ಬೆಳಗಾವಿ- ಬೆಳಗಾವಿ ತರಕಾರಿ ಮಾರುಕಟ್ಟೆ ಎಪಿಎಂಸಿ ಮಾರುಕಟ್ಟೆಗೆ ಶಿಷ್ಟ ಆಗಿರುವ ಹಿಂದೆ ದೊಡ್ಡ ಕಹಾನಿಯೇ ಇದೆ ನಾಕೊಡೆ ನೀ ಬಿಡೆ ..ಎನ್ನುವಂತೆ ತರಕಾರಿ ವ್ಯಾಪಾರಿಗಳ ವೇದನೆ,ಪ್ರಸವ ವೇದನೆಯಾದರೂ ಅವರಿಗೆ ನ್ಯಾಯ ಕೊಡಿಸುವ ಮನಸ್ಸು ಯಾರಿಗೂ ಇಲ್ಲ
ಬೆಳಗಾವಿ ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ತರಕಾರಿ ಮಾರುಕಟ್ಟೆ ಫೋರ್ಟ್ ರಸ್ತೆಯಲ್ಲಿ ಇರುವದರಿಂದ ರಸ್ತೆ ಸಂಚಾರಕ್ಕೆ ಕಿರಿ ಕಿರಿ ಆಗುತ್ತಿದೆ ಎಂದು ಮನವರಿಕೆ ಮಾಡಿಕೊಂಡ ತರಕಾರಿ ವ್ಯಾಪಾರಿಗಳು ನಮಗೆ ಜಾಗೆ ಕೊಡಿ ನಾವು ಎಪಿಎಂಸಿ ಯಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಿ ಕೊಳ್ಳುತ್ತೇವೆ ಎಂದು ಎಪಿಎಂಸಿ ಗೆ ಲಿಖಿತ ಮನವಿ ಮಾಡಿಕೊಂಡಿದ್ರು ,ಆದ್ರೆ ಎಪಿಎಂಸಿ ಅಧಿಕಾರಿಗಳು ನಮ್ಮ ಹತ್ತಿರ ಜಮೀನು ಇಲ್ಲ ಎಂದು ಲಿಖಿತ ಉತ್ತರ ಕೊಟ್ರು,ಪಾಪ ಈ ವ್ಯಾಪಾರಿಗಳು ಸ್ವಂತ ಹಣದಲ್ಲಿ ಗಾಂದೀ ನಗರದ ಬಳಿ ಜಾಗೆ ಖರೀಧಿ ಮಾಡಿಕೊಂಡು ಸ್ವಂತ ಖರ್ಚಿನಲ್ಲೇ ಮಾರ್ಕೆಟ್ ನಿರ್ಮಿಸಿ ಕೊಂಡು ಇನ್ನೇನು ಹೊಸ ಮಾರ್ಕೇಟ್ ಗೆ ಶಿಪ್ಟ ಆಗಬೇಕು ಎನ್ನುವಷ್ಟರಲ್ಲಿ ಜಿಲ್ಲಾಡಳಿತ ಪೋಲೀಸ್ ಫೋರ್ಸ ಬಳಿಸಿ ರಾತ್ರೋ ರಾತ್ರಿ ತರಕಾರಿ ವ್ಯಾಪಾರಿಗಳನ್ನು ನಿಮಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅಂಗಡಿ ಕೊಡುತ್ತೇವೆ ಎಂದು ಹೇಳಿ ಎಪಿಎಂಸಿ ಮಾರುಕಟ್ಟೆಗೆ ಶಿಪ್ಟ ಮಾಡಿ ಆರು ತಿಂಗಳು ಗತಿಸಿದರೂ ಈ ವ್ಯಾಪಾರಿಗಳಿಗೆ ಸ್ವಂತ ಅಂಗಡಿಯೂ ಸಿಗಲಿಲ್ಲ.ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಹೊಸ ಮಾರುಕಟ್ಟೆಗೆ ಅನುಮತಿಯೂ ಸಿಗದೇ ತರಕಾರಿ ವ್ಯಾಪಾರಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.
ತರಕಾರಿ ವ್ಯಾಪಾರಿಗಳ ಖಾಸಗಿ ಮಾರುಕಟ್ಟೆಗೆ ದಂಡ ಪಾವತಿಸಿಕೊಂಡು ಅನುಮತಿ ಕೊಡಿ ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮಹಾನಗರ ಪಾಲಿಕೆಗೆ ಸೂಚನೆ ನೀಡಿದ ಮೇಲೂ ಅನುಮತಿಯ ಫೈಲಿಗೆ ಬೆಳಗಾವಿಯ ಪಾಲಿಟಿಕ್ಸ ಜೋತು ಬಿದ್ದಿದೆ ಹೀಗಾಗಿ ಬೆಳಗಾವಿಯ ತರಕಾರಿ ವ್ಯಾಪಾರಿಗಳು ನಗರದ ಶಾಸಕರ ಬಳಿ,ಮಾದ್ಯಮಗಳ ಬಳಿ,ಅಧಿಕಾರಿಗಳ ಬಳಿ ತಮಗೆ ಆಗಿರುವ ಅನ್ಯಾಯವನ್ನು ಹೇಳುತ್ತ ತಮ್ಮ ತಕರಾರು ಮುಂದುವರೆಸಿದ್ದಾರೆ .ನಮ್ಮನ್ನು ಎಪಿಎಂಸಿ ಗೆ ಶಿಪ್ಟ ಮಾಡುವಾಗ ಸ್ವಂತ ಅಂಗಡಿ ನೀಡುವ ಜಿಲ್ಲಾಡಳಿತದ ಕರಾರು ಏನಾಯಿತು ? ಅನ್ನೋದು ತರಕಾರಿ ವ್ಯಾಪಾರಿಗಳ ಪ್ರಶ್ನೆಯಾಗಿದೆ.
ತರಕಾರಿ ವ್ಯಾಪಾರಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಜಮೀನು ಖರೀದಿಸಿ ಸ್ವಂತ ಖರ್ಚಿನಲ್ಲಿ ಕಟ್ಟಿದ ಹೊಸ ಮಾರುಕಟ್ಟೆಯ ಕಟ್ಟಡ ಮುಕ್ತಾಯದ ಹಂತದಲ್ಲಿದ್ದು ಪಾಲಿಕೆಯ ಅನುಮತಿಗೆ ಕಾಯುತ್ತಿದೆ.ಇನ್ನೊಂದೆಡೆ ತರಕಾರಿ ವ್ಯಾಪಾರಿಗಳಿಗೆ ಎಪಿಎಂಸಿ ಯಲ್ಲಿ ಅಂಗಡಿ ಸಿಗದೇ ಬಂಡವಾಳ ಶಾಹಿಗಳಿಗೆ ಅಲೌಟ್ ಆಗಿರುವ ಅಂಗಡಿಗಳಲ್ಲಿ ತಿಂಗಳಿಗೆ ಮೂವತ್ತರಿಂದ ಐವತ್ತು ಸಾವಿರ ವರೆಗೆ ಬಾಡಿಗೆ ಕೊಟ್ಟು ತರಕಾರಿ ವ್ಯಾಪಾರಿಗಳು ತಮ್ಮ ವಹಿವಾಟು ಮುಂದುವರೆಸಿದ್ದಾರೆ.
ತರಕಾರಿ ವ್ಯಾಪಾರಿಗಳ ಸಹನೆಯ ಕಟ್ಟೆ ಒಡೆದಿದೆ ಈ ವ್ತಾಪಾರಿಗಳು ಇತ್ತೀಚಿಗೆ ತಾವು ನಿರ್ಮಿಸಿರುವ ಹೊಸ ಮಾರುಕಟ್ಟೆಯಲ್ಲಿ ಸಭೆ ಸೇರಿ ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯೆಕ್ತ ಪಡಿಸಿ ಹದಿನೈದು ದಿನದಲ್ಲಿ ಹೊಸ ಮಾರುಕಟ್ಟೆಗೆ ಅನುಮತಿ ಕೊಡದಿದ್ದರೆ ಬೀದಿ ,ಬೀದಿಯಲ್ಲಿ ತರಕಾರಿ ಮಾರಿ ತಮ್ಮ ತಕರಾರು ಮಂಡಿಸುತ್ತೇವೆ ಎಂಬ ಎಚ್ಚರಿಕೆಯನ್ನು ತರಕಾರಿ ವ್ಯಾಪಾರಿಗಳು ನೀಡಿದ್ದಾರೆ
ಈ ಹೋಲ್ ಸೇಲ್ ತರಕಾರಿ ವ್ಯಾಪಾರಿಗಳು ಈಗಾಗಲೇ ಶಾಸಕ ಅನೀಲ್ ಬೆನಕೆ ಅವರನ್ನು ಭೇಟಿಯಾಗಿ ತಮ್ಮ ವಾದವನ್ನು ಮಂಡಿಸಿದ್ದಾರೆ,ಶೀಘ್ರದಲ್ಲೇ ಶಾಸಕ ಅಭಯ ಪಾಟೀಲರನ್ನು ಭೇಟಿಯಾಗಿ ವಾದ ಮಂಡಿಸಿದ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಳಿ ನಿಯೋಗ ಕೊಂಡೊಯ್ಯಲಿದ್ದಾರೆ
ಕೋಟ್ಯಾಂತರ ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಕಟ್ಟಿದ ಸ್ವಂತ ಮಾರುಕಟ್ಟೆಗೆ ಅನುಮತಿ ಕೊಡಿ ಎನ್ನುವದು ತರಕಾರಿ ವ್ಯಾಪಾರಿಗಳ ಬೇಡಿಕೆಯಾಗಿದೆ ಜಿಲ್ಲೆಯ ರೈತರೂ ತರಕಾರಿ ವ್ಯಾಪಾರಿಗಳ ಪರವಾಗಿದ್ದು ಗಾಂದೀ ನಗರದ ಬಳಿ ನಿರ್ಮಿಸಿರುವ ಹೊಸ ಮಾರುಕಟ್ಟೆ ರೈತರಿಗೆ ಸಮೀಪ ಮತ್ತು ಅನಕೂಲವಾಗುತ್ತದೆ ಅನ್ನೋದು ರೈತರ ಅಭಿಪ್ರಾಯ
ಕರ್ನಾಟಕ,ಮಹಾರಾಷ್ಟ್ರ ,ಆಂದ್ರ,ತಮೀಳುನಾಡು,ಗೋವಾ ಸೇರಿದಂತೆ ನೆರೆಯ ರಾಜ್ಯಗಳ ಸಂಪರ್ಕದ ಕೊಂಡಿ ಆಗಿರುವ ಬೆಳಗಾವಿಯ ತರಕಾರಿ ಮಾರುಕಟ್ಟೆ ಈಗ ವಿವಾದದ ಹೊಂಡಕ್ಕೆ ಬಿದ್ದಿದೆ ,ಈ ವಿವಾದದಿಂದ ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು ಬೆಳಗಾವಿಯ ತರಕಾರಿ ವ್ಯಾಪಾರಿಗಳ ಸಮಸ್ಯೆ ಬಗೆ ಹರಿಸಲು ಸರ್ಕಾರ ಮುಂದಾಗಬೇಕಿದೆ
ಪಾಲಿಟಿಕ್ಸ್ ಬಿಡಿ ಹೊಸ ತರಕಾರಿ ಮಾರುಕಟ್ಟೆಗೆ ಅನುಮತಿ ಕೊಡಿ ಅನ್ನೋದು ಹೋಲ್ ಸೇಲ್ ತರಕಾರಿ ವ್ಯಾಪಾರಿಗಳ ದ್ವನಿಯಾಗಿದೆ.