.ಬೆಳಗಾವಿ-ಇಂದು ದೇಶವ್ಯಾಪಿ ಕಾರ್ಮಿಕ ಸಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ಬೆಳಗಾವಿ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಕಾಮಿ೯ಕ ಸಂಘಟನೆಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿವೆ. ಆದ್ರೆ ಕಾಮಿ೯ಕ ಒಕ್ಕೂಟಗಳ ಮುಷ್ಕರಕ್ಕೆ ಕುಂದಾ ನಗರಿ ಬೆಳಗಾವಿಯಲ್ಲಿ ಹಲವು ಸಂಘಟನೆಗಳು ಸಾಂಕೇತಿ ಪ್ರತಿಭಟನೆ ನಡೆಸಲಿವೆ. ಹೀಗಾಗಿ ಬೆಳಗ್ಗೆಯಿಂದಲೇ ಬಸ್ ಸಂಚಾರ, ಆಟೋ ಸಂಚಾರ, ಹೋಟೆಲ್ ಎಂದಿನಂತೆ ಕಾಯಾ೯ರಂಭ ಮಾಡಿವೆ. ಕಾಮಿ೯ಕರ ಮುಷ್ಕರವನ್ನು ಬೆಂಬಲಿಸಿ, ವಿವಿಧ ಕಾಮಿ೯ಕ ಸಂಘಟನೆಗಳ ೧೧ ಗಂಟೆಗೆ ಬೃಹತ್ ರ್ಯಾಲಿ ನಡೆಸಲಿದ್ದು. ಇದರಿಂದ ನಗರ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಮುಷ್ಕರದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಈವರೆಗೂ ಜನಜೀವನ ಸಹಜವಾಗಿದೆ. . ಒಟ್ಟಾರೆ
ಬಂದ್ ಗೆ ಬೆಳಗಾವಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ನಗರ, ಹೊರ ಸಾರಿಗೆ ಎಂದಿನಂತೆ ಕಾರ್ಯನಿರ್ಹಣೆತರಕಾರಿ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪರ ವಹಿವಾಟು. ಮಾರುಕಟ್ಟೆಗೆ ತಟ್ಟದ ಬಂದ್ ಬಿಸಿ. ಬೆಳಗಾವಿಯಿಂದ ಗೋವಾ, ಮಹಾರಾಷ್ಟ್ರಕ್ಕೆ ತರಕಾರಿ ಸರಬರಾಜು.
Check Also
ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ
ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …