ಬೆಳಗಾವಿ. ಉತ್ತರ ಕರ್ನಾಟಕದಲ್ಲಿ ಒಂದು ಗಾದೆ ಮಾತುಇದೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತಾ ಮಾತಿದೆ. ಸರ್ಕಾರ ಶಾಸಕರ ವೇತನ ಮತ್ತು ವಿವಿಧ ಭತ್ಯೆಗಳ ಹೆಸರಲ್ಲಿ ಕೊಟ್ಯಾಂತರ ರೂಪಾಯಿ ಹಣ ಖರ್ಚು ಮಾಡುವ ಮಾಹಿತಿಯನ್ನು ಸಮಾಜ ಸೇವಕ ಭೀಮಪ್ಪ ಗಡಾದ್ ಹೊರ ಹಾಕಿದ್ದಾರೆ.
ಹಿಂದಿನ ಸಿಎಂ ಸಿದ್ದರಾಮ್ಯನ ಸರ್ಕಾರ ಶಾಸಕರ ವೇತನ ಪ್ರಯಾನ ಭತ್ಯೆ ವಿದೇಶಿ ಪ್ರವಾಸ, ರೈಲ್ವೆ ಪ್ರಯಾಣ ಭತ್ಯೆ ಮೆಡಿಕಲ್ ಭತ್ಯೆ ಹೀಗೆ ವಿವಿಧ ಭತ್ಯೆಗಳಿಗಾಗಿ ಸರ್ಕಾರದ ಖಜಾನೆಯಿಂದ 235 ಕೋಟಿ ರೂಪಾಯಿ ಖರ್ಚು ಮಾಡಿರುವ ವಿಷಯವನ್ನು ಭೀಮಪ್ಪ ಗೆಅದ್ ಬಹಿರಂಗ ಪಡಿಸಿದ್ದಾರೆ.
ಪ್ರತಿ ತಿಂಗಳು ಶಾಸಕರಿಗೆ ನೀಡಲಾಗುತ್ತಿರುವ ವೇತನ ಮತ್ತು ಭತ್ಯೆ ಗಳ ರೇಟ್ ನೋಡಿದ್ರೆ, ಬೆಚ್ಚಿ ಬೀಳ್ತಿರಾ.
ಪ್ರತಿ ತಿಂಗಳ ವೇತನ 25 ಸಾವಿರ,
ದೂರವಾಣಿ ವೆಚ್ಚ..20 ಸಾವಿರ
ಕ್ಷೇತ್ರದ ಭತ್ಯೆ 40 ಸಾವಿರ.
ಅಂಚೆ ವೆಚ್ಚ 5 ಸಾವಿರ
ಕೊಠಡಿ ಮತ್ತು ಪಿಎ ವೆಚ್ಚ 10 ಸಾವಿರ
ಪ್ರಯಾಣ ಭತ್ಯೆ. ಪ್ರತಿ ಕಿಮಿಗೆ 25 ರೂ
ದಿನದ ಭತ್ಯೆ 2000
ಹೊರ ರಾಜ್ಯದ ಪ್ರಯಾಣ ಭತ್ಯೆ 2500
ಹೋಟೆಲ್ ವಾಸ್ತವ್ಯ.. 5000
ಹೀಗೆ ರಾಜ್ಯ ಸರ್ಕಾರ ಸಾರ್ವಜನಿಕ ಹಣ ಪೋಲು ಮಾಡುತ್ತಿರುವ ಆತಂಕಕಾರಿ ಸಂಗತಿಯನ್ನು ಭೀಮಪ್ಪ ಗಡಾದ ಬಯಲಿಗೆ ಎಳೆದಿದ್ದಾರೆ..