ಬೆಳಗಾವಿ-ರಾಷ್ಟ್ರಪತಿಗಳ ಉದ್ಯಾನವನ ನಿರ್ವಹಣೆಗೆ ದುಂದುವೆಚ್ಚ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಆರೋಪಿಸಿದ್ದು ಮೂರು ವರ್ಷದ ಅವಧಿಯಲ್ಲಿ 12ಕೋಟಿ ರೂ ಉದ್ಯಾನವನಕ್ಕೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ಮಾಹಿತಿಹಕ್ಕಿನಲ್ಲಿ ಹೊರಹಾಕಿದ್ದಾರೆ
ಮಾಹಿತಿ ಹಕ್ಕಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ಪೋಲಾಗುತ್ತಿರುವುದು ಬಹಿರಂಗ ಮಾಡಿರುವ ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಉದ್ಯಾನವನಕ್ಕೆ ದುಂದು ವೆಚ್ಚ ಮಾಡಲಾಗಿದೆ
ಹೂದೋಟ ನಿರ್ವಹಣೆಗೆ ಅವಶ್ಯವಿರುವ ಯಂತ್ರೋಪಕರಣಗಳಿಗೆ 1.46ಕೋಟಿ ವೆಚ್ಚ
12ಕೋಟಿ ನಿರ್ವಹಣಾ ವೆಚ್ಚವಾಗಿದ್ದುಇದರಲ್ಲಿ ಕೆಲಸಗಾರರ ವೆಚ್ಚ ಸೇರಿಸಿಲ್ಲ ಎಂದು ಗಡಾದ ತಿಳಿಸಿದ್ದಾರೆ
2018ರ ಪೆಬ್ರವರಿ ಒಂದೇ ತಿಂಗಳಲ್ಲಿ ಕೆಲಸಗಾರರಿಗೆ 72ಲಕ್ಷ ರೂ ವೇತನ ಪಾವತಿ ಮಾಡಲಾಗಿದೆ 2015-16ರಲ್ಲಿ 3.73ಕೋಟಿ ವೆಚ್ಚವಾಗಿದ್ದು, 2016-17ರಲ್ಲಿ 4.56ಕೋಟಿ ಖರ್ಚು, 2017-18ರಲ್ಲಿ 4.40ಕೋಟಿ ಖರ್ಚಾಗಿದೆ
ರಾಷ್ಟ್ರಪತಿ ಭವನದ ಉದ್ಯಾನವನಕ್ಕೆ ದೊಡ್ಡ ಮಟ್ಟದಲ್ಲಿ ಹಣ ಖರ್ಚಾಗಿದರ ಕುರಿತು ರಾಷ್ಟ್ರಪತಿಗಳಿಗೆ ಪತ್ರ
ಪತ್ರ ಬರೆಯುವುದಾಗಿ ಬೆಳಗಾವಿಯಲ್ಲಿ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಹೇಳಿದ್ದಾರೆ