ಬೆಳಗಾವಿ- ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃಧ್ದಿಯನ್ನು ನಿರ್ಲಕ್ಷ ಮಾಡಿದ್ದನ್ನು ಖಂಡಿಸಿ, ಉತ್ತರ ಕರ್ನಾಟಕ ಅಭಿವೃದ್ದ ವೇಧಿಕೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಮಾಡಬೇಕಾ ಬೇಡವಾ ಎಂದು ಜನಾಭಿಪ್ರಾಯಕ್ಕೆ ಮುಂದಾಗಿದೆ.
ಹೌದು ಕರ್ನಾಟಕ ಏಕಿಕರಣ ವಾಗಿ 5 ದಶಕಗಳು ಕಳೆದರು ಆಡಳಿತಕ್ಕೆ ಬಂದ ಸರ್ಕಾರಗಳು ಉತ್ತರ ಕರ್ನಾಟಕದ 13 ಜಿಲ್ಲೆಗಳ ಅಭಿವೃದ್ದಿಯನ್ನು ಸಂಪೂರ್ಣ ನಿರ್ಲಕ್ಷ ಮಾಡುತ್ತಾ ಬಂದಿವೆ. ಎಲ್ಲ ಸರ್ಕಾರಗಳು ಉತ್ತರ ದಕ್ಷಣ ಎಂಬ ಬೇದಬಾವದಿಂದ ರಾಜಕಾರಣಿಗಳು ನಮ್ಮನ್ನು ನೋಡುತ್ತಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ಸೌದ ಕಟ್ಟಿಸಿದ್ದರು ಸರ್ಕಾರ ಇಲ್ಲಿ ಯಾವ ಇಲಾಖೆನ್ನು ಸ್ಥಳಾಂತರ ಮಾಡಿಲ್ಲ. ಹೀಗೆ ಒಂದಲ್ಲಾ ಎರಡಲ್ಲಾ ಅನೇಕ ಬಾರಿ ನಮ್ಮ ಉತ್ತರ ಕರ್ನಾಟಕವನ್ನು ನಿರ್ಲಕ್ಷ ಮಾಡುತ್ತಲೆ ಬಂದಿವೆ. ನಾವು ಸಹ ಹೋರಾಟ ಮಾಡಿದರು ಸರ್ಕಾರಗಳು ಕುಂಭಕರ್ಣನ ನಿದ್ದೆಗೆ ಜಾರಿವೆ. ಇದರಿಂದಲೆ ನಾವು ರೋಷಿ ಹೋಗಿದ್ದು ನಾವು ಎರಡನೆ ದರ್ಜಯ ಜನರಂತೆ ದಕ್ಷಣ ಕರ್ನಾಟಕದ ರಾಜಕಾರಣಿಗಳು ಅಧಿಕಾರಿಗಳು ಕಾಣುತ್ತಾ ಇದ್ದಾರೆ. ಇದರಿಂದ ನಾವು ಇವತ್ತು ರೋಷಿ ಹೋಗಿದ್ದು ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಜನಾಭಿಪ್ರಾಯಕ್ಕೆ ಮುಂದಾಗಿದ್ದೆವೆ . ಜನಾಭಿಪ್ರಾಯ ಸಂಗ್ರಹ ಮಾಡಿ ಜನಾಭಿಪ್ರಾಯದಂತೆ ಉತ್ತರ ಕರ್ನಾಟಕ ಪ್ರತೇಕ ರಾಜ್ಯದ ಹೋರಾಟವನ್ನು ತೀವ್ರಗೋಳಿಸುತ್ತೆವೆ ಅಂತಾರೆ ಉತ್ತರ ಕರ್ನಾಟಕ ಅಭಿವೃಧ್ದಿ ವೇದಿಕೆ ಅದ್ಯಕ್ಷ ಭಿಮಪ್ಪಾ ಗಡಾದ್
– ಅಲ್ಲದೆ ಅನೇಕ ದಿನಗಳಿಂದ ಬೆಳಗಾವಿಯಲ್ಲಿಯ ಸುವರ್ಣ ಸೌದದಲ್ಲಿ ಕಾರ್ಯದರ್ಶೀ ಮಟ್ಟದ ಇಲಾಖೆಗಳನ್ನು ಸ್ಥಳಾಂತರ ಮಾಡಿ ಎಂದು ಒತ್ತಾಯ ಮಾಡಿದರು ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ತಿಂಗಳಿಗೊಮ್ಮೆಯಾದ್ರು ಸಚಿವರು ಪ್ರಗತಿ ಪರಿಶಿಲನಾ ಸಭೆಯನ್ನು ಮಾಡಲ್ಲಾ ಇದರಿಂದ ಗೊತ್ತಾಗತ್ತೆ ಸರ್ಕಾರದ ಉತ್ತರ ಕರ್ನಾಟಕ ನಿರ್ಲಕ್ಷ ಮಾಡಿದೆ ಅಂತಾ. ಅಲ್ಲದೆ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಸಹ ಉತ್ತರ ಕರ್ನಾಟಕದಲ್ಲಿ ಇಲಾಖೆಗಳು ಸ್ಥಳಾಂತರ ವಾಗದಂತೆ ತಡೆಗಟ್ಟುತ್ತಿದ್ದಾರೆ. ಆದ್ದರಿಂದ ಉತ್ತರ ಕರ್ನಾಟಕದ ಜನರ ಅಭಿಪ್ರಾಯ ಸಂಗ್ರಹಕ್ಕೆ ಪತ್ರಗಳ ಮುಖಾಂತರ, www.ukhs13.com ಎಂಬ ಸೈಟ್ ಅಲ್ಲಿ ಜನರ ಅಭಿಪ್ರಾಯಕ್ಕೆ ಮುಂದಾಗಿದ್ದವೆ.
ಜನಾಭಿಪ್ರಾಯದ ಆಯ್ಕೆ ಹೀಗೆ ಇದೆ..
1 ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲೇಬೇಕು( )
2 ಅಭಿವೃದ್ದಿ ಮಾಡದಿದ್ದರೆ ಅನಿವಾರ್ಯ ಪ್ರತ್ಯೇಕ ರಾಜ್ಯ ಆಗಲೇಬೇಕು.( )
3 ಯಾವದೇ ಕಾರಣಕ್ಕೂ ಪ್ರತ್ಯೇಕ ರಾಜ್ಯ ಬೇಡ
ಮತ್ತು ವ್ಯೇಕ್ತಿ ಮಾಹಿತಿ ಹೀಗೆ ಪತ್ರ ಮತ್ತು ವೇಬ್ ಸೈಟ್ ಅಲ್ಲಿ ಜನಾಭಿಪ್ರಾಯಕ್ಕೆ ವೇಧಿಕೆ ಮುಂದಾಗಿದೆ.ಒಟ್ಟಾರೆ ಬಂದ ಸರ್ಕಾರಗಳು ಉತ್ತರ ಕರ್ನಾಟಕವನ್ನು ಅಭಿವೃದ್ದಿಯಲ್ಲಿ ನಿರ್ಲಕ್ಷ ಮಾಡುತ್ತಾ ಬಂದ ಹಿನ್ನಲೆ ಪ್ರತ್ಯೇಕ ರಾಜ್ಯದ ಕೂಗು ಇಂದು 13 ಜಿಲ್ಲೆಗೆ ಕಾಡಗಿಚ್ಚಿನಂತೆ ಹರಡಿದೆ. ಅದಕ್ಕೂ ಮುನ್ನ ಸರ್ಕಾರ ಎಚ್ಚತ್ತುಕೊಂಡು ಉತ್ತರ ಕರ್ನಾಟಕದ ಅಭಿವೃದ್ದಿ ಮಾಡಲಿ. ಬೆಳಗಾವಿ ಸುವರ್ಣ ಸೌದದಲ್ಲಿ ಸಚಿವಾಲಯಗಳು ಕಾರ್ಯನಿರ್ವಣೆ ಮಾಡಲಿ. ತಿಂಗಳಿಗೊಂದಾದರು ಸಚಿವ ಸಂಪುಟ ನಡೆಯಲಿ ಹೀಗಾಗುವುದರಿಂದ ಉತ್ತರ ಕರ್ನಾಟಕದ ಜನರಲ್ಲಿ ಬಂದ ಉತ್ತರ ದಕ್ಷಿಣ ಎಂಬ ಬೇದಬಾವವನ್ನು ದೂರ ಮಾಡಲಿ ಅನ್ನುವುದ ನಮ್ಮ ಆಶಯ