ಬೆಳಗಾವಿ- ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ಜಮೀನಿಗೆ ಪರ್ಯಾಯವಾಗಿ ಸಂತ್ರಸ್ತರಿಗೆ ನೀಡಲು ಸರ್ಕಾರ ಕಾಯ್ದಿರಿಸಿದ್ದ 51 ಎಕರೆ ಜಮೀನನ್ನು ಸಂತ್ರಸ್ತರಿಗೆ ದೊರಕದೇ ಕೆಲವರು ಆಕ್ರಮವಾಗಿ ಸಂತ್ರಸ್ತರ ಜಮೀನನ್ನು ಗುಳುಂ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿ ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿರುವ ಭೀಮಪ್ಪ ಗಡಾದ ಯಮಕನಮರ್ಡಿ ಕ್ಷೇತ್ರದ ಇಸ್ಲಾಂಪೂರದಲ್ಲಿ ಸಂತ್ರಸ್ತರಿಗೆ ನೀಡಲು 51 ಎಕರೆ 20 ಗುಂಟೆ ಜಮೀನನ್ನು ಸರ್ಕಾರ ಕಾಯ್ದಿರಿಸಿತ್ತು ಸಂತ್ರಸ್ತರಿಗೆ ದೊರಕಬೇಕಾಗಿದ್ದ ಈ ಜಮೀನು ಈಗ ಕೆಲವು ಪ್ರಭಾವಿಗಳ ಪಾಲಾಗಿದ್ದು ಈ ಕುರಿತು ತಹಶೀಲ್ದಾರರೇ ವರದಿ ನೀಡಿದ್ದು ಸರ್ಕಾರ ಕೂಡಲೇ ಈ ಜಮೀನು ಸ್ವಾಧೀನ ಪಡಿಸಿಕೊಂಡು ಈ ಜಮೀನನ್ನು ಸಂತ್ರಸ್ತರಿಗೆ ದೊರಕಿಸಿ ಕೊಡಬೇಕೆಂದು ಭೀಮಪ್ಪ ಗಡಾದ ಒತ್ತಾಯ ಮಾಡಿದ್ದಾರೆ.
51 ಎಕರೆ 20 ಗುಂಟೆ ಜಮೀನು ಗುಳುಂ ಮಾಡಿದವರು ಸಂತ್ರಸ್ತರ ಪಟ್ಟಿಯಲ್ಲಿ ಇಲ್ಲವೇ ಇಲ್ಲ ಈ ಜಮೀನು ಪಡೆದುಕೊಂಡವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಿ ಜಮೀನನ್ನು ತಮ್ಮ ಹೆಸರಿನಲ್ಲಿ ನೊಂದಾಯಿಸಿ ಸರ್ಕಾರದ ಕಣ್ಣಿಗೆ ಮಣ್ಣೆರೆಚಿದವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ ಈ ಖೊಟ್ಟಿ ವ್ಯವಹಾರಕ್ಕೆ ಸಾಥ್ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ
ಯಮಕನಮರ್ಡಿ ಕ್ಷೇತ್ರದ ಇಸ್ಲಾಂಪೂರದಲ್ಲಿ ಇರುವ ಅತ್ಯಂತ ಬೆಲೆಬಾಳುವ ಈ ಜಮೀನನ್ನು ಲಪಟಾಯಿಸಿದ ಬಗ್ಗೆ ತಹಶೀಲ್ದಾರರು ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ನೀಡಿದ್ದು 51 ಎಕರೆ ಜಮೀನು ,7 ಜನರ ಹೆಸರಿಗೆ ಆಕ್ರಮವಾಗಿ ವರ್ಗಾವಣೆ ಮಾಡಿರುವ ಅಂಶ ಬೆಳಕಿಗೆ ಬಂದಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕೆಂದು ಭೀಮಪ್ಪಾ ಗಡಾದ ಆಗ್ರಹಿಸಿದ್ದಾರೆ