ಬೆಳಗಾವಿ- ಮಹಾ ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಹೆಲಿಕಾಪ್ಟರ್ ನಲ್ಲಿ ಮಹಾರಾಷ್ಟ್ರ ಮೀರಜ ಗೆ ಪ್ರಯಾಣ ಬೆಳೆಸಿದರು
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ
ಮುಂಬೈನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಫಡ್ನವಿಸ್.ಬೆಳಗಾವಿ ನಿಲ್ದಾಣದಿಂದ ಮೀರಜ್‌ಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸಿದರು
ಮಹಾರಾಷ್ಟ್ರ ಸಿಎಂಗೆ ಡಿಸಿ ಎಸ್ ಬಿ ಬೊಮ್ಮನಹಳ್ಳಿ, ನಗರ ಪೊಲೀಸ ಆಯುಕ್ತ ಡಿ.ಸಿ ರಾಜಪ್ಪ ಸ್ವಾಗತಿಸಿದರು
ಸಂಜೆ ಮತ್ತೆ ಮೀರಜ್ ನಿಂದ ರಸ್ತೆ ಮಾರ್ಗವಾಗಿ ಆಗಮಿಸಿವ ಅವರನ್ನು ಬೆಳಗಾವಿಯ ಎಂಈಎಸ್ ನಾಯಕರು ಭೇಟಿಯಾಗಿ ಬೆಳಗಾವಿ ಮರಾಠಿಗರು ಅನಾಥರಾಗಿದ್ದೇವೆ ನಮಗೆ ಹೆಲ್ಪ ಮಾಡಿ ಎಂದು ಮನವಿ ಮಾಡಿಕೊಳ್ಳಲು ತಯಾರಿ ನಡೆಸಿದ್ದಾರೆ
ಇಂದು ರಾತ್ರಿ 8 ಘಂಟೆಗೆ ದೇವೇಂದ್ರ ಫಡ್ನವೀಸ್ ಅವರು ಮಿರಜ್ ನಿಂದ ಬೈ ರೋಡ್ ಮೂಲಕ ಬೆಳಗಾವಿಗೆ ಬಂದು ವಿಶೇಷ ವಿಮಾನದ ಮೂಲಕ ಮುಂಬಯಿ ಗೆ ಪ್ರಯಾಣ ಬೆಳೆಸಲಿದ್ದು ಈ ಸಂಧರ್ಭದಲ್ಲಿ ಬೆಳಗಾವಿಯ ಎಂಈಎಸ್ ನಾಯಕರಾದ ದೀಪಕ ದಳವಿ,ಪ್ರಕಾಶ ಮರಗಾಳೆ ನೇತಾಜಿ ಜಾಧವ ಸೇರಿದಂತೆ ಹಲವಾರು ನಾಯಕರು ಮಹಾರಾಷ್ಟ್ರ ಸಿಎಂ ಭೇಟಿ ಆಗಲು ಸಿದ್ಧತೆ ನಡೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ