Breaking News

ಮಗುವನ್ನು ಕೆರೆಗೆ ಎಸೆದ ರಾಕ್ಷಸಿ ತಾಯಿ ಅರೆಸ್ಟ್

ಬೆಳಗಾವಿ-ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಮೂರು ದಿನದ ಹೆಣ್ಣು ಮಗುವನ್ನು ಬಿಟ್ಟು ಪರಾರಿಯಾಗಿದ್ದ ಘಟನೆಯ ಬೆನ್ನಲ್ಲಿಯೇ ಈಗ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ರಾಕ್ಷಸಿ ತಾಯಿಯೊಬ್ಬಳು, ಹೆತ್ತಮಗುವನ್ನು ಕೆರೆಗೆ ಎಸೆದ ಘಟನೆ ಕಣಬರ್ಗಿ ಕೆರೆಯಲ್ಲಿ ನಡೆದಿದೆ.

ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು, ಕೆಟ್ಟ ಸಂಬಂಧಿಕರು ಇರಬಹುದು ಆದೆ ಕಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ನಂಬಿದ್ದಾರೆ. ಇದಕ್ಕೆ ತದ್ವಿರುದ್ದವಾಗ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಎರಡು ತಿಂಗಳ ಶಿಶುವಿಗೆ ರೋಗ ಇದೆ. ಇದು ವಾಸಿಗುತ್ತಿಲ್ಲ ಎಂದು ತಾಯಿಗೆ ಮಗುವಿನ ಹತ್ಯಗೆ ಯತ್ನ ಮಾಡಿದ್ದಾಳೆ. ಆದರೇ ದೇವರ ಸ್ವರೂಪದಲ್ಲಿ ಬಂದ ಸ್ಥಳೀಯರು ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಹೀಗೆ ಕರೆಯ ಬಳಿಯಲ್ಲಿ ಮಗುವನ್ನು ರಕ್ಷಿಸಿರೋ ಜನರು, ತಾಯಿಗೆ ಬೈಯ್ದು ಬುದ್ದಿ ಹೇಳುತ್ತಿರೋ ಸ್ಥಳೀಯರು, ಅಲ್ಲೇನಾಯಿತು ಎಂದು ಗಾಬರಿಯಿಂದ ಸೇರಿರೋ ನೂರಾರು ಜನರು ಈ ಎಲ್ಲಾ ದೃಶ್ಯಗಳು ಇಂದು ಬೆಳಗಾವಿಯ ನಗರಕ್ಕೆ ಹೊಂದಿಕೊಂಡು ಇರೋ ಕಣಬರ್ಗಿ ಕೆರೆಯ ಬಳಿಯಲ್ಲಿ ನಡೆದಿವೆ. ಮದ್ಯಾಹ್ನ ಒಂದು ಗಂಟೆಯ ಸಮಯಲ್ಲಿ ಮಗುವನ್ನು ಎತ್ತಿಕೊಂಡು ಮಹಿಳೆಯೊಬ್ಬಳು ಅನುಮಾನಸ್ಪವಾಗಿ ಓಡಾಡುತ್ತಿದ್ದಳು. ನೋಡು ನೋಡುತ್ತಲೇ ಮಗುವನ್ನು ಕಬ್ಬಿಣದ ಸಲಾಕೆಯ ಆಚೆ ಇರೋ ಕೆರೆಯಲ್ಲಿ ಎಸೆದು ಬಿಟ್ಟಳು ಇದನ್ನು ನೋಡಿದ ಸ್ಥಳೀಯರು ಗಾಬರಿಯಿಂದ ಅಲ್ಲಿಗೆ ಓಡೋಡಿ ಬಂದಿದ್ದಾರೆ. ಜನ ಬರುತ್ತಲೇ ಅಳು ಮುಖ ಮಾಡಿಕೊಂಡ ಮಹಿಳೆ ಬೇರೊಂದು ಕಥೆಯನ್ನು ಹೇಳಲು ಆರಂಭ ಮಾಡಿದ್ದಾಳೆ. ವ್ಯಕ್ತಿಯೋರ್ವ ಕೆರೆಗೆ ಜಿಗಿದು ಮಗುವನ್ನು ರಕ್ಷಣೆ ಮಾಡಿ. ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ಓಡೋಡಿ ಬಂದು ದಾಖಲು ಮಾಡಿದ್ದಾರೆ. ಮಗು ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಚಾರ ತಿಳದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವಿನ ತಾಯಿವನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಹೀಗೆ ಹಾಡುಗಲೇ ಜನ ಓಡಾಡುವ ಸ್ಥಳದಲ್ಲಿ ಮಗುವನ್ನು ಕೆರೆಗೆ ಎಸೆಯಲು ಯತ್ನಿಸಿದ ಮಹಿಳೆಯ ಹೆಸರು ಶಾಂತಾ ಕರವಿನಕುಪ್ಪಿ(35) ಎಂದು ಗುರುತಿಸಲಾಗಿದೆ. ಶಾಂತಾಳ ಮೊದಲ ಮಗುವಿನ ಎರಡನೇ ವರ್ಷದ ಹುಟ್ಟು ಹಬ್ಬ ಇಂದು ಇತ್ತು. ಈಕೆ ರಾಮತೀರ್ಥ ನಗರದ ನಿವಾಸಿದ್ದು, ಇಂದು ಮದ್ಯಾಹ್ನ 1 ಗಂಟೆ ವೇಳೆಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಈ ಕೃತ್ಯ ಎಸಗಲು ಮುಂದಾಗಿದ್ದಾಳೆ. ಪೊಲೀಸರ ಪ್ರಾಥಮಿಕ ತನಿಖೆ ವೇಳೆಯಲ್ಲಿ ಈ ಮಹಿಳೆ ಎರಡು ತಿಂಗಳು ಮಗುವಿಗೆ ಮೂರ್ಚೆ ರೋಗವಿದೆ. ಈ ಹಿನ್ನೆಲೆಯಲ್ಲಿ ಅನೇಕ ಕಡೆ ವೈದ್ಯರನ್ನು ಸಂಪರ್ಕ ಮಾಡಿ ಚಿಕಿತ್ಸೆ ಪಡೆದ್ರು ಯಾವುದೇ ಪ್ರಯೋಜನ ಆಗಿಲಿಲ್ಲ. ಹೀಗಾಗಿ ಮಗುವನ್ನು ಕೊಲ್ಲಬೇಕು ಎನ್ನುವ ನಿರ್ಧಾರಕ್ಕೆ ಬಂದೆ ಹೇಳಿದ್ದಾಳೆ ಎನ್ನಲಾಗಿದೆ. ಮಗುವಿನ ತಂದೆ ಖಾಸಗಿ ಕಂಪನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪೊಲೀಸರು ಆತನ್ನು ಸದ್ಯ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಮಾತನಾಡಿದ ಆರೋಪಿ, ನಾನು ಸೆಲ್ಫಿ ತೆಗೆದುಕೊಳ್ಳೊಕೆ ಹೋಗಿದೆ, ಕಣ್ಣಿಗೆ ಚಕ್ರ ಬಂದು ಮಗು ನೀರಿನಲ್ಲಿ ಬಿದ್ದಿದೆ ಎಂಬ ಸುಳ್ಳನ್ನು ಮತ್ತೆ ಹೇಳಿದ್ದಾಳೆ.

ಕಳೆದ ಮೂರು ದಿನಗಳ ಬೆಳಗಾವಿಯಲ್ಲಿ ಗರ್ಭಿಣಿಯೊಬ್ಬಳು ಆಸ್ಪತ್ರೆಗೆ ದಾಖಲಾಗಿ ಹೆರಿಗೆ ಬಳಿಕ ಪರಾರಿಯಾದ ಪ್ರಕರಣ ನಡೆದಿತ್ತು. ಈಗ ಹೆತ್ತ ತಾಯಿಗೆ ಮಗವನ್ನು ಕೊಲೆ ಮಾಡಲು ಯತ್ನಿಸಿದ ಬೆಚ್ಚಿ ಬಿಳಿಸುವ ಘಟನೆ ನಡೆದಿದೆ. ಸದ್ಯ ಮಗುವನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎನ್ನುವುದು ಎಲ್ಲರ ಹಾರೈಕೆಯಾಗಿದೆ. ಮಕ್ಕಳಾಗಲಿ ಎಂದು ಅದೇಷ್ಟೋ ಜನ ಕಂಡ ಕಂಡ ದೇವರ ಮೊರೆ ಹೋಗುತ್ತಾರೆ. ಆದರೇ ಈ ಮಹಿಳೆ ಮಾತ್ರು ಇನ್ನೂ ಕಣ್ಣು ಬಿಡದ ಮಗುವನ್ನು ಕೊಲೆ ಮಾಡೊ ದ್ರೋಹ ಎಸಗಿದ್ದಾಳೆ. ಈ ಬಗ್ಗೆ ಮಾಳ ಮಾರತಿ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *