ಬೆಳಗಾವಿ- ಬೆಳಗಾವಿ ನಗರದ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆಗೆ ಬೆಳಗಾವಿ ನಗರ ಪೋಲೀಸ್ ಇಲಾಖೆ ಹೈಟೆಕ್ ಯೋಜನೆಯನ್ನು ರೂಪಿಸಿದೆ ಈ ಯೋಜನೆಯ ಹೆಸರೇ ಬೆಲ್ ಟ್ಯಾಕ್ ಯೋಜನೆ ಸರ್ಕಾರ ಈ ಯೋಜನೆಯನ್ನು ಘೋಷಿಸಿ ಬರೊಬ್ಬರಿ ಮೂರು ತಿಂಗಳು ಗತಿಸಿವೆ ಆದರೆ ಇನ್ನುವರೆಗೆ ಈ ಯೋಜನೆಯ ಅನುದಾನ ಬಿಡುಗಡೆ ಮಾಡದೇ ಇರುವದು ದೊಡ್ಡ ದುರ್ದೈವ
ಸರ್ಕಾರ ಯೋಜನೆ ಘೋಷಿಸಿದ ಬಳಿಕ ಬೆಳಗಾವಿ ನಗರ ಪೋಲೀಸ್ ಇಲಾಖೆಯವರು ಬೆಲ್ ಟ್ರ್ಯಾಕ್ ಯೋಜನೆಯನ್ನು ರೂಪಿಸಿ ಅನುದಾನದ ದಾರಿ ಕಾಯುತ್ತಿದ್ದಾರೆ ಎಪ್ರೀಲ್ ತಿಂಗಳಲ್ಲಿ ಬೆಲ್ ಟ್ರ್ಯಾಕ್ ಯೋಜನೆಯ ಅನುದಾನ ಬಿಡುಗಡೆ ಆಗಬಹುದು ಎನ್ನುವದು ಪೋಲೀಸ್ ಅಧಿಕಾರಿಗಳ ನಿರೀಕ್ಷೆಯಿದೆ.
ಹಾಗಾದರೆ ಬೆಲ್ ಟ್ರ್ಯಾಕ್ ಯೋಜನೆ ಬೆಳಗಾವಿಯಲ್ಲಿ ಅನುಷ್ಠಾನಕ್ಕೆ ಬಂದರೆ ಬೆಳಗಾವಿ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಈ ಯೋಜನೆಯಲ್ಲಿ ನಗರ ಸಂಚಾರ ವ್ಯೆವಸ್ಥೆ ಸುಗಮಗೊಳಿಸುವ ಹಲವಾರು ಅಂಶಗಳು ಇವೆ
ಬೆಲ್ ಟ್ರ್ಯಾಕ್ ಯೋಜನೆಯ ದುಡ್ಡು ಬಂದರೆ ಇದರಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮರಾ ಗಳನ್ನು ನಗರದ ಎಲ್ಲ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಹಚ್ವಲಾಗುತ್ತದೆ ಈ ಕ್ಯಾಮರಾಗಳೇಲೆ ಹದ್ದಿನ ಕಣ್ಣಿಡಲು ನಗರದಲ್ಲಿ ಟ್ರಾಫಿಕ್ ಮ್ಯಾನೇಜ್ ಮೆಂಟ್ ರೂಮ್ ಸ್ಥಾಪಿಸಲಾಗುತ್ತದೆ ಯಾರಾದರೂ ಟ್ರಾಫಿಕ್ ರೂಲ್ಸಗಳನ್ನು ವ್ಯಾಲೇಶನ್ ಮಾಡಿದರೆ ಟ್ರಾಫಿಕ್ ಮ್ಯಾನೇಜ್ ಮೆಂಟ್ ರೂಮಿನ ಪೋಲೀಸ್ ಅಧಿಕಾರಿಗಳು ಇದನ್ನು ಸಿಸಿ ಟಿವಿ ಕ್ಯಾಮರಾಗಳಲ್ಲಿ ಗಮನ ಹರಿಸಿ ದಂಡದ ಪಾವತಿಯನ್ನು ಮನೆಗೆ ಕಳುಹಿಸುತ್ತಾರೆ ಇದೇ ಬೆಲ್ ಟ್ರ್ಯಾಕ್ ಸ್ಪೇಶ್ಯಾಲಿಟಿ
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಜೊತೆಗೆ ನಗರದ ಜನದಟ್ಟನೆ ಮತ್ತು ವಾಹನ ದಟ್ಟನೆ ಇರುವ ಸ್ಥಳಗಳಲ್ಲಿ ಕ್ಯಾಮರಾ ಅಳವಡಿಸಿ ಟ್ರಾಫಿಕ್ ಕಂಟ್ರೋಲ್ ಮಾಡುವದು ಬೆಲ್ ಟ್ರ್ಯಾಕ್ ಯೋಜನೆಯ ಮುಖ್ಯ ಉದ್ದೇಶವಾಗಿದೆ
ಬೆಲ್ ಟ್ರ್ಯಾಕ್ ಯೋಜನೆ ಸಿದ್ಧಗೊಂಡಿದೆ ಆದರೆ ಸಿದ್ಧರಾಮಯ್ಯ ಇನ್ನುವರೆಗೆ ಅನುದಾನ ಬಿಡುಗಡೆ ಮಾಡದೇ ಇರುವದರಿಂದ ಯೋಜನೆಯ ಅನುಷ್ಠಾನದಲ್ಲಿ ವಿಳಂಬ ವಾಗಿದೆ
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಈ ಬಗ್ಗೆ ಗಮನ ಹರಿಸಿ ಅನುದಾನ ಬಿಡುಗಡೆ ಮಾಡಿಸಬೇಕಾಗಿದೆ