Breaking News

ಕರಾಳ ದಿನಾಚರಣೆಗೆ ಬೆಂಬಲಿಸುವ ರಾಜಕಾರಣಿಗಳಿಗೆ ಕಪಾಳ ಮೋಕ್ಷ ಮಾಡಿದರೆ 25 ಸಾವಿರ ಬಹುಮಾನ

ಬೆಳಗಾವಿ

ಪ್ರತಿವರ್ಷ ಎಂಇಎಸ್‌ನವರು ರಾಜ್ಯೋತ್ಸವದ ದಿನದಂದು ಕರಾಳ ದಿನಾಚಾರಣೆಯಲ್ಲಿ ನಾಡದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇಲ್ಲಿನ ರಾಜಕಾರಣಿಗಳು ಮತ ಬ್ಯಾಂಕಿಗಾಗಿ ಬೆಂಗಾವಲಾಗಿ ನಿಲ್ಲುವುದನ್ನು ಬಿಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಂಇಎಸ್ ನವರಿಗೆ ರಾಜಕಾರಣಿಗಳು ಕರಾಳ ದಿನಾಚಾರಣೆಗೆ ಅವಕಾಶ ಕೊಡಬಾರದು.‌ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದ್ದೆಯಾದರೇ ಕನಸೇ ಮಹಿಳಾ ಕಾರ್ಯಕರ್ತರು ಒನಕೆ ಹಿಡಿದು ಕರಾಳ ದಿನಾಚಾರಣೆ ಹಿಡಿದು ಪ್ರತಿಭಟನೆ ನಡೆಸಲಾಗುವುದು. ‌ಈ ಸಂದರ್ಭದಲ್ಲಿ ಯಾವುದೇ ಘಟನೆ ಸಂಭವಿಸಿದರೆ ನೇರವಾಗಿ ಜಿಲ್ಲಾಡಳಿತ, ಸರಕಾರವೇ ಹೊಣೆಯಾಗುತ್ತದರ ಎಂದು ಎಚ್ಚರಿಸಿದರು.

ಕರಾಳ ದಿನಾಚರಣೆಗೆ ಬೆಂಬಲಿಸುವ ರಾಜಕಾರಣಿಗಳಿಗೆ ಯಾವುದೇ ಕನ್ನಡ ಸಂಘಟನೆಗಳು ಕಪಾಳ ಮೋಕ್ಷ ಮಾಡಿದರೆ 25 ಸಾವಿರ ಬಹುಮಾನ ನೀಡಲಾಗುವದು ಎಂದು ಭೀಮಾ ಶಂಕರ ಘೋಷಿಸಿದ್ದಾರೆ
ಕರಾಳ ದಿನಾಚಾರಣೆಯಲ್ಲಿ ಭಾಗಿಯಾದ ಎಂಇಎಸ್ ನವರಿಗೆ ಕನ್ನಡಿಗರು ಕಪಾಳ‌ ಮೋಕ್ಷ‌ ಮಾಡಿದರೆ ಸೂಕ್ತ ಬಹುಮಾನ ನೀಡಲಾಗುವುದು.
ರಾಜ್ಯೋತ್ಸವದ ಸಂದರ್ಭದಲ್ಲಿ ಎಂಇಎಸ್ ಗೆ ಕರಾಳ ದಿನಾಚಾರಣೆಗೆ ಬೆನ್ನ‌‌ ಹಿಂದೆ ನಿಂತು‌ ಅನುಮತಿ ನೀಡಿದರೆ ಕನಸೇ ಕಾರ್ಯಕರ್ತರು ಅಂಥ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಿದರೆ 25. ಸಾವಿರ ರು. ಬಹುಮಾನ ನೀಡಲಾಗುವುದು ಎಂದರು.
ಪ್ರತಿವರ್ಷ ಬೆಳಗಾವಿಯಲ್ಲಿ ಕನ್ನಡದ ಹಬ್ಬವನ್ನು ಆಚರಿಸಲು ಕಳೆದ ಆರು ತಿಂಗಳಿನಿಂದ ಕನಸೇ ಸಿದ್ದತೆ ಮಾಡಿಕೊಳ್ಳಲಾಗಿದೆ.
40 ವರ್ಷಗಳಿಂದ ಕನ್ನಡಿಗರಿಗೆಲ್ಲ ಕಾಡುತ್ತಿರುವ ಪ್ರಶ್ನೆ ಮಹಾರಾಷ್ಟ್ರದ ಹೋರಾಟಗಾರ ಬಾಪಟ್ ಅವರ ಉಪವಾಸಕ್ಕೆ ಮಣಿದ ಕೇಂದ್ರ ಸರಕಾರ 1966ರಲ್ಲಿ ಮೆಹರಚಂದ್ ಮಹಾಜನ್ ರವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿತ್ತು. ಮಹಾರಾಷ್ಟ್ರದ ಅಂದಿನ ಸಿಎಂ ಆಗಿದ್ದ ಪಿ.ವಿ.ನಾಯಕ ಅವರು ಆಯೋಗದ ವರದಿ ಹೇಗಿದ್ದರೂ ಅದನ್ನು ಒಪ್ಪುವುದಾಗಿ ಘೋಷಣೆ ಮಾಡಿದ್ದರು. ಆದರೆ ವರದಿ‌ ಬಂದ ನಂತರ ತನ್ನ ನಿಲುವನ್ನು‌ ಬದಲಿಸಿದ ಮಹಾರಾಷ್ಟ್ರ ಸರಕಾರ ಗಡಿ ತಂಟೆಗೆ ಜೀವ ತುಂಬುವ ಕೆಲಸ ಮಾಡುತ್ತ ಬಂದ ಪಾಪದ ಕೂಸೆ ಎಂಇಎಸ್ ಎಂದರು.
ಮರಾಠಾ ಚಳುವಳಿಗಾರರ ಹೆಸರಿನಿಂದ‌ ಕೂಡಿದ ಮಹಾರಾಷ್ಟ್ರ ರಾಜ್ಯದ ಪರವಾದ ರಾಜಕೀಯ ಪಕ್ಷ‌ ಸಿಗದ ಕಾರಣ ಬೆಳಗಾವಿಯ ಬಗೆಗೆ ವಿಪರೀತ ಆಸಕ್ತಿಯನ್ನಿಟ್ಟುಕೊಂಡು ಅದನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಬೇಕು ಎಂಬ ನಿಲುವನ್ನು ಹೋರಾಟದಿಂದಲೇ ಇದು ತನ್ನ ಭಾಗಗಳು ಸೇರಿದಂತೆ ಗೋವಾ ರಾಜ್ಯವನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಂಡು ವಿಶಾಲ ಮಹಾರಾಷ್ಟ್ರ ರಾಜ್ಯ ಸ್ಥಾಪನೆಯ ಗುರಿ ಒಟ್ಟುಕೊಂಡಿದ್ದೇವೆ ಎಂದು ಹೇಳಿಕೊಳ್ಳುವ ಈ ಸಂಘಟನೆಯ ನಾಯಕರು ಭಾಷೆ ಹೆಸರಿನಲ್ಲಿ ಬೆಂಕಿ‌ ಹಚ್ಚುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಬಾಬು ಸಂಗೋಡಿ, ಆನಂದ, ಗಿರೀಶ ಪೂಜಾರ, ಸುಷ್ಮಾ ಯಾದವಾಡ, ಶೋಭಾ,‌‌ನಾಗೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *