Breaking News

ಬೆಳಗಾವಿ ರೇಲ್ವೆ ನಿಲ್ಧಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು ನಾಮಕರಣ ಮಾಡಿ…

ಬೆಳಗಾವಿ ರೇಲ್ವೆ ನಿಲ್ಧಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು ನಾಮಕರಣ ಮಾಡಿ…

ಬೆಳಗಾವಿ- ಇಂದು ಬೆಳಗಾವಿ ಮಹಾನಗರದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ನಿಮಿತ್ಯ ಬೈಕ್ ಜಾಗೃತಿ ರ್ಯಾಲಿ ನಡೆಯಿತು,ನೂರಾರು ಜನ ಸಮಾಜದ ಯುವಕರು ಭಾಗವಹಿಸಿದ್ದರು.

ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಬೈಕ್ ರ್ಯಾಲಿಗೆ ಕಾರಂಜಿಮಠ,ಹಾಗೂ ಹುಕ್ಕೇರಿ ಹಿರೇಮಠದ ಶ್ರೀಗಳು ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ ,ಬೆಳಗಾವಿಯಲ್ಲಿ ಅದ್ದೂರಿಯಾಗಿ ಬಸವ ರ್ಯಾಲಿ ನಡೆಯುತ್ತಿದೆ,ಇಂತಹ ಸಂಧರ್ಭದಲ್ಲಿ ಸರ್ಕಾರ ಕೂಡಲೇ ಬೆಳಗಾವಿಯ ರೈಲು ನಿಲ್ಧಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ರು.

ಶಾಸಕ ಅನೀಲ ಬೆನಕೆ ಮಾತನಾಡಿ ಬಸವೇಶ್ವರರ ಜಯಂತಿ ಉತ್ಸವ ಎರಡು ವರ್ಷದ ಬಳಿಕ ನಡೆಯುತ್ತಿದೆ,ಈ ವರ್ಷ ಯುವಕರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವದು ಸಂತಸದ ಸಂಗತಿಯಾಗಿದ್ದು ,ಬಸವಣ್ಣನವರ ತತ್ವಗಳನ್ನು ಜಗತ್ತಿನ ಮೂಲೆ,ಮೂಲೆಗೂ ಮುಟ್ಟಿಸುವ ಕಾರ್ಯವನ್ನು ಎಲ್ಲರು ಕೂಡಿ ಮಾಡಬೇಕಿದೆ ಎಂದರು.

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *