ಬೆಳಗಾವಿ-ಬೆಳಗಾವಿಯಲ್ಲಿ ಚಾಕು ತೋರಿಸಿ ಕಣ್ಣಿಗೆ ಕಾರದಪುಡಿ ಎರೆಚಿ ಹಣದೋಚುವ ಗ್ಯಾಂಗ್ ಹಾವಳಿ ಹೆಚ್ಚಾಗಿದ್ದು ಬೆಳಗಾವಿಗೆ ಹೂ ಸಪ್ಲಾಯ್ ಮಾಡಲು ಬಂದ್ ಹೂವಿನ ವ್ಯಾಪಾರಿಯ ಕಣ್ಣಿಗೆ ಕಾರದಪುಡಿ ಎರೆಚಿ ಆತನಿಗೆ ಚಾಕೂ ತೋರಿಸಿ ಬೆದರಿಸಿ ಆತನ ಮೇಲೆ ಹಲ್ಲೆ ಮಾಡಿ 24 ಲಕ್ಷ 22 ಸಾವಿರ ರೂ ದರೋಡೆ ಮಾಡಿದ ಘಟನೆ ಬೆಳಗಾವಿಯ ಗಾಂಧೀ ನಗರ ಬಳಿ ಇರುವ ಸಾಗರ ಹೊಟೇಲ್ ಬಳಿ ನಡೆದಿದೆ
ತುಮಕೂರು ಜಿಲ್ಲೆಯ ಶಿರಾ ನಗರದ 48 ವರ್ಷ ವಯಸ್ಸಿನ ನಾರಾಯಣ ಮುದ್ದಪ್ಪ ಎಂಬಾತ ಬೆಳಗಾವಿ,ವಿಜಯಪೂರ,ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಹೂವಿನ ಗಟ್ಟೆಗಳನ್ನು ಸಪ್ಲಾಯ್ ಮಾಡುತ್ತಿದ್ದ ಹಣ ಕಲೆಕ್ಷನ್ ಮಾಡಲು ಈತ ಭಾನುವಾರ ಬೆಳಗಾವಿಗೆ ಬಂದಿದ್ದ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದ ಎದುರಿನ ಅಪೋಲೋ ಲಾಜ್ ನಲ್ಲಿ ತಂಗಿದ್ದ ಈತ ಹೂವಿನ ವ್ಯಾಪಾರಿಗಳಿಂದ ಹಣ ಕಲೆಕ್ಷನ್ ಮಾಡಿಕೊಂಡು ಈತ ರಾತ್ರಿ ಶಿರಾ ನಗರಕ್ಕೆ ಮರಳಿ ಹೋಗಲು ಗಾಂಧಿ ನಗರದ ಬಳಿ ಇರುವ ಸಾಗರ ಹೊಟೇಲ್ ಹತ್ತಿರ ಖಾಸಗಿ ಬಸ್ ಗಾಗಿ ಕಾಯುತ್ತಿರುವಾಗ ರಾತ್ರಿ 11 ಘಂಟೆ ಸುಮಾರಿಗೆ ದಾಳಿ ಮಾಡಿದ ಇಬ್ಬರು ಕಿರಾತಕರು ನಾರಾಯಣ ಮುದ್ದಪ್ಪನ ಕಣ್ಣಿಗೆ ಕಾರದ ಪುಡಿಯನ್ನು ಎರೆಚಿ ಆತನಿಗೆ ಚಾಕೂ ತೋರಿಸಿ ಆತನ ಮೇಲೆ ಹಲ್ಲೆ ಮಾಡಿ ಆತನ ಬಳಿ ಇದ್ದ ಹಣ ತುಂಬಿದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ
ಇಬ್ಬರು ಯುವಕರು ದಾಳಿ ಮಾಡಿ ಬ್ಯಾಗ್ ಕಸಿದುಕೊಂಡಿದ್ದಾರೆ ಮತ್ತೊಬ್ಬ ಯುವಕ ಹಾಯವೇ ನಲ್ಲಿ ಬೈಕ್ ತಗೊಂಡು ನಿಂತಿದ್ದ ಬ್ಯಗ್ ಕಸಿದುಕೊಂಡ ಇಬ್ಬರು ಯುವಕರು ಬ್ಯಾಗ್ ನ್ನು ಬೈಕ್ ಸವಾರ ನಿಗೆ ಶಿಪ್ಟ ಮಾಡಿ ಸ್ವಲ್ಪ ಮುಂದಕ್ಕೆ ಕ್ರಮಿಸಿ ಮೂವರು ಖದೀಮರು ಅದೇ ಬೈಕ್ ಮೇಲೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ
ಕೆಲ ದಿನಗಳ ಹಿಂದಷ್ಟೆ ಬೆಳಗಾವಿ ನಗರದ ಸಿಪಿಎಡ್ ಮೈದಾನದ ಬಳಿ ಇಬ್ಬರು ಯುವಕರು ಒಂಟಿ ಬೈಕ್ ಸವಾರನ ಮೇಲೆ ದಾಳಿ ಮಾಡಿ ಆತನಿಗೆ ಚಾಕೂ ತೋರಿಸಿ ಆತನ ಬೈಕ್ ಮತ್ತು ಹಣವನ್ನು ದರೋಡೆ ಮಾಡಿದ ಬೆನ್ನಲ್ಲಿಯೇ ಬೆಳಗಾವಿ ನಗರದಲ್ಲಿ ಈಗ ಮತ್ತೊಂದು ದರೋಡೆ ಪ್ರಕರಣ ನಡೆದಿರುವದು ದುರ್ದೈವ
ಬೆಳಗಾವಿ ನಗರದಲ್ಲಿ ನೂರಾರು ಸಿಸಿ ಟಿವ್ಹಿ ಕ್ಯಾಮರಾ ಅಳವಡಿಸಲಾಗಿದೆ ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮರಾ ಕಣ್ಗಾವಲು ತಪ್ಪಿಸಿ ದರೋಡೆ ಮಾಡುತ್ತಿರುವ ವಿಷಯ ಈಗ ಬೆಳಗಾವಿ ನಿವಾಸಿಗರನ್ನು ಆತಂಕಕ್ಕೀಡು ಮಾಡಿದೆ
ಹೂವಿನ ವ್ಯಾಪಾರಕ್ಕಾಗಿ ಬೆಳಗಾವಿಗೆ ಬಂದ ಶಿರಾ ನಗರದ ವ್ಯಾಪಾರಿ 24 ಲಕ್ಷ ರೂ ಕಳೆದುಕೊಂಡು ಕಂಗಾಲಾಗಿದ್ದಾನೆ ಪೋಲೀಸರಿಗೆ ದೂರು ನೀಡಿ ನ್ಯಾಯಕ್ಕಾಗಿ ಕಾಯುತ್ತಿದ್ದಾನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ