ಬೆಳಗಾವಿ- ಖೊಟ್ಟಿ ಜಾತಿ ಪ್ರಮಾಣ ಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದು ಕಣಬರ್ಗಿ ನಗರಸೇವಕ ಭೈರಗೌಡ ಪಾಟೀಲ ಅವರ ಸದಸ್ಯತ್ವ ರದ್ದುಗೊಂಡಿದೆ ಎಂದು ಡೇಲಿ ಪುರಾಡಿ ಮರಾಠಿ ದಿನಪತ್ರಿಕೆ ಸುದ್ಧಿ ಮಾಡಿದೆ
ಭೈರಗೌಡ ಪಾಟೀಲ ಅವರ ಪ್ರತಿಸ್ಪರ್ಧಿ ಸುಧೀರ ಗಡ್ಡೆ ಭೈರಗಗೌಡ ಪಾಟೀಲ ಖೊಟ್ಟಿ ಜಾತಿ ಪ್ರಮಾಣ ಪತ್ರವನ್ನು ಬಳಿಸಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು ಜಿಲ್ಲಾ ನ್ಯಾಯಾಲಯದಲ್ಲಿ ಸುಧೀರ ಗಡ್ಡೆ ಅವರ ಪರವಾಗಿ ತೀರ್ಪು ಬಂದಿತ್ತು ಇದನ್ನು ಪ್ರಶ್ನಿಸಿ ಭೈರಗೌಡ ಪಾಟೀಲ ಉಚ್ಛ ನ್ಯಾಯಾಲದ ಮೊರೆ ಹೋಗಿದ್ದರು
ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಧಾರವಾಡ ಮಾನ್ಯ ಉಚ್ಛ ನ್ಯಾಯಾಲಯದ ಪೀಠ ನಗರ ಸೇವಕ ಭೈರಗೌಡ ಪಾಟೀಲ ಖೊಟ್ಟಿ ಜಾತಿ ಪ್ರಮಾಣ ಪಡೆದ ವಿಷಯ ದೃಡಪಟ್ಟು ಆರೋಪ ಸಾಭೀತಾಗಿದ್ದು ಮಾನ್ಯ ನ್ಯಾಯಾಲಯ ಭೈರಗೌಡ ಪಾಟೀಲ ಅವರ ಸದಸ್ಯತ್ವ ರದ್ದು ಮಾಡಿದ್ದು ತಕ್ಷಣ ತೆರುವಾದ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಆದೇಶಿಸಿದೆ ಎಂದು ತಿಳಿದು ಬಂದಿದೆ
ಸುಧೀರ ಗಡ್ಡೆ ಅವರ ಪರವಾಗಿ ನ್ಯಾಯವಾದಿ ಗೋಕಾಕ ಅವರು ವಕಾಲತ್ತು ವಹಿಸಿದ್ದರು
ಬೆಳಗಾವಿ ಸುದ್ಧಿ ಜೊತೆ ಮಾತನಾಡಿದ ಸುಧೀರ ಗಡ್ಡೆ ನ್ಯಾಯಾಲಯದಲ್ಲಿ ತಮಗೆ ನ್ಯಾಯ ಸಿಕ್ಕಿದೆ ಎಂದು ಹರ್ಷ ವ್ಯೆಕ್ತಪಡಿಸಿದ್ದಾರೆ