ಬೆಳಗಾವಿ- ಬೆಳಗಾವಿ ರೇಲ್ವೆ ಸ್ಟೇಶನ್ ಪಕ್ಕದ ಖಾನಾಪೂರ ರಸ್ತೆಯಲ್ಲಿ ಆಂಗ್ಲರು ನಿರ್ಮಿಸಿದ ರೇಲ್ವೇ ಮೇಲ್ಸೇತುವೆ ಈಗ ನೆನಪು ಮಾತ್ರ ಏಕೆಂದರೆ ಈ ಸೇತುವೆಯನ್ನು ನೆಲಸಮ ಮಾಡುವ ಕಾಮಗಾರಿಗೆ ಸಂಸದ ಸುರೇಶ ಅಂಗಡಿ ಇಂದು ಚಾಲನೆ ನೀಡಿದರು
ಮಾಜಿ ಶಾಸಕ ಅಭಯ ಪಾಟೀಲ ರಾಜೇಂದ್ರ ಹರಕುಣಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಮತ್ತು ರೆಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತಿ ರಿದ್ದರು
ಸೇತುವೆ ನೆಲಸಮ ಮಾಡುವ ಕಾಮಗಾರಿಗೆ ಭೂಮಿ ಪೂಜೆ ಮಾಡಿದ ಬಳಿಕ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸುರೇಶ ಅಂಗಡಿ ಹಳೆಯದಾದ ಸೇತುವೆ ನೆಲಸಮ ಮಾಡಿ ಅದೇ ಜಾಗದಲ್ಲಿ ಎತ್ತರದ ಸೇತುವೆ ನಿರ್ಮಿಸಲಾಗುತ್ತಿದೆ ಇಗಿರುವ ಸೇತುವೆಗಿಂತ ಆರು ಮೀಟರ್ ಎತ್ತರದ ಸೇತುವೆ ಇದಾಗಲಿದ್ದು ಅರವತ್ತು ಅಡಿ ಅಗಲವಾಗಲಿದ್ದು ಸೇತುವೆ ಕೆಳಗಡೆ ನಾಲ್ಕು ರೈಲ್ವೆ ಲೈನ್ ಗಳು ಹಾದು ಹೋಗಲಿವೆ ಕೂಡಲೇ ಕಾಮಗಾರಿ ಆರಂಬಿಸಿ 2018 ಮೇ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸುರೇಶ ಅಂಗಡಿ ಹೇಳಿದರು
ಪಾಲಿಕೆ ಅಧಿಕಾರಿಗಳು ಮತ್ತು ಹೆಸ್ಕಾಂ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಕೂಡಲೇ ಈ ರಸ್ತೆಯಲ್ಲಿನ ವಿದ್ಯುತ್ತ ಕಂಬಗಳನ್ನು ಮತ್ತು ಹೈಟೆನಶನ್ ತಂತಿಗಳನ್ನು ತೆರವು ಮಾಡಬೇಕು ಎಂದು ಅಧಿಕಾರಿಗಳಿಗೆ ಅಂಗಡಿ ಸೂಚನೆ ನೀಡಿದರು
ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಪರ್ಯಾಯ ಮಾರ್ಗಗಳನ್ನು ಗುರುತಿಸಿ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಪೋಲೀಸ್ ಇಲಾಖೆಗೆ ಸೂಚನೆ ನೀಡಲಾಯಿತು