ಬೆಳಗಾವಿ- ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಖಾಸಗಿ ವೈದ್ಯರ ನಿಯಂತ್ರಣ ಕಾಯ್ದೆಯನ್ನು ವಿರೋಧಿಸಿ ರಾಜ್ಯದ ಖಾಸಗಿ ವೈದ್ಯರು ನಡೆಸುತ್ತರುವ ಮುಷ್ಕರ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದೆ ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿ ಬೆಳಗಾವಿಯ ಸುವರ್ಣ ಸೌಧದ ಎದುರು ಧರಣಿ ನಡೆಸುತ್ತಿರುವದರಿಂದ ರೋಗಿಗಳು ಪರದಾಡುವ ದೃಶ್ಯ ಸಾಮಾನ್ಯವಾಗಿದೆ
ಇಂದು ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿರುವದರಿಂದ ರೋಗಿಗಳಿಗೆ ತುಕ್ಕು ಹಿಡಿದಿರುವ ಸರ್ಕಾರಿ ಆಸ್ಪತ್ರೆಗಳೇ ಗತಿ ಹೀಗಾಗಿ ರೋಗಿಗಳು ಚಿಕಿತ್ಸೆ ಪಡೆಯಲು ಸಕರಕಾರಿ ಆಸ್ಪತ್ರೆಗಳಲ್ಲಿ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ
ಸರಕಾರಿ ದವಾಖಾನೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ.ಬೆಳಗಾವಿ ಜಿಲ್ಲೆಯಲ್ಲಿ ಖಾಸಗಿ ವೈದ್ಯರ ಮುಷ್ಕರದಿಂದ ಯಾವುದೇ ರೀತಿಯ ಪರಿಣಾಮ ವಾಗದಂತೆ ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರ ರಜೆಯನ್ನು ರದ್ದು ಪಡಿಸಿ ಯನಿ ವೇರ್..ಎವರಿ ವೇರ್..ಯನಿ ಟೈಮ್ ಸೇವೆ ನೀಡಲು ಜಿಲ್ಲಾ ವೈದ್ಯಾಧಿಕಾರಿಗಳು ಸರ್ಕಾರಿ ವ್ಶೆದ್ಯರಿಗೆ ಆದೇಶಿಸಿದ್ದಾರೆ
ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಆರೋಗ್ಯಾಧಿಕಾರಿ ನರಹಟ್ಟಿ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ವೈದ್ಯರ ಮುಷ್ಕರದಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಚಿದು ತಿಳಿಸಿದರು
ವೈದ್ಯರ ಧರಣಿ ನಾಲ್ಕನೇಯ ದಿನಕ್ಕೆ ಕಾಲಿಟ್ಟಿದ್ದು ವೈದ್ಯರು ಖಾಸಗಿ ವೈದ್ಯರ ನಿಯಂತ್ರಣ ವಿಧೇಯಕವನ್ನು ಮಂಡಿಸದಂತೆ ಆಗ್ರಹಿಸಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ
ಮಾದ್ಯಮಗಳ ಜೊತೆ ಮಾತನಾಡಿದ ವೈದ್ಯರ ಹೋರಾಟದ ರೂವಾರಿ ಡಾ ರವಿಂದ್ರ ಆರೋಗ್ಯ ಸಚಿವ ರಮೇಶ ಕುಮಾರ ಅವರ ಹಟದಿಂದ ಇಷ್ಟೆಲ್ಲಾ ಸಮಸ್ಯೆ ಆಗುತ್ತಿದೆ ನಮ್ಮ ಮುಷ್ಕರದಿಂದ ಆಗುವ ಅನಾಹುತಗಳಿಗೆ ಸರ್ಕಾರ ಹ್ರೆಣೆ ಅಲ್ಲ ಆರೋಗ್ಯ ಸಚಿವ ರಮೇಶ ಕುಮಾರ ಅವರೇ ಹೊಣೆ ಎಂದು ಡಾ ರವೀಚಿದ್ರ ಆರೋಪಿಸಿದರು
ಇತ್ತ ಸದನದಲ್ಲಿಯೂ ವೈದ್ಯರ ಮುಷ್ಕರ ಪ್ರತಿಧ್ವನಿಸಿದ್ದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಸಿಟಿ ರವಿ,ಹಾಗು ಬಿಜೆಪಿಯ ಅನೇಕ ಜನ ಸದಸ್ಯರು ಮಾತನಾಡಿ ಸಮಸ್ಯೆಯನ್ನ ಕೂಡಲೇ ಬಗೆಹರಿಸುವಚಿತೆ ಒತ್ತಾಯಿಸಿದ್ದಾರೆ