ಬೆಳಗಾವಿ- ಬೆಳಗಾವಿಯ ಭೀಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದ ಬೆನ್ನಲ್ಲಿಯೇ ಈಗ
ಆಸ್ಪತ್ರೆಯಲ್ಲಿ ಮಹಾ ಯಡವಟ್ಟು ಆಗಿದೆ. ಕರೋನಾ ಪಾಸಿಟಿವ್ ನಿಂದ ಸಾವನ್ನಪ್ಪಿದ ಎರಡು ಮೃತದೇಹಗಳನ್ನ ಒಂದೇ ಕುಟುಂಬಕ್ಕೆ ಹಸ್ತಾಂತರ ಮಾಡಲು ಜಿಲ್ಲಾಸ್ಪತ್ರೆಯವರು ಮುಂದಾಗಿದ್ದು ಮೃತರ ಕುಟುಂಬದವರು ಈಗ ಪೋಲೀಸ್ ಠಾಣೆಯ ಮೆಟ್ಟಲೇರಿದ್ದಾರೆ.
ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ 57 ವರ್ಷದ ವೃದ್ಧೆಯ ಶವ ಅದಲು ಬದಲು ಆಗಿದೆ. ಕಳೆದ ಶನಿವಾರ ಮೃತ ಮಹಿಳೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂತ್ಯ ಸಂಸ್ಕಾರ ಮಾಡಿ ಮನೆಯಲ್ಲಿ ಕುಳಿತಿರುವಾಗಲೇ ಆಸ್ಪತ್ರೆಯಿಂದ ಮತ್ತೊಂದು ದೂರವಾಣಿ ಕರೆ ಬಂದಿದೆ. ನಿಮ್ಮ ಶವ ಇನ್ನೂ ತೆಗೆದುಕೊಂಡು ಹೋಗಿಲ್ಲ ಏಕೆ? ಕೂಡಲೇ ತೆಗೆದುಕೊಂಡು ಹೋಗಿ ಎಂದು ಜಿಲ್ಲಾ ಆಸ್ಪತ್ರೆಯ ಸಿಬ್ಬಂಧಿಗಳು ಕರೆ ಮಾಡಿದ್ದಾರೆ.
ದೂರವಾಣಿ ಕರೆಯಿಂದ ತಬ್ಬಿಬ್ಬಾದ ಮೃತ ಮಹಿಳೆ ಸಂಬಂಧಿಗಳು ಈಗ ಗೊಂದಲದಲ್ಲಿದ್ದಾರೆ.ನಾವು ಈ ಹಿಂದೆ ಅಂತ್ಯ ಸಂಸ್ಕಾರ ಮಾಡಿದ್ದು ಯಾರ ಶವ ಎಂದು ಮೃತರ ಸಮಂಧಿಗಳು ಈಗ ಗೊಂದಲದಲ್ಲಿದ್ದಾರೆ.
ಹಾಗಾದ್ರೆ ಅಂತ್ಯ ಸಂಸ್ಕಾರ ಮಾಡಿದ ಶವ ಯಾರದ್ದು ಎನ್ನುವ ಗೊಂದಲ ಎದುರಾಗಿದ್ದು,ಗೊಂದಲದಿಂದಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ.
ಶವ ಇದೆ ತೆಗೆದುಕೊಂಡು ಹೋಗಿ ಅಂತಿರುವ ಬಿಮ್ಸ್ ಸಿಬ್ಬಂದ್ಧಿಗಳು, ಗೊಂದಲ ಬಗೆಹರಿಸುವಂತೆ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು,ಸಮಸ್ಯೆ ಬಗೆ ಹರಿಸುವಂತೆ ಮೃತರ ಸಮಂಧಿಗಳು ಎಪಿಎಂಸಿ ಪೋಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.