Breaking News

ಎಡಿಜಿಪಿ ಕಮಾಲ್, ಕನ್ನಡ ,ಮರಾಠಿ ಹೋರಾಟಗಾರರು ಈಗ ಭಾಯೀ,ಭಾಯೀ…!!

ಬೆಳಗಾವಿ-ಬೆಳಗಾವಿಯ ಗಡಿವಿವಾದದ ಹೋರಾಟದ ಇತಿಹಾಸದಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ಮತ್ತು ಎಂಇಎಸ್ ನಾಯಕರು ಒಂದೇ ಕಡೆ ಕುಳಿತುಕೊಂಡು, ಪರಸ್ಪರ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು,ಕ್ಯಾಮರಾ ಎದುರು ನಗುತ್ತಲೇ ಪೋಜು ಕೊಟ್ಟ ಉದಾಹರಣೆ ಇಲ್ಲ.ಆದ್ರೆ ಶುಕ್ರವಾರ ಇದು ಎಡಿಜಿಪಿ ಅಲೋಕ್ ಕುಮಾರ್ ಅವರ ವಿಶೇಷ ಕಾಳಜಿ ಮತ್ತು ಮುತವರ್ಜಿಯಿಂದ ಇದು ಸಾಧ್ಯವಾಗಿದೆ.

ಶುಕ್ರವಾರ ಬೆಳಗಾವಿಯ ಟಿಳಕವಾಡಿ ಪೋಲೀಸ್ ಠಾಣೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಕನ್ಬಡಪರ ಸಂಘಟನೆಗಳ ನಾಯಕರು ಹಾಗೂ ಎಂಇಎಸ್ ನಾಯಕರ ಸಭೆ ಕರೆದು ಉಭಯ ನಾಯಕರ ಜೊತೆ ಅತ್ಯಂತ ಆತ್ಮೀಯವಾಗಿ ಕಾಳಜಿಪೂರ್ವಕ ಸಮಾಲೋಚಣೆ ನಡೆಸಿದರು. ಎಂಇಎಸ್ ಮತ್ತು ಕನ್ನಡದ ನಾಯಕರ ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದರು.

ನಾವು ಯಾವುದೇ ರಾಜ್ಯದಲ್ಲಿದ್ದರೂ ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇವೆ ನಾವೆಲ್ಲರೂ ಭಾರತೀಯರು, ಒಂದೇ ತಾಯಿಯ ಮಕ್ಕಳು,ಭಾಷೆಯ ವಿಚಾರದಲ್ಲಿ ಪರಸ್ಪರ ಸಂಘರ್ಷ ಮಾಡುವದು ಸರಿಯಲ್ಲ.
ಗಡಿವಿವಾದದ ಕುರಿತು ಮಾನ್ಯ ಸುಪ್ರೀಂ ಕೋರ್ಟಿನಲ್ಲಿ ಅಂತಿಮ ಹಂತದ ವಿಚಾರಣೆ ನಡೆಯುತ್ತಿದೆ.ತೀರ್ಪು ಬರುವವರೆಗೂ ಇಬ್ಬರೂ ಶಾಂತಿ ಕಾಪಾಡಬೇಕು, ಭಾಷೆಯ ಹೆಸರಿನಲ್ಲಿ ಮಸಿ ಹಚ್ವುವದು,ವಾಹನಗಳ ಮೇಲೆ ಕಲ್ಲು ತೂರುವದು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡಬಾರದು. ಪರಸ್ಪರ ಸೌಹಾರ್ದತೆಯಿಂದ ಬದುಕಬೇಕು.ಶಾಂತಿ ಕಾಪಾಡಬೇಕು ಎಂದು ಎಡಿಜಿಪಿ ಅಲೋಕಕುಮಾರ ಉಭಯ ಸಂಘಟನೆಗಳ ನಾಯಕರಿಗೆ ಶಾಂತಿಯ ಪಾಠ ಹೇಳಿದ್ರು.

ಸಭೆಯಲ್ಲಿ ಮಾತನಾಡಿದ ಎಂಇಎಸ್ ನಾಯಕರು ನಮ್ಮ ಹೋರಾಟ ಕನ್ಬಡಿಗರ ವಿರುದ್ಧ ಅಲ್ಲ ,ನಮ್ಮ ಹೋರಾಟ ಇರುವುದು ಕೇಂದ್ರ ಮತ್ತು ರಾಜ್ಯಸರ್ಕಾರದ ವಿರುದ್ಧ ನಾವೆಲ್ಲರೂ ಇಲ್ಲಿ ಬಾಂಧವ್ಯದಿಂದ ಇದ್ದೇವೆ ಎಂದು ಹೇಳಿದ್ರು‌ .

ಕನ್ನಡಪರ ಸಂಘಟನೆಗಳ ನಾಯಕರು ಮಾತನಾಡಿ,ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಸಹೋದರರಂತೆ ಇದ್ದೇವೆ, ಮಹಾರಾಷ್ಟ್ರದ ನಾಯಕರು ರಾಜಕೀಯ ಲಾಭಕ್ಕಾಗಿ ಬೆಳಗಾವಿ ಗಡಿವಿವಾದದ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.

ಕನ್ನಡಪರ ಸಂಘಟನೆಗಳ ನಾಯಕರು ಹಾಗೂ ಎಂಇಎಸ್ ನಾಯಕರ ಅಭಿಪ್ರಾಯ ಆಲಿಸಿದ ಅಲೋಕಕುಮಾರ್ ವದಂತಿಗಳಿಗೆ ಕಿವಿಗೊಡಬಾರ್ದು, ತೀರ್ಪು ಏನೇ ಬರಲಿ ಅದನ್ನು ಗೌರವಿಸಬೇಕು, ಭಾಷೆಯ ಹೆಸರಿನಲ್ಲಿ ಗಲಾಟೆ ಮಾಡಬಾರ್ದು,ಕಾನೂನು ಎಲ್ಲರೂ ಗೌರವಿಸಬೇಕು.ಶಾಂತಿ ಕಾಪಾಡಬೇಕು,ಎಂದು ಎಡಿಜಿಪಿ ಅಲೋಕ್ ಕುಮಾರ್ ಉಭಯ ನಾಯಕರಲ್ಲಿ ಮನವಿ ಮಾಡಿಕೊಂಡರು.

ಆತ್ಮೀಯವಾಗಿ ನಡೆದ ಸಮಾಲೋಚನೆಯ ಬಳಿಕ ಟಿಳಕವಾಡಿ ಪೋಲೀಸ್ ಠಾಣೆಯ ಹೊರಗೆ ಕನ್ನಡ ಮತ್ತು ಎಂಇಎಸ್ ನಾಯಕರು ಪರಸ್ಪರ ಕುಷಲೋಪಚಾರ ವಿಚಾರಿಸಿ ನಗುತ್ತಲೇ ಪರಸ್ಪರ ಮಾತಾಡಿ ಕ್ಯಾಮರಾ ಎದುರು ಪೋಜು ಕೊಟ್ಟಿದ್ದು ಹೇಗೆ ಅನ್ನೋದನ್ನು ಈ ಸುದ್ದಿಯ ಪೋಟೋ ನೋಡಬಹುದು. ಈ ರೀತಿಯ ಪೋಟೋ ನೋಡಲು ಸಿಗುವುದು ಅತ್ಯಂತ ವಿರಳ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *