯಲ್ಲಿ ಗೋವಾದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
—-

Check Also

ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…

ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನೆಲ, ದೇಶದಲ್ಲಿ ಕ್ರಾಂತಿ ಆದಾಗ …

Leave a Reply

Your email address will not be published. Required fields are marked *