Breaking News

ವಾರ್ಡುಗಳ ಡೀ.ಲಿಮಿಟೇಶನ್..ಪಾಲಿಕೆ ಅಧಿಕಾರಿಗಳಿಗಿಲ್ಲ..ಟೇನ್ ಶನ್…!

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಬೆಳಗಾವಿ ನಗರದ ವಾರ್ಡುಗಳನ್ನು ಪುನರ್ ವಿಂಗಡನೆ ಮಾಡುವಂತೆ ೨೦೧೬ ಜುಲೈ ೨೫ ರಂದು ಬೆಳಗಾವಿ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿ ಬರೊಬ್ಬರಿ ಏಳು ತಿಂಗಳು ಗತಿಸಿದರೂ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಇನ್ನುವರೆಗೆ ಯಾವದೇ ರೀತಿಯ ಕ್ರಮ ಕೈಗೊಂಡಿಲ್ಲ

ವಾರ್ಡಗಳ ಪುನರ್ ವಿಂಗಡನೆ ಕುರಿತು ಜಿಲ್ಲಾಧಿಕಾರಿಳ ಆದೇಶ ಪಾಲಿಕೆ ಆಯುಕ್ತರ ಕೈ ಸೇರಿ ಏಳು ತಿಂಗಳು ಗತಿಸಿವೆ ಆದರೆ ಇನ್ನುವರೆಗೆ ಈ ಕುರಿತು ಪಾಲಿಕೆ ಅಧಿಕಾರಿಗಳು ನಯಾಪೈಸೆಯಷ್ಟು ಕೆಲಸ ಮಾಡಿಲ್ಲ ಈ ಕೆಲಸಕ್ಕಾಗಿ ಆಗಿನ ಕಂದಾಯಧಿಕಾರಿ ಬಗಲಿ ಅವರನ್ನು ನಿಯೋಜಿಸಲಾಗಿತ್ತು ಆದರೆ ಅವರ ಹುದ್ದೆ ಈಗ ಬದಲಾಗಿದ್ದು ವಾರ್ಡ ವಿಂಗಡನೆಯ ಕೆಲಸ ಈಗ ಬೇ ವಾರಸಾ ಆಗಿಬಿಟ್ಟಿದೆ

ವಾರ್ಡ ವಿಂಗಡನೆಯ ಕೆಲಸವನ್ನು ಪಾಲಿಕೆಯ ಪರಿಷತ್ತ ವಿಭಾಗದ ಅಂದರೆ ಕೌನ್ಸಿಲ್ ಸೆಕ್ಷನ್ ಅಧಿಕಾರಿಗಳು ಮಾಡುತ್ತಾರೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದರೆ ಇದು ನಮ್ಮ ಕೆಲಸ ಅಲ್ಲ ಇದನ್ನು ಕಂದಾಯ ವಿಭಾಗದ ಅಧಿಕಾರಿಗಳೇ ಮಾಡಬೇಕು ಅಂತಾರೆ ಕೌನ್ಸಿಲ್ ಸೆಕ್ಷನ್ ಅಧಿಕಾರಿಗಳು

ಹಸನ್ ಸಾಬನ ಟೋಪಿಯನ್ನು ಹುಸೇನ್ ಸಾಬ್ ಗೆ ಹಾಕಿ ಒಬ್ಬರ ಮೇಲೊಬ್ಬರು ಜವಾಬ್ದಾರಿ ಹಾಕಿ ವಾರ್ಡ ಪುನರ್ ವಿಂಗಡನೆಯ ಕೆಲಸದಿಂದ ಜಾರಿಕೊಳ್ಳುವ ಕೆಲಸ ಪಾಲಿಕೆಯಲ್ಲಿ ನಡೆಯುತ್ತಿದೆ

೨೦೦೬ ರಲ್ಲಿ ಆಗಿನ ಜಿಲ್ಲಾಧಿಕಾರಿ ಮತ್ತು ಪಾಲಿಕೆಯ ಆಡಳಿತ ಅಧಿಕಾರಿಯಾಗಿದ್ದ ಶಾಲಿನಿ ರಜನೀಶ ಅವರು ವಾರ್ಡುಗಳ ಪುನರ್ ವಿಂಗಡನೆ ಮಾಡಿದ್ದರು ಪ್ರತಿ ಹತ್ತು ವರ್ಷಕ್ಕೊಮ್ಮೆ ವಾರ್ಡಗಳ ಪುನರ್ ವಿಂಗಡನೆ ಮಾಡಬೇಕೆನ್ನುವದು ಸರ್ಕಾರದ ನಿಯಮವಿದೆ

ಸರ್ಕಾರದ ನಿಯಮದ ಪ್ರಕಾರ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ೨೦೧೧ ರ ಜನಗಣತಿಯ ಪ್ರಕಾರ ವಾರ್ಡಗಳನ್ನು ಪುನರ್ ವಿಂಗಡನೆ ಮಾಡಿ ಮೂರು ತಿಂಗಳಲ್ಲಿ ವರದಿ ಒಪ್ಪಿಸುವಂತೆ ಸೂಚನೆ ನೀಡಿ ಏಳು ತಿಂಗಳು ಗತಿಸಿದರೂ ಈ ಕುರಿತು ಪಾಲಿಕೆಯಲ್ಲಿ ಪ್ರಗತಿ ಆಗಿಲ್ಲ

ಬೆಳಗಾವಿ ನಗರದ ಜನಸಂಖ್ಯೆ ಹತ್ತು ವರ್ಷದಲ್ಲಿ ದುಪ್ಪಟ್ಟು ಆಗಿದೆ ನಗರ ನಾಲ್ಕೂ ದಿಕ್ಕುಗಳಲ್ಲಿ ಬೆಳೆಯುತ್ತಿದೆ ಪಾಲಿಕೆ ಆಯುಕ್ತರು ಕೂಡಲೇ ವಾರ್ಡಗಳ ವಿಂಗಡನೆಗೆ ಅಧಿಕಾರಿಯನ್ನು ನಿಯೋಜಿಸುವದು ಅತ್ಯಗತ್ಯವಾಗಿದೆ ಈ ಕುರಿತು ಜಿಲ್ಲಾಧಿಕಾರಿಗಳು ಗಮನಹರಿಸುವದು ಸೂಕ್ತ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *