ಬೆಳಗಾವಿ- ಬೆಳಗಾವಿಯ ಶಹಾಪೂರ ಪ್ರದೇಶದ ಮಾಹಿ ಆಸ್ಪತ್ರೆ ಬಳಿ ಮಹಿಳೆಯಬ್ಬಳ ರಸ್ತೆಯಲ್ಲೇ ಹೆರಿಗೆ ಆದ ಘಟನೆ ನಡೆದಿದೆ.
ಮಹಿಳೆಯನ್ನು ಹೆರಿಗೆಗಾಗಿ ಮಕ್ಕಳ ಆಸ್ಪತ್ರೆಗೆ ತರಲಾಗಿತ್ತು ಆದರೆ ಈ ಆಸ್ಪತ್ರೆ ಬಂದ್ ಆಗಿತ್ತು ಅದಕ್ಕೆ ಈ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಹೋಗುವ ಸಂಧರ್ಭದಲ್ಲಿ ಮಹಿಳೆಯ ಹೆರಿಗೆ ರಸ್ತೆಯಲ್ಲೇ ಆಗಿದೆ .
ವಡಗಾವಿ ಮೂಲದ ಈ ಮಹಿಳೆಯನ್ನು ಲಾಕ್ ಡೌನ್ ಸಂಧರ್ಭದಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವ ಹಿನ್ನಲೆಯಲ್ಲಿ ಮಾಹಿ ಎಂಬ ಮಕ್ಕಳ ಆಸ್ಪತ್ರೆಗೆ ತರಲಾಗಿತ್ತು .
ಅಟೋದಲ್ಲಿ ಈ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ಸಂಧರ್ಭದಲ್ಲಿ ಮಹಿಳೆಗೆ ಪ್ರಸವ ವೇದನೆ ಹೆಚ್ಚಾಗಿದೆ ಈ ಸಂಧರ್ಭದಲ್ಲಿ ಅಟೋ ನಿಲ್ಲಿಸಿದಾಗ
ಸ್ಥಳೀಯ ಮಹಿಳೆಯರು ಸೇರಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ರಸ್ತೆಯಲ್ಲೇ ಹೆರಿಗೆ ಆಗಿದ್ದು ತಾಯಿ ಮತ್ತು ಮಗು ಆರೋಗ್ಯ ವಾಗಿದ್ದಾರೆ .ಸ್ಳಳಕ್ಕೆ ದೌಡಾಯಿಸಿದ ಶಹಾಪೂರ ಪೋಲೀಸರು ತಾಯಿ ಮತ್ತು ಮಗುವನ್ನು ಟಿಳಕವಾಡಿಯ ರಾನಡೆ ಆಸ್ಪತ್ರೆಗೆ ಸೇರಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ