ಸಮಾಜ ಸೇವಕ ಭೀಮಪ್ಪ ಗಡಾದ ಅವರಿಗೆ ಪ್ರಾಣ ಬೆದರಿಕೆ
ಬೆಳಗಾವಿ- ಸಮಾಜ ಸೇವಕ ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಅನಾಮಧೇಯ ಮರಾಠಾ ಯುವಕ ಮಂಡಳವೊಂದು ಪತ್ರ ಬರೆದು ಪ್ರಾಣ ಬೆದರಿಕೆ ಹಾಕಿದ ಘಟನೆ ನಡೆದಿದೆ
ಪತ್ರವನ್ನು ನಿಪ್ಪಾಣಿ ಪಟ್ಟಣದಿಂದ ಭೀಮಪ್ಪ ಗಡಾದ ಅವರಿಗೆ ಪೋಸ್ಟ ಮಾಡಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಲಿನ ಭಗ್ವಾ ಧ್ವಜವನ್ನು ತೆಗೆದಾಗ ಸುಮ್ಮನಿದ್ದೇವು,ಯಳ್ಳೂರಿನ ಮಹಾರಾಷ್ಟ್ರ ಫಲಕ ತೆರವು ಮಾಡಿದಾಗ ಸುಮ್ಮನಿದ್ದೇವು ಈಗ ನೀವು ಕನ್ನಡ ಧ್ವಜದ ಮಾನ್ಯತೆಗಾಗಿ ನಡೆಸಿರುವ ಹೋರಾಟ ನಿಲ್ಲಿಸದಿದ್ದರೆ ನಿಮ್ಮನ್ನು ರಾಜಕೀಯವಾಗಿ ಸಾಮಾಜಿಕವಾಗಿ ಮುಗಿಸಿಬಿಡುತ್ತೇವೆ ಇನ್ನು ಮುಂದೆ ನಿಮಗೆ ಉಳಿಗಾಲವಿಲ್ಲ ಎಂದು ಮರಾಠಾ ಯುವಕ ಮಂಡಳ ಭೀಮಪ್ಪ ಗಡಾದ ಅವರಿಗೆ ಪ್ರಾಣ ಬೆದರಿಕೆ ಹಾಕಿದೆ
ನಿನ್ನೆ ಮದ್ಯಾಹ್ನ ನಾಡದ್ರೋಹಿ ಗಳು ಬರೆದ ಧಮಕಿ ಪತ್ರ ಭೀಮಪ್ಪ ಗಡಾದ ಅವರ ಕೈಸೇರಿದ್ದು ತಮಗೆ ರಕ್ಷಣೆ ನೀಡುವಂತೆ ಗಡಾದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ