ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎನ್ನುವದಕ್ಕೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿಯಾಗಿದೆ,65 ವರ್ಷದ ಸೊಂಕಿತ ಅಜ್ಜನೊಬ್ಬ ನಿನ್ನೆ ರಾತ್ರಿಯಿಂದ ಹೊಟ್ಟೆ ನೋಯಿಸುತ್ತಿದೆ ಎಂದು ನರಳಿ ನರಳಿ ಜೀವ ಬಿಟ್ಟ ಅಮಾನವೀಯ ಘಟನೆ ನಡೆದಿದೆ
ಅಥಣಿ ತಾಲ್ಲೂಕಿನ ರಡ್ಡೇರಟ್ಟಿ ಗ್ರಾಮದ 65 ವರ್ಷದ ಸೊಂಕಿತ ಅಜ್ಜ ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವೀಡ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ನಿನ್ನೆ ರಾತ್ರಿಯಿಂದ ಹೊಟ್ಟೆ ನೋಯಿಸುತ್ತಿದೆ ಎಂದು ಜಿಲ್ಲಾ ಆಸ್ಪತ್ರೆಯಲ್ಲಿ ನರಳುತ್ತಿರುವ ವಿಡಿಯೋ ನಿನ್ನೆ ರಾತ್ರಿಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು
ನಿನ್ನೆ ರಾತ್ರಿಯಿಂದಲೇ ನರಳುತ್ತಿದ್ದ ಸೊಂಕಿತ ಅಜ್ಜ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ. ಅಜ್ಜ ಮೃತ ಪಟ್ಟ ಬಳಿಕ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಈ ಅಜ್ಜನ ಮೊಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ,ಆದ್ರೆ ಈ ಅಜ್ಜನ ಕುಟುಂಬದವರೆಲ್ಲರೂ ಕ್ವಾರಂಟೈನ್ ನಲ್ಲಿದ್ದು ನಾವು ಬೆಳಗಾವಿಗೆ ಹೋಗೋದು ಹೇಗೆ ಅಂತ ಅಜ್ಜನ ಮೊಮ್ಮಗ ಮಾದ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾನೆ
ಮಹಾಮಾರಿ ವೈರಸ್ ದಿನನಿತ್ಯ ಹಲವಾರು ಜನರನ್ನು ಬಲಿ ಪಡೆಯುತ್ತಲೇ ಇದೆ,ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ಹಲವಾರು ಜನರ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದ್ದು,ಬೆಳಗಾವಿಯ ಖಡೇ ಬಝಾರ್ ನಲ್ಲಿದ್ದ ಮೋಬೈಲ್ ಅಂಗಡಿಯ 40 ವರ್ಷದ ಯುವಕನೊಬ್ಬ ಸಾವನ್ನೊಪ್ಪಿದ್ದಾನೆ ಎಂದು ತಿಳಿದು ಬಂದಿದ್ದು ಈ ಕುರಿತು ಅಧಿಕೃತ ಮಾಹಿತಿ ಬರಬೇಕಾಗಿದೆ.
ಬೆಳಗಾವಿಯ ಮಹಾಜನಗಳೇ ಬೆಳಗಾವಿ ಜಿಲ್ಲೆಯಲ್ಲಿ ಪರಿಸ್ಥಿತಿ ಭೀಕರ,ಭಯಾನಕವಾಗುತ್ತಲೇ ಹೊರಟಿದೆ ,ಬೆಳಗಾವಿ ಜಿಲ್ಲೆಯಲ್ಲಿ ದಿನನಿತ್ಯ ಅನೇಕ ಜನರ ಸಾವು ನೋವು ಸಂಭವಿಸುತ್ತಲೇ ಇದೆ,ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಲಿ,ಅಥವಾ ಬಿಡಲಿ,ಅನಗತ್ಯವಾಗಿ ಹೊರಗೆ ಸುತ್ತಾಡಬೇಡಿ,ನಮ್ಮ ಜೀವ ನಮ್ಮ ಕೈಯಲ್ಲಿದೆ ,ಎಲ್ಲರೂ ಸುರಕ್ಷಿತವಾಗಿರಲುನೆಯಲ್ಲಿ ಸೆಲ್ಫ ಕ್ವಾರಂಟೈನ್ ಆಗುವದು ಸೂಕ್ತ
ಮಹಾಮಾರಿ ಕೊರೋನಾಗೆ ಹೆದರುವ ಅಗತ್ಯವಿಲ್ಲ,ಆದ್ರೆ ಮುಂಜಾಗ್ರತೆ ವಹಿಸುವದು ಅಗತ್ಯವಾಗಿದ್ದು
ಟೇಕ್ ಕೇರ್
ಸ್ಟೇ ಹೋಮ್