ಬೆಳಗಾವಿ: ತೀವ್ರ ಸ್ವರೂಪದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಬೈಲಹೊಂಗಲದ 62 ವರ್ಷದ ರೋಗಿಗೆ ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ ವೈದ್ಯರು ಯಶಸ್ವಿ ಲಿವರ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಡಾ.ರಾಘವೇಂದ್ರ ಸಿ.ವಿ., ಬೆಳಗಾವಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದ ರವೀಂದ್ರ ದೇಸಾಯಿಯವರು ಕಿಬ್ಬೊಟ್ಟೆ ಉಬ್ಬರಿಸಿಕೊಂಡು ನೋವು.ಅನುಭವಿಸುತ್ತಿದ್ದರು. ಮದ್ಯ ಸೇವಿಸದಿದ್ದರೂ ಈ ಕಾಯಿಲೆಗೆ ತುತ್ತಾಗಿದ್ದರು. 2016ರ ಜನವರಿ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ವಿವಿಧ ಪರೀಕ್ಷೆಗೊಳಪಡಿಸಿ ದಾನಿಗಳ ಯಕೃತ್ತನ್ನು ಇವರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. 10 ಗಂಟೆಗಳ ಅವಿರತ ಶಸ್ತ್ರಚಿಕಿತ್ಸೆಯ ನಂತರ ಕಸಿ.ಮಾಡಲಾಗಿದೆ. ಶಸ್ತ್ರಚಿಕಿತ್ಸೆಯಾದ ಆರು ತಿಂಗಳ ನಂತರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದರು.
ಜಂಕ್ ಫುಡ್ ಸೇವನೆಯಿಂದ ಲಿವರ್ ಸಮಸ್ಯೆ ಹೆಚ್ಚಾಗಿದೆ ಪಿಜಾ ಬರ್ಗರ್,ಪೆಪ್ಸಿ ಅಂತಹ ಆಹಾರ ಪದಾರ್ಥಗಳನ್ನು ಅವೈಡ್ ಮಾಡಬೇಕು ಮೇಲಿಂದ ಮೇಲೆ ಲಿವರ್ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದರು