ಬೆಳಗಾವಿ-
ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನ ಕೊಂಡಾಡಿದ ಬಿಜೆಪಿ ಸಂಸದ ಸುರೇಶ ಅಂಗಡಿ ಅವರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ಇಡಲು ಮನವಿ ಮಾಡಿಕೊಂಡರು
ಸಾಂಬ್ರಾ ವಿಮಾನ ನಿಲ್ದಾಣದ ಆವರಣದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಮಾತನಾಡಿದ ಅಂಗಡಿ
ಸಿಎಂ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣಗೆ ಇದ್ಹಂಗೆ
ಸಿಎಂ ಅವರು ಆಧುನಿಕ ಸಂಗೋಳ್ಳಿ ರಾಯಣ್ಣ ಇದ್ದಂತೆ.. ಸಿಎಂ ಅವರು ರಾಯಣ್ಣನಾಗಿ ಚನ್ನಮ್ಮಳ ಹೆಸರು ಇಡಬೇಕೆಂದು ಅಂಗಡಿ ಒತ್ತಾಯ ಮಾಡಿದರು
ಬೆಳಗಾವಿಯಲ್ಲಿ ಮೇಲ್ದರ್ಜೆಗೆರಿದ ಹೊಸ ಸಾಂಬ್ರಾ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಯಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ವಿಮಾನಯಾನ ಸಚಿವ ಅಶೋಕ ಗಜಪತರಾಜು ಅವರಿಂದ ಲೋಕಾರ್ಪಣೆ ನಡೆಯಿತು
ಲೋಕಾರ್ಪಣೆ ಬಳಿಕ ಕೇಂದ್ರ ಸಚಿವ ಗಜಪತರಾಜು ಮಾತನಾಡಿದರು
ದೇಶದ ಸ್ವಾತಂತ್ರ್ಯ ಹೋರಾಟಗಾರನನ್ನ ನಾವು ಗೌರವಿಸಬೇಕು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.
ಮುಖ್ಯಮಂತ್ರಿಗಳು ಚನ್ನಮ್ಮ ಹೆಸರು ಇಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ನೀಡಲಿ.
ನಮ್ಮ ಮುಂದಿನ ಯುವಪೀಳಿಗೆಗೆ ಚನ್ನಮ್ಮತವರ ಪರಿಚಯ ಮಾಡಿಕೊಡಬೇಕಿದೆ.
ವಿಮಾನಯಾನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ.
ಕಾರ್ಗೋದಂತಹ ವಿಮಾನಯಾನ ಸೌಲಭ್ಯ ಎಲ್ಲೆಡೆ ಅಗತ್ಯವಿದೆ. ಬೆಳಗಾವಿ ನಗರದ ಅಭಿವೃದ್ಧಿಗೆ ಮೇಲ್ದರ್ಜೆಗೆರಿದ ವಿಮಾನ ನಿಲ್ದಾಣ ಸಹಕಾರಿಯಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವರು ಹೇಳಿದರು
ಸಿಎಂ ಸಿದ್ದರಾಮಯ್ಯ ಮಾತನಾಡಿ ವಿಮಾನ ನಿಲ್ದಾಣದ ನಾಮಕರಣದ ಬಗ್ಗೆ ಚಕಾರವೆತ್ತಲಿಲ್ಲ
ಈಗಾಗಲೇ ಪ್ರಸ್ತಾಪ ಮಾಡಿದಂತೆ ಬೆಳಗಾವಿ ನಗರದಲ್ಲಿ ಸ್ಮರಣೀಯ ದಿನ. ಬೆಳಗಾವಿ ವಿಮಾನ ನಿಲ್ದಾಣ ರಾಜ್ಯದಲ್ಲಿ ಅತ್ಯಂತ ಹಳೆಯ ವಿಮಾನ ನಿಲ್ದಾಣ. ಕೈಗಾರಿಕಾ ಕೇಂದ್ರ, ವ್ಯಾಪಾರಿ ಕೇಂದ್ರವಾಗಿ ಬೆಳಗಾವಿ ಬೆಳಿತಿದೆ. ಅದಕ್ಕೆ ಇಲ್ಲಿ ಮೇಲ್ದರ್ಜೆಗೆರಿದ ವಿಮಾನ ನಿಲ್ದಾಣ ಅವಶ್ಯಕವಾಗಿ ಬೇಕಾಗಿತ್ತು. ಏರ್ ಬಸ್, ಬೋಯಿಂಗ್ ಇಳಿಲಿಕ್ಕೆ ಹೋಗಲಿಕ್ಕೆ ಅವಕಾಶ ಮಾಡಿಕೊಟ್ಟಿದೆ. ಭೂಮಿ ಕೊಟ್ಟ ರೈತರಿಗೆ ಸಿಎಂ ಧನ್ಯವಾದ ಹೇಳಿದರು
ರಾಜ್ಯದಲ್ಲಿ ರೈಲ್ವೆ ಇಲಾಖೆ ಯಾವುದೇ ಪ್ರೊಜೆಕ್ಟ್ ಕೈಗೆತ್ತಿಕೊಂಡರು ಅದಕ್ಕೆ ಅರ್ಧ ಹಣ ಮತ್ತು ಭೂಮಿಯನ್ನು ನಾವೇ ಕೋಡ್ತಿವಿ. ಇದರ ಬಗ್ಗೆ ಭಾಷಣದಲ್ಲಿ ನೀವೇನು ಹೇಳಲೇ ಇಲ್ಲಾ ನರೇಂದ್ರ ಮೋದಿ ಬಗ್ಗೆ ಮಾತ್ರ ಹೇಳ್ತಿದಿರಿ ಎಂದು ಸಚಿವ ಅನಂತಕುಮಾರ ಮತ್ತು ಸಂಸದ ಸುರೇಶ ಅಂಗಡಿಯವರಿಗೆ ಸಿಎಂ ಟಾಂಗ್ ಕೊಟ್ಟರು