ಬೆಳಗಾವಿ-ಬೆಳಗಾವಿ ಗಡಿ ವಿದಾದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.ನಿನ್ನೆಯಷ್ಟೆ ಚರ್ಚೆಗೆ ಬಂದಿದ್ದ ಈ ವಿವಾದ ತಾರ್ಕಿಕ ಹಂತ ತಲಪುವ ಸಾದ್ಯತೆಗಳು ಹತ್ತಿರವಾಗಿವೆ.
ಒಂದು ಕಡೆ ಗಡಿ ವಿವಾದದ ಕೇಸ್ ಬಗ್ಗೆ ರಾಜ್ಯ ಸರ್ಕಾರದ ನಿರಾಸಕ್ತಿ ವಹಿಸಿದೆ.ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಕೇಸ್ 18 ವರ್ಷಗಳಿಂದ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ.ನಿನ್ನೆ ಸುಪ್ರೀಂ ಕೋರ್ಟ್ ನ ತ್ರೀವಳಿ ಪೀಠದ ಮುಂದೆ ವಿಚಾರಣೆಗೆ ಬಂದಿದ್ದ ಕೇಸ್ ಮಹತ್ವದ ಟ್ವೀಸ್ಟ್ ಪಡೆದಿದೆ.ನವೆಂಬರ್ 23ರಂದು ಪ್ರಕರಣ ಅಂತಿಮ ವಿಚಾರಣೆಗ ನಡೆಸಿ ಮಹತ್ವದ ನಿರ್ಧಾರ ಹೊರಬೀಳಲಿದೆ.
2004ರ ಮಾರ್ಚ್ 29ರಂದು ಮಹಾರಾಷ್ಟ್ರ ಸರ್ಕಾರದಿಂದ ಸುಪ್ರೀಂನಲ್ಲಿ ದಾವೆ ಹೂಡಲಾಗಿತ್ತು.ಬೆಳಗಾವಿ ಸಹಿತ 865 ಪಟ್ಟಣ, ಗ್ರಾಮಗಳನ್ನು ತಮಗೆ ಸೇರಿಸಬೇಕು ಎಂದು ಮಹಾರಾಷ್ಟ್ರ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿತ್ತು.ಗಡಿ ವಿವಾದ ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರಲ್ಲ ಎಂದು ಕರ್ನಾಟಕ ಸರ್ಕಾರ ವಾದ ಮಂಡಿಸಿತ್ತು.ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುತ್ತೆ ಎಂದು ಮಹಾರಾಷ್ಟ್ರ ಪ್ರತಿವಾದ ಮಂಡಿಸಿತ್ತು.
ಪ್ರಕರಣ ಜವಾಬ್ದಾರಿ ವಹಿಸಬೇಕಿದ್ದ ಗಡಿ ಸಂರಕ್ಷಣಾ ಆಯೋಗ ನಿಷ್ಕ್ರಿಯವಾಗಿದೆ.ಕನ್ನಡ ಪರ ಹೋರಾಟಗಾರಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
2018ರಿಂದ ರಾಜ್ಯದಲ್ಲಿ ಗಡಿ ಉಸ್ತುವಾರಿ ಸಚಿವ ನೇಮಕವೇ ಆಗಿಲ್ಲ.ಗಡಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರೋ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿ ಅದರ ಮೇಲುಸ್ತುವಾರಿ ನೋಡಿಕೊಳ್ಳಲು ಸಚಿವರನ್ನು ನೇಮಿಸಿದೆ.
ಉದ್ಧವ್ ಠಾಕ್ರೆ ಸರ್ಕಾರ ಇಬ್ಬರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದರು.ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸಹ ಗಡಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.ರಾಜ್ಯ ಸರ್ಕಾರದಿಂದ ದಕ್ಷ ವಕೀಲರ ತಂಡ ನೇಮಕ ಪ್ರಕ್ರಿಯೆ ಆಗಿಲ್ಲ ಅನ್ನೋದು ಕನ್ನಡಪರ ಹೋರಾಟಗಾರರ ಆಕ್ರೋಶವಾಗಿದೆ.ಗಡಿ ಭಾಗದ ಹೋರಾಟಗಾರರ ಸಭೆಯನ್ನು ನಡೆಸಿ ಕಾನೂನು ಕ್ರಮ ವಹಿಸಬೇಕು,ಗಡಿ ವಿಷಯವನ್ನು ಸರ್ಕಾರ ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಗಡಿಭಾಗದ ಕನ್ನಡಿಗರು ಆಗ್ರಹಿಸಿದ್ದಾರೆ.
ನವಂಬರ 23 ರಂದು ಬೆಳಗಾವಿ ಗಡಿವಿವಾದದ ಕುರಿತು ಸುಪ್ರೀಂಕೋರ್ಟ್ ನಲ್ಲಿ ಅಂತಿಮ ವಿಚಾರಣೆ ನಡೆಯಲಿದೆ. ಬೆಳಗಾವಿ ಗಡಿವಿವಾದ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುತ್ತದೆಯೋ ಅಥವಾ ಇಲ್ಲವೋ ಎನ್ನುವದರ ಬಗ್ಗೆ ನಿಲುವು ಪ್ರಕಟವಾಗಲಿದೆ.